ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನ ಬಹುವಲಯವಾರು ಅಭಿವೃದ್ದಿ ಯೋಜನೆಯಡಿ ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ನಗರ ಹಾಗೂ ಗಂಗಾವತಿ ಪಟ್ಟಣದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬುದ್ಧ ಮತ್ತು ಪಾರ್ಸಿ ಯುವಕ/ಯುವತಿಯರಿಗೆ ಉದ್ಯೋಗವಕಾಶ, ಸ್ವಯಂ ಉದ್ಯೋಗಗಳನ್ನು ಕಲ್ಪಿಸುವಂತಹ ಹಾಗೂ ಸ್ಥಳೀಯ ಕಲೆ ಮತ್ತು ಕೌಶಲ್ಯತೆ ಹೊಂದುವ ತರಬೇತಿಗಳಿಗಾಗಿ ಎಸಿಸಿಪಿಎಲ್ ಸಂಸ್ಥೆಯ ವತಿಯಿಂದ ತರಬೇತಿ ನೀಡುವ ಕುರಿತು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರಿಹಂತ ಕಂಪ್ಯೂಟರ್ಸ್, ಬಿ.ಟಿ.ಪಾಟೀಲ್ ನಗರ, ಕೊಪ್ಪಳ, ಎಸ್.ಎಸ್.ಏಜ್ಯೂಕೇಶನ್ ಸೊಸೈಟಿ, ಆಜಾದ್ ಸರ್ಕಲ್ ಕೊಪ್ಪಳ, ಹುಮಾ ವುಮೇನ್ ಮಿನೊರಿಟೀಸ್ ಟ್ರಸ್ಟ್ ವಾರ್ಡ್ ನಂ.27, ಜಂತಕಲ್ ಬೈಪಾಸ್ ರೋಡ್, ಗಂಗಾವತಿ ಹಾಗೂ ಎನ್-ಟೆಕ್ ಕಂಪ್ಯೂಟರ್ ಏಜ್ಯೂಕೇಶನ್ ಸೆಂಟರ್, ಖಾದ್ರಿ ಕಾಂಪ್ಲೇಕ್ಸ್ ಪೀರ್ಜಾದ್ ರೋಡ್ ಗಂಗಾವತಿ ಈ ತರಬೇತಿ ಸಂಸ್ಥೆಗಳಿಂದ ನಿಗದಿತ ಅರ್ಜಿ ಪಡೆದು ಆ.30 ರೊಳಗಾಗಿ ಸಲ್ಲಿಸಬಹುದಾಗಿದೆ.
ಕೋರ್ಸಿನ ವಿವರ ಇಂತಿದೆ. ಬಿಪಿಓ ನೊನ್‍ವೈಸ್ ಬ್ಯುಸಿನೆಸ್ & ಕಂಪ್ಯೂಟರ್ ಫಂಡಮೆಂಟಾಲ್ ಎಂ.ಎಸ್.ಆಫೀಸ್ ಹಾಗೂ ಇಂಟರ್‍ನೆಟ್, ಬಿಪಿಓ ವೈಸ್ ಬ್ಯುಸಿನೆಸ್ & ಕಂಪ್ಯೂಟರ್ ಫಂಡಮೆಂಟಾಲ್ ಎಂ.ಎಸ್.ಆಫೀಸ್ ಹಾಗೂ ಇಂಟರ್‍ನೆಟ್, ಕಂಪ್ಯೂಟರ್ ಫಂಡಮೆಂಟಾಲ್ ಎಂ.ಎಸ್.ಆಫೀಸ್, ಇಂಟರ್‍ನೆಟ್ ಹಾಗೂ ಟ್ಯಾಲಿ, ಡೆಸ್‍ಟಾಪ್ ಪಬ್ಲಿಷಿಂಗ್ ಹಾಗೂ ವೆಬ್ ಡಿಸೈನಿಂಗ್, ಕಂಪ್ಯೂಟರ್ ಹಾರ್ಡ್‍ವೇರ್ & ಕಂಪ್ಯೂಟರ್ ನೆಟ್‍ವರ್ಕಿಂಗ್, ರಿಟೈಲ್ ಆಪರೇಷನ್ ಹಾಗೂ ಟ್ಯಾಲಿ, ಹಾಸ್ಪಿಟಾಲಿಟಿ ಅಸಿಸ್ಟೆಂಟ್ ಹಾಗೂ ರಿಟೈಲ್ ಆಪರೇಷನ್, ಕಂಪ್ಯೂಟರ್ ಫಂಡಮೆಂಟಾಲ್ ಎಂ.ಎಸ್.ಆಫೀಸ್, ಇಂಟರ್‍ನೆಟ್, 2 ಡಿ ಫ್ರೀ ಪ್ರೋಡಕ್ಷಿನ್ ಅನಿಮೇಟರ್ ಈ ತರಬೇತಿಗಳಿಗೆ ಕನಿಷ್ಟ ಎಸ್.ಎಸ್.ಎಲ್.ಸಿ. ಹಾಗೂ ಐಟಿಐ ಉತ್ತೀರ್ಣ/ಅನುತ್ತೀರ್ಣರಾದವರಿಗೆ ತರಬೇತಿ ನೀಡಲಾಗುವುದು.
ಈ ಯೋಜನೆಯು ಕೊಪ್ಪಳ ನಗರ ಹಾಗೂ ಗಂಗಾವತಿ ಪಟ್ಟಣದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರ ಯುವಕ/ಯುವತಿಯರಿಗೆ ಮಾತ್ರ ಅನ್ವಯಿಸುತ್ತದೆ. ಈ ಯೋಜನೆಯಡಿ ಅಭ್ಯರ್ಥಿಯು 18 ರಿಂದ 35 ವರ್ಷದವರಾಗಿರಬೇಕು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಬಗ್ಗೆ ತಹಶೀಲ್ದಾರರಿಂದ ಪಡೆದ ಜಾತಿ, ಆದಾಯ ಪ್ರಮಾಣ ಪತ್ರದ ದೃಢೀಕೃತ ಪ್ರತಿ (ವಾರ್ಷಿಕ ಆದಾಯ ಮಿತಿ ರೂ.2.00 ಲಕ್ಷ ಮೀರಿರಬಾರದು.) ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಬಿಸಿಎಂ ಅಧಿಕಾರಿ ಕಲ್ಲೇಶ ಅವರು ತಿಳಿಸಿದ್ದಾರೆ.
0 comments:
Post a Comment