ಕೊಪ್ಪಳ, ಜ.೨೫ (ಕ ವಾ) ರೋಗಗಳ ಭಂಡಾರವಾಗಿರುವ ಮದ್ಯ, ಮಾದಕಗಳ ವ್ಯಸನದಿಂದಾಗಿ ಇಂದು ದೇಶದಲ್ಲಿ ಕಿರಿಯರ ಮರಣ ಪ್ರಮಾಣ ಹೆಚ್ಚಳವಾಗುತ್ತಿದೆ ಎಂದು ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು, ಮುನಿರಾಬಾದ್‌ನ ಪ್ರಾಚಾರ್ಯ ಬಸವರಾಜ ಅವರು ಹೇಳಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ, ಸರ್ವೋದಯ (ಜಿಲ್ಲಾ ಮಕ್ಕಳ ಸಹಾಯವಾಣಿ ೧೦೯೮) ಸಂಸ್ಥೆ ಹಾಗೂ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜು, ಮುನಿರಾಬಾದ್ ಇವರುಗಳ ಸಂಯುಕ್ತಾಶ್ರಯದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮುನಿರಾಬಾದಿನ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಜನತೆ ಬಹಳ ಕುತೂಹಲ ಹೊಂದಿದ್ದು, ಮಾದಕಗಳ ಕಂಪನಿಗಳು ಅಬ್ಬರದ ಪ್ರಚಾರದ ಮೂಲಕ ಯುವ ಜನತೆಯನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ದೇಶದ ಎಷ್ಟೋ ಹಳ್ಳಿಗಳಲ್ಲಿ ಮದ್ಯ ಮಾದಕಗಳು ಸುಲಭವಾಗಿ ದೊರೆಯುತ್ತಿವೆ. ಮೋಜಿನ ಪದಾರ್ಥಗಳಾಗಿರುವ ಮದ್ಯ, ಮಾದಕ ಇತ್ಯಾದಿಗಳ ವ್ಯಸನಮುಕ್ತ ಯುವ ಜನತೆಯಿಂದ ದೇಶದ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳ ಆದರ್ಶ ಮೈಗೂಡಿಸಿಕೊಂಡು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದೆ. ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಮದ್ಯ ಮತ್ತು ಮಾದಕಗಳ ವ್ಯಸನದಿಂದ ಮಾನವನಲ್ಲಿ ಮೃಗೀಯತೆ : ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಗುಳಗಣ್ಣನವರ್ ಎಮ್.ಎಸ್.ಡಬ್ಲ್ಯೂ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ್ ಸಜ್ಜನ್ ಮಾತನಾಡಿ, ಮಾನವನ ಅಸ್ತಿತ್ವವನ್ನೇ ಪ್ರಶ್ನಿಸುವಂತೆ ಮಾಡುವ ಮದ್ಯ, ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನಲ್ಲಿ ಮೃಗೀಯತೆ ಮನೆ ಮಾಡುತ್ತಿದೆ. ವ್ಯಸನಿಗಳು ಮಾದಕಗಳನ್ನು ಪಡೆಯಲು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ವ್ಯಸನಗಳಿಂದ ಮಾನವನ ಜ್ಞಾಪಕ ಶಕ್ತಿ ಕುಂದುತ್ತದೆ, ಅಸಹಜ ವಯಸ್ಸಾಗುವಿಕೆ, ಏಕಾಗ್ರತೆ, ವಿಶ್ಲೇಷಣಾ ಶಕ್ತಿ, ಯೋಚನಾ ಶಕ್ತಿ, ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ತೊದಲುವಿಕೆ, ಅತಿಯಾದ ಉಸಿರಾಟ, ಅಧಿಕ ರಕ್ತದ ಒತ್ತಡ, ಸೋಮಾರಿತನ, ನಿಶ್ಯಕ್ತಿ, ನಿದ್ರಾಹೀನತೆ ಸೇರಿದಂತೆ ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತದೆ. ಪ್ರಪಂಚದ ಎಲ್ಲ ಪ್ರಾಣಿಗಳು ಕೂಡಾ ಈ ಆಧುನಿಕ ಯುಗಕ್ಕೆ ಹೊಂದಿಕೊಂಡು ಚುರುಕುಗೊಳ್ಳುತ್ತಿವೆ ಆದರೆ, ಬುದ್ಧಿಜೀವಿ ಎನಿಸಿಕೊಂಡಿರುವ ಮನುಷ್ಯ ಮಾತ್ರ ಮದ್ಯ ಮತ್ತು ಮಾದಕ ವಸ್ತುಗಳ ಮೇಲೆ ಅವಲಂಬಿತನಾಗಿ ಮೂರ್ಖನೆನಿಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.
ಮಕ್ಕಳ ಸಹಾಯವಾಣಿ ೧೦೯೮ ಕುರಿತು ಮಾಹಿತಿ: ಸರ್ವೋದಯ (ಜಿಲ್ಲಾ ಮಕ್ಕಳ ಸಹಾಯವಾಣಿ ೧೦೯೮) ಸಂಸ್ಥೆಯ ಶಾಂತಕುಮಾರ ಮಾತನಾಡಿ, ಸಂಕಷ್ಠದಲ್ಲಿರುವ ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ೧೦೯೮ ನ್ನು ಆರಂಭಿಸಲಾಗಿದೆ. ಸಂಕಷ್ಠದಲ್ಲಿರುವ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಬಹುದಾಗಿದ್ದು, ಈ ಕಾಯ್ದೆಯಡಿ ೧೮ ವರ್ಷದೊಳಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಕಿರುಕುಳ ನೀಡುವುದು ಸಹ ದೌರ್ಜನ್ಯವೆಂದು ಪರಿಗಣಿಸಿ ಪ್ರಕರಣ ದಾಖಲಿಸಬಹುದಾಗಿದೆ. ಈ ಕಾಯ್ದೆಯಡಿ ಪ್ರಕರಣ ದಾಖಲಾದಲ್ಲಿ ಅದು ವಿಚಾರಣಾರ್ಹ ಮತ್ತು ಜಾಮೀನುರಹಿತ ಪ್ರಕರಣ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ, ಇಂತಹ ಅಪರಾಧಗಳಿಗೆ ೭ ವರ್ಷ ಜೀವಾವಧಿ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ.ಅವಿನಾಶ, ಕಾಲೇಜಿನ ಉಪನ್ಯಾಸಕಾರದ ಯರ್ರಿಸ್ವಾಮಿ, ಮಲ್ಲಿಕಾರ್ಜುನ ಬಿದರಕುಂದಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

0 comments:
Post a Comment