PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ- ನಗರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಬಿ.ಎಂ.ಎಂ.ರೋಟರಿ ತಾಲೂಕು ಮಟ್ಟದ ಟ್ಯಾಲೆಂಟ್ ಶೋನ ಕೊನೆಯ ಹಂತದ ವಿಕಲಚೇತನರ ಸ್ಪರ್ದೆಗೆ ನಗರಸಭೆ ಅಧ್ಯಕ್ಷೆ ರೋಹಿಣಿ ವೆಂಕಟೇಶ್ ಚಾಲನೆ ನೀಡಿ ರೋಟರಿ ಹಾಗೂ ಇನ್ನರ್‌ವೀಲ್ ಸಂಸ್ಥೆಗಳು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯೊದಗಿಸುತ್ತಿರುವ ಟ್ಯಾಲೆಂಟ್ ಶೋ ವಿನೂತನ ಕಾರ್ಯಕ್ರಮವು ಪ್ರಶಂಸಗೆ ಪಾತ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಸ್ವರಚಿತ ಕವನ ವಾಚಿಸಿದ ಅಂಜಲಿ ಮತ್ತು ವೆಂಕಟೇಶ್, ಗಂಗಂ ಹಾಡಿಗೆ ಹೆಜ್ಜೆ ಹಾಕಿದ ರಫೀಕ್, ಲಲಿತಾ ಸಹಸ್ರನಾಮ ಹೇಳಿದ ಬಾಣದ ಗಂಗಮ್ಮ, ಪೊಲೀಯೋ ಪೀಡಿತರಾದ ಶರಣಯ್ಯ ಮತ್ತು ಚನ್ನಬಸವರಾಜರ ಸಾಹಸ ಪ್ರದರ್ಶನ, ಭರತನಾಟ್ಯ ನೃತ್ಯದಿಂದ ತೀರ್ಪುಗಾರರಿಗೆ ಸೋಜಿಗ ತರಿಸಿದ ಶಿವಕುಮಾರ್, ಸ್ಪರ್ದೆಯಲ್ಲಿ ಜಾನಪದ, ದೇಶಭಕ್ತಿ, ಸಿನಿಮಾ, ಭಾವಗೀತೆಗಳು ರಾರಾಜಿಸಿದವು.  ಒಟ್ಟು ೩೨ ವಿಕಲಚೇತನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.  ವಿವಿಧ ಅಂಗಗಳ ವೈಪಲ್ಯವುಳ್ಳ ನಾಲ್ಕು ವರ್ಷದ ಶಾಕೀರಾ ಮತ್ತು ತಂಡದವರು ನಡೆಸಿದ ವೇಷಭೂಷಣ ಸ್ಪರ್ಧೆಗೆ ನೋಡಿಗರ ಕಣ್ಣುಗಳು ತೇವವಾದವು.
ತಿರುಪತಿ ನಾಯ್ಡು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಧ್ಯಕ್ಷ ಕೆ.ಸೈಯದ್ ಮಹ್ಮದ್, ಕಾರ್ಯದರ್ಶಿ ಡಾ|| ಮುನಿವಾಸುದೇವ ರೆಡ್ಡಿ, ಇನ್ನರ್‌ವೀಲ್‌ನ ಅಧ್ಯಕ್ಷೆ ನಂದಿನಿ ಚಿಕ್ಕಮಠ್, ಕಾರ್ಯದರ್ಶಿ ರೇಖಾ ಪ್ರಕಾಶ್, ಟ್ಯಾಲೆಂಟ್ ಶೋ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ ಉಪಸ್ಥಿತರಿದ್ದರು.
ಇಂದು ಸಮಾರೋಪ :  ಬಿ.ಎಂ.ಎಂ. ರೋಟರಿ ಟ್ಯಾಲೆಂಟ್ ಶೋನ ಸಮಾರೋಪ ಸಮಾರಂಭ ನಾಳೆ ದಿ.೨೩ರ ಸಂಜೆ ೬ ಗಂಟೆಗೆ ರೋಟರಿ ಮೈದಾನದಲ್ಲಿ ನಡೆಯಲಿದ್ದು  ಅಧ್ಯಕ್ಷತೆಯನ್ನು ಬಿ.ಎಸ್. ಆನಂದ್ ಸಿಂಗ್ ವಹಿಸಲಿದ್ದಾರೆ. .
    ಕಳೆದ ಜ.೧೯ ರಿಂದ ದಿ.೨೨ರವರೆಗೆ ನಡೆದ ಟ್ಯಾಲೆಂಟ್ ಶೋನ ನಾಲ್ಕು ಹಂತಗಳಲ್ಲಿ ಆಯ್ಕೆಯಾದವರಿಗೆ ಅಂತಿಮ ಸುತ್ತಿನ ಸ್ಪರ್ಧೆಯು ನಾಳೆ ನಡೆಯಲಿದ್ದು ಪ್ರತಿ ವಿಭಾಗದಲೂ ಮೂವರು ವಿಜೇತರಿಗೆ ೫ಸಾವಿರ, ೩ಸಾವಿರ ಹಾಗೂ ೨ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕ ನೀಡಿ ಸನ್ಮಾನಿಸಲಾಗುವುದು.

Advertisement

0 comments:

Post a Comment

 
Top