ಕೊಪ್ಪಳ-20- ಗವಿಮಠದ ಪ್ರಥಮ ಪೀಠಾಧಿಪತಿಗಳಾದ ಶ್ರೀ. ಮ.ನಿ.ಪ್ರ.ಜ ರುದ್ರಮುನೀಶ್ವರ ಇವರು ಕಾಶಿ ವಿಶ್ವನಾಥನೇ ಅವತಾರತೊಟ್ಟು ಕಾಶಿಯಲ್ಲಿ ಜಂಗಮವಾಡಿ ಮಠದ ಪೂಜ್ಯರಾದ ಶ್ರೀ ವಿಶ್ವರಾಧ್ಯಶಿವಾಚಾರ್ಯರ ಸನ್ನಿಧಾನದಲ್ಲಿ ಓರ್ವ ಜಂಗಮ ೫ ವರ್ಷದ ಬಾಲಕನನ್ನು ಕರೆದುಕೊಂಡು ಬಂದು ಆ ಮಠದಲ್ಲಿ ಬಿಡುತ್ತಾರೆ. ಮುಂದೆ ಆ ಬಾಲಕ ಜಗದ್ಗುರುಗಳ ಮಠದಲ್ಲಿ ಬೆಳೆದು ವೇದ, ಶಾಸ್ತ್ರ, ಸಂಸ್ಕೃತದಲ್ಲಿ ಪಾರಂಗತನಾಗಿ ಬೆಳೆದು ದೊಡ್ಡವನಾಗುತ್ತಾನೆ. ವಿಶ್ವರಾಧ್ಯ ಶಿವಾರ್ಚಾರು ಅವನಿಗೆ ರುದ್ರಮುನಿಎಂದು ನಾಮಕರಣಮಾಡಿ ಮುಂದೆ ನಿರಂಜನ ಜಂಗಮತ್ವವನನು ಬೋಧನೆ ಮಾಡುತ್ತಾರೆ. ಜಂಗಮ ಸಂಸಾರ ಮಾಡಿ, ಗುರುಧೀಕ್ಷೆಮಾಡಿ, ಅವರಿಗೆ ಶ್ರೀ. ಮ.ನಿ. ಪ್ರ. ಜ ರುದ್ರಮುನೀಶ್ವರ ಮಹಾಸ್ವಾಮಿಗಳು ಎಂದು ಘೋಶಿಸುತ್ತಾರೆ. ಅಂದಿನಿಂದ ನಿರಂಜನ ಜಂಗಮ ಮೂರ್ತಿಗಳು ದೇಶ ಸಂಚಾರ ಕೈಗೊಳ್ಳುತ್ತಾರೆ. ಹಂಪಿ, ಕಮಲಾಪೂರದಿಂದ ತುಂಗಭದ್ರಾ ನದಿಯನ್ನು ದಾಟಿ, ಕೊಪ್ಪಳ ಗುಡ್ಡಕ್ಕೆ ಬರುತ್ತಾರೆ, ಕೊಪ್ಪಳ ಗುಡ್ಡದ ಗವಿಯನ್ನು ಕಂಡು ಅತ್ಯಾನಂದವಾಗಿ, ಆ ಸಮಯದಲ್ಲಿ ಕೋಪಣದ ನಿಂಗಣ್ಣಗೌಡರ ಕಣ್ಣಿಗೆ ಕಾಣಿಸುತ್ತಾರೆ. ಅವರು ಮತ್ತು ಜನರು ಕೂಡಿಕೊಂಡು ಗವಿಯನ್ನು ಸ್ವಚ್ಛಗೊಳಿಸುತ್ತಾರೆ. ಗೌಡರು ಎಲ್ಲರೀತಿಯ ಅನುಕೂಲತೆ ಮಾಡಿಕೊಡುತ್ತಾರೆ. ತಂಡೋಪ ತಂಡವಾಗಿ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಆ ಸಮಯದಲ್ಲಿ ಮಸ್ಕಿಯ ಹೋಳಿ ಹಂಪಯ್ಯ ಶರಣ ಶ್ರೀಗಳ ಸೇವೆಯಲ್ಲಿರುತ್ತಾರೆ. ಅವರ ನೇತೃತ್ವದಲ್ಲಿ ೧೦೦೮ ನೇ ಇಸ್ವಿಯಲ್ಲ್ಲಿ ಮಠವನ್ನು ಕಟ್ಟಿ ಪೂರ್ಣಗೊಳಿಸುತ್ತಾರೆ.
೧೧ ನೇ ಪೀಠಾದಿಪತಿಯಾದ ಶ್ರೀ ಗವಿಸಿದ್ದೇಶ್ವರರು ಇರಲಿಕ್ಕಾಗಿ ಅನೇಕ ಭಕ್ತಜನರು ಆಗಮಿಸುತ್ತಾರೆ. ಗವಿಸಿದ್ದೇಶ್ವರ ಪೂಜ್ಯರು ಮಠವನ್ನು ಕಟ್ಟುವುದಕ್ಕೆ ಪ್ರಾರಂಭಿಸುತ್ತಾರೆ. ದೊಡ್ಡ ಬಂಡೆಗಳನ್ನು ಹೊಡೆದರುಳಿಸುತ್ತಾರೆ. ಆ ಸಮಯದಲ್ಲಿ ಒಡ್ಡರವನಿಗೆ ಕಾಲು ಮುರಿದು ತಮ್ಮ ಪಾದೋದಕವನ್ನು ಸೇವಕನ ಕೈಯಲ್ಲಿ ಕೊಟ್ಟು ಕಳಿಸುತ್ತಾರೆ, ಪಾದೋದಕ ಸಿಂಪಡಿಸಿ ಕುಡಿಸುತ್ತಾರೆ. ತಕ್ಷಣವೇ ಅವನು ಮೊದಲಿನಂತಾಗುತ್ತಾನೆ. ಅವರೆಲ್ಲರೂ ಗವಿಸಿದ್ದೇಶ್ವರನನ್ನು ಕೊಂಡಾಡುತ್ತಾರೆ.
ಮಠವನ್ನು ಕಟ್ಟುವ ಕೆಲಸಗಾರರು ಬಹಳ ಜನವಿರುತ್ತಾರೆ. ದುಡಿದುಣ್ಣಬೇಕು ದುಡಿಯದಿದ್ದರೆ ಬಹಳ ಕಷ್ಟ ಅಂಥ ಸಮಯದಲ್ಲಿ ಒಂದು ದಿವಸ ಮಠ ಕಟ್ಟಿಸುವ ಮೇಲ್ವಿಚಾರನು ಅವರಿಗೆ ದುಡ್ಡು ಕೊಡುವುದಿಲ್ಲ. ಈ ದಿನ ಕೂಲಿ ಇಲ್ಲ, ನಾಳೆ ಬನ್ನಿರಿ ಎಂದು ಹೇಳಿ ಹೋದ, ಆದರೆ ಅವರು ಎಲ್ಲೂ ಹೋಗಲಿಲ್ಲ ಗುಡ್ಡದ ಕೆಳಗೆ ಕುಳಿತುಕೊಂಡರು. ಆ ದಿನದ ಕೂಲಿ ದುಡ್ಡು ಇರದಿದ್ದರೆ ಮನೆಯಲ್ಲಿ ಹೆಂಡರು ಮಕ್ಕಳು ಉಪವಾಸ, ಬಹಳ ಕಷ್ಠದ ದಿನಗಳು, ಮನೆಗೆ ಹೋಗಿ ಕಾಳು ಕಡಿ ತರಬೇಕು. ಬರಿಗೈಲಿ ಹೇಗೆ ಹೋಗಬೇಕು ಎಂದು ಎಲ್ಲರೂ ಚಿಂತಿಸುತ್ತಿರುತ್ತಿದ್ದರು. ಇದನ್ನು ತಿಳಿದ ಗವಿಸಿದ್ದೇಶ್ವರ ಗುಡ್ಡದ ಕೆಳಗೆ ಇಳಿದು ಬರುತ್ತಾರೆ. ಸಂಜೆಯಾಗಿದೆ ಯಾರು ಹೋಗಿಲ್ಲ, ಅವರನ್ನು ನೋಡಿ ಅಲ್ಲೆ ಕೆಳಗೆ ಬಿದ್ದ ಕಲ್ಲಿನ ಚೂರುಗಳನ್ನು ತೆಗೆದುಕೊಂಡು, ವಸ್ತ್ರದಲ್ಲಿ ಕಟ್ಟಿ, ಇಗೋ ತೆಗೆದುಕೊಳ್ಳಿರಿ ನಿಮ್ಮ ಕೂಲಿ ಮನೆಗೆ ಹೊಗಿ ವಸ್ತ್ರವನ್ನು ಬಿಚ್ಚಿನೊಡಿರಿ ಎಂದು ಹೇಳಿ ಗವಿಯಲ್ಲಿ ಹೋದರು, ಅವರೆಲ್ಲರೂ ಇದರಲ್ಲಿ ಕಲ್ಲುಕಟ್ಟಿದ್ದಾರೆ, ನಾವೇ ನೋಡಿದ್ದೇವೆ ಏನಿದಾಶ್ವರ್ಯವೆಂದು ಮನೆಯಲ್ಲಿ ಹೋಗಿ ಆ ಗಂಟನ್ನು ಬಿಚ್ಚಿನೋಡುತ್ತಾರೆ, ಸರಿಯಾಗಿ ಆ ದಿನದ ಕುಲಿ ೨೧ರೂ ಗಳಿರುತ್ತವೆ. ಇದನ್ನು ಕಂಡು ಎಲರಿಗೂ ಅತ್ಯನಂದವಾಗುತ್ತದೆ. ಎಲ್ಲರೂ ಮೂರು ದಿವಸ ನನ್ನ ಕೂಲಿ ಸರಿಯಿದೆ ನಿನ್ನ ಕೂಲಿ ಸರಿಯಿದೆ ಎಂದು ಹರ್ಷಿತರಾಗಿ. ಸಿದ್ದೇಶ್ವರನ್ನು ಕೊಂಡಾಡುತ್ತಾರೆ. (ಮುಮದುವರೆಯುತ್ತದೆ. .)

0 comments:
Post a Comment