PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-31- ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಒಳ ಕ್ರೀಡಾಂಗಣದಲ್ಲಿಂದು ಬೆಳಿಗ್ಗೆ ೧೦ ಗಂಟೆಗೆ ಉದ್ಯೋಗ ಮೇಳದಲ್ಲಿ ಹೆಸರನ್ನು ನೊಂದಣಿ ಮಾಡಿಸಿದಂತಹ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡುವ ಕಾರ್ಯಗಾರ ಜರುಗಿತು. ಮೊದಲಿಗೆ ಶ್ರೀಗವಿಸಿದ್ಧೇಶ್ವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ  ನಂತರ ಅಂಗವಿಕಲ ಉದ್ಯೋಗ ಆಕಾಂಕ್ಷಿ ಓರ್ವನಿಂದ ದೀಪ ಬೆಳಗಿಸುವದರ ಮೂಲಕ ಈ ಕೌಶಲ್ಯ ತರಬೇತಿ ಕಾರ್ಯಗಾರ  ಚಾಲನೆಗೊಂಡಿತು. ಈ ಸಂದರ್ಭದಲ್ಲಿ ಶ್ರೀ ಎಸ್.ಜಿ.ಟ್ರಸ್ಟ ಸದಸ್ಯ ಸಂಜಯ ಕೊತಬಾಳ, ಮಹೇಶ ಮುದುಗಲ್, ಆಡಳಿತಾಧಿಕಾರಿ ಡಾ. ಆರ್.ಮರೆಗೌಡ ಪದವಿ ಪ್ರಾಚಾರ್ಯ ಪ್ರೊ.ಎಂ.ಎಸ್ ದಾದ್ಮಿ, ಪ್ರಾಧ್ಯಾಪಕ ಎಸ್.ಬಿ ಹಿರೇಮಠ ಎಸ್.ಜಿ ಬಿ.ಇಡಿ ಕಾಲೇಜು ಪ್ರಾಚಾರ್ಯ ಪ್ರಕಾಶ ಬಡಿಗೇರ್ ಉಪಸ್ಥಿತರಿದ್ದರು.ನಂತರ ಸಂಪನ್ಮೂಲ ವ್ಯಕ್ತಿಗಳು ಉದ್ಯೋಗದ ಆಕಾಕ್ಷಿಗಳಿಗೆ  ಕೌಶಲ್ಯ ತರಬೇತಿ ನೀಡಿದರು. ಇದರಲ್ಲಿ ಶಾಲೆ ತೊರೆದವರು ಅಲ್ಲದೇ ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಜೆ.ಓ.ಸಿ, ಡಿಪ್ಲೋಮಾ, ಇಂಜೀನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿ ಪಡೆದ ೫೦೦೦ ಅಭ್ಯರ್ಥಿಗಳು ಭಾಗವಹಿಸಿದ್ದರು.
ಸೂಚನೆ : ಉದ್ಯೋಗಮೇಳದಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಸಿದಂತಹ  ಕ್ರಮ ಸಂಖ್ಯೆ ೧ ರಿಂದ ೩೦೦೦ ವರೆಗೆನ ಅಭ್ಯರ್ಥಿಗಳಿಗೆ  ದಿನಾಂಕ ೦೬-೦೨-೨೦೧೬ ರಂದು ಮತ್ತು  ಕ್ರಮಸಂಖ್ಯೆ ೩೦೦೧ ರಿಂದ ೫೦೦೦ ವರೆಗೆ  ಅಭ್ಯರ್ಥಿಗಳಿಗೆ ದಿನಾಂಕ ೦೭-೦೧ -೨೦೧೬ ರಂದು ಸಂದರ್ಶನ ನಡೆಯಲಿದೆ. ಈ ಬೃಹತ್ ಉದ್ಯೋಗಮೇಳದಲ್ಲಿ ೪೦ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು ಆಯ್ಕೆಯಾದವರಿಗೆ ಸ್ಥಳದಲ್ಲಿಯೇ ಉದ್ಯೋಗ ಪತ್ರವನ್ನು ನೀಡಲಾಗುವದು. ಈ ಉದ್ಯೋಗ ಮೇಳವು  ಮುಖ್ಯಸ್ಥರಾದ ಎಸ್.ಜಿ.ಟ್ರಸ್ಟ್ ಸದಸ್ಯ ಸಂಜಯಕೊತಬಾಳರ ನೇತೃತ್ವದಲ್ಲಿ ನಡೆಯಲಿದ್ದು ಪ್ರಾದ್ಯಾಪಕರಾದ ಎಸ್.ಬಿ.ಹಿರೇಮಠ, ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಪ್ರಕಾಶಬಡಿಗೇರ ಈ ಮೇಳದ ಉಸ್ತುವಾರಿ ವಹಿಸಿಕೊಂಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ ೯೮೪೫೦೦೨೨೫೯, ೯೮೮೦೨೬೪೭೫೧

Advertisement

0 comments:

Post a Comment

 
Top