ಕೊಪ್ಪಳ-20- ಕೊಪ್ಪಳದ ಶ್ರೀ ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಗೆ ಬಂದು ಹೋಗುವ ವಾಹನ ಚಕ್ಕಡಿಗಳಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ೨೬-೦೧-೨೦೧೬ ರಿಂದ ೨೮-೦೧-೨೦೧೬ರವರೆಗೆ ಗವಿಮಠಕ್ಕೆ ಬರುವ ನಾಲ್ಕೂ ಕಡೆಗಳಲ್ಲಿ ಈ ಕೆಳಕಂಡಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
೧. ಹೊಸಪೇಟೆ/ಗಂಗಾವತಿ ಮಾರ್ಗದಿಂದ ಬರುವ ವಾಹನಗಳಿಗಾಗಿ ಕಾರ್ಗಿಲ್ ಪೆಟ್ರೋಲ್ ಬಂಕ್ ಮತ್ತು ಕುಟೀರ ರಸ್ತೆಯ ಪಕ್ಕ ಗವಿಶ್ರೀ ನಗರದ ಹಿಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
೨. ಕುಷ್ಟಗಿ ರಸ್ತೆಯಿಂದ ಬರುವ ವಾಹನಗಳಿಗಾಗಿ ಕುಷ್ಟಗಿ ರೈಲ್ವೆ ಗೇಟ್ ಬಳಿ ಹಾಗೂ ತಾಲೇಡಾ ಹೊಂಡಾ ಷೋರೂಮ್ ಎದುರುಗಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
೩. ಗದಗ ರಸ್ತೆಯಿಂದ ಬರುವ ವಾಹನಗಳಿಗಾಗಿ ಹಳೆಯ ಸಾರ್ವಜನಿಕ ಮೈದಾನ ಮತ್ತು ಎ.ಪಿ.ಎಂ.ಸಿ.ಯಾರ್ಡ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
೪. ಕುಣಿಕೇರಿ, ಹಾಲವರ್ತಿ ರಸ್ತೆಗಳಿಂದ ಬರುವ ವಾಹನಗಳಿಗಾಗಿ ಶ್ರೀಮಠದ ಹಿಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಈ ರೀತಿಯಾಗಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸದ್ಭಕ್ತರು ತಮ್ಮ ವಾಹನಗಳನ್ನು ನಿಗಧಿಪಡಿಸುವ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಶ್ರೀ ಗವಿಮಠದ ಪ್ರಕಟಣೆಯು ತಿಳಿಸಿದೆ.
ದಾಸೋಹಕ್ಕೆ ಇಂದು ಸಮರ್ಪಣೆ
ಕೊಪ್ಪಳ: ನಗರದ ಶ್ರೀಗವಿಮಠದ ಜಾತ್ರಾ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕರ ಹಟ್ಟಿ, ಹುಲಿಹೈದರ್,ಹೈದರನಗರ ತಾಂಡಾ,ಹುಲಸನಗೇರಿ, ನವಲಹಳ್ಳಿ, ಬರದೂರ, ಯರಡೋಣಿ, ಚಿಕ್ಕಬೆಣಕಲ್, ನೆಲೋಗಿಪುರ,ಕಿನ್ನಾಳ ಗ್ರಾಮಗಳಿಂದ ದವಸ, ಧಾನ್ಯ, ಹಾಗೂರೊಟ್ಟಿಗಳು ದಾಸೋಹಕ್ಕರ ಸಮರ್ಪಣೆಯಾದವು. ದಾನಿಗಳಿಗೆಲ್ಲ ಪೂಜ್ಯ ಶ್ರೀಗವಿಸಿದ್ದೇಶ್ವರ ಸ್ವಾಮಿಗಳು ಆಶಿರ್ವದಿಸಿದ್ದಾರೆ.
ಆಕರ್ಷಕ ಮಹಾದ್ವಾರಗಳು ಹಾಗೂ ಶಿಸ್ತು ಬದ್ದ ಜಾತ್ರಾ ಮಳಿಗೆಗಳು
ಕೊಪ್ಪಳ : ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಮಹಾರಥೋತ್ಸವದ ಅಂಗವಾಗಿ ಶ್ರೀಗವಿಮಠದ ಆವರಣದ ಮುಂಭಾಗದಲ್ಲಿನ ಸುಮಾರು ೧೨ ಎಕರೆ ವಿಸ್ತಿರ್ಣದ ಮೈದಾನದಲ್ಲಿ ವೈವಿಧ್ಯಮಯವಾದ ಅಂಗಡಿ-ಮುಂಗಟ್ಟುಗಳು ಮೈದಾಳುತ್ತಲಿವೆ. ಈ ಎಲ್ಲ ಅಂಗಡಿ- ಮುಂಗಟ್ಟುಗಳು ಕೊಪ್ಪಳದ ಕೋಟೆಯಂತೆ ಕಾಣುವ ೪ ವಿಶಿಷ್ಟ ಮಹಾದ್ವಾರಗಳನ್ನು ಶ್ರೀಗವಿಮಠದ ಸಂಸ್ಥಾಪಕ ಶಿವಯೋಗಿಗಳಾದ ರುದ್ರಮುನಿ ಮಹಸ್ವಾಮಿಗಳು, ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಶಿವಶಾಂತವೀರ ಮಹಾಸ್ವಾಮಿಗಳು ಹಾಗೂ ಮರಿಶಾಂತವೀರಮಹಾಸ್ವಾಮಿಗಳ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಲಿವೆ. ಜಾತ್ರಾ ಸಮಯದಲ್ಲಿ ಅವು ಅತ್ಯಾಕರ್ಷಕವಾಗಿ ನೋಡುಗರ ಕಣ್ಮನಗಳನ್ನು ಸೆಳೆಯುವಲ್ಲಿ ಸಫಲವಾಗಬಲ್ಲವು.. ಈ ಬೃಹತ್ ಮಹಾದ್ವಾರಗಳ ಮುಖೇನ ಜನರಿಗೆ ರಹದಾರಿ ಕಲ್ಪಿಸಿದೆ. ಈ ವಿಶಾಲ ಆವರಣದಲ್ಲಿ ಪ್ರತಿವರ್ಷ ೭೦೦ ರಿಂದ ೮೦೦ ಅಂಗಡಿಗಳು ಬರುತ್ತಿದ್ದವು. ಈ ವರ್ಷ ಅದಕ್ಕಿಂತಲೂ ಹೆಚ್ಚೂ ಅಂಗಡಿಗಳು ಬರುವ ನೀರಿಕ್ಷೆ ಇದೆ. ಜಾತ್ರಾ ಆವರಣದ ಮಳಿಗೆಗಳಲ್ಲಿ ೧೨ ಸಾಲುಗಳಿದ್ದು, ಪ್ರತಿ ಸಾಲುಗಳ ಮಧ್ಯ ಜನಸಂದಣಿ ಆಗದಂತೆ ಸಮತಟ್ಟಾದ ರಸ್ತೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಸಾಲಿನಲ್ಲಿರುವ ಅಂಗಡಿಗಳಿಗೆ ಕ್ರಮ ಬದ್ದವಾದ ಕ್ರಮ ಸಂಖ್ಯೆಯನ್ನು ಸಹ ಕೊಡಲಾಗಿದೆ. ಮಿಠಾಯಿ ಅಂಗಡಿಗಳ ಸಾಲುಗಳು, ಗೋಭಿ ಅಂಗಡಿಗಳ ಸಾಲುಗಳು, ಹೋಟೆಲುಗಳ ಸಾಲುಗಳ ಪ್ರತ್ಯೇಕ ಸಾಲುಗಳನ್ನಾಗಿ ವಿಂಗಡಿಸಲಾಗಿದೆ. ಈ ವರ್ಷದ ಜಾತ್ರೆಗೆ ಬಿಹಾರ, ಮುಂಬೈ, ಕಲ್ಕತ್ತಾ, ಚಿನೈ, ಸೊಲ್ಲಾಪುರ, ಸಾಂಗ್ಲಿ, ಬೆಂಗಳೂರ ಮೊದಲಾದ ದೂರ- ದೂರದ ನಗರಗಳಿಂದ ಅಂಗಡಿಗಳು ಬರುತ್ತವೆ. ಈ ಜಾತ್ರಾ ಮಳಿಗೆಗಳ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಜೊತೆಗೆ ಅಂಗಡಿಕಾರರಿಗೆ ಸ್ವಚ್ಛತೆ ಹಾಗೂ ನೈರ್ಮಲ್ಯತೆಯನ್ನು ಕಾಯ್ದುಕೊಳ್ಳಲು ಈ ಮಳಿಗೆಗಳ ಉಸ್ತುವಾರಿ ಸಮಿತಿ ನಿರ್ದೇಶಿಸಲಾಗಿದೆ.
ಮಾಧ್ಯಮ ಕೇಂದ್ರ ಉದ್ಘಾಟನೆ
ಕೊಪ್ಪಳ : ಶ್ರೀ ಗವಿಮಠದ ಜಾತ್ರಾಮಹೋತ್ಸವದ ನಿಮಿತ್ಯ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಮಾಧ್ಯಮ ಕೇಂದ್ರವನ್ನು ನಾಳೆ ದಿನಾಂಕ ೨೧-೦೧-೨೦೧೬ ರಂದು ಬೆಳಿಗ್ಗೆ ೯.೩೦ ಕ್ಕೆ ಉದ್ಘಾಟಿಸಲಾಗುವದು. ಎಲ್ಲ ಮಾಧ್ಯಮದವರು ಈ ಮಾಧ್ಯಮ ಕೇಂದ್ರವನ್ನು ಬಳಸಿಕೊಳ್ಳಬೇಕೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ. ಮಾಧ್ಯಮಕೇಂದ್ರ ಸಮಿತಿಯಲ್ಲಿ ಡಾ.ಪ್ರಕಾಶ ಬಳ್ಳಾರಿ, ಪ್ರೊ.ಶರಣಪ್ಪ ಉಮಚಗಿ,ಎಸ್.ಎಂ ಕಂಬಾಳಿಮಠ ಕಾರ್ಯವಿರ್ವಹಿಸುತ್ತಾರೆ.

0 comments:
Post a Comment