ಕೊಪ್ಪಳ ಜ. ೨೦ (ಕ ವಾ) ನಿರಂತರ ಅಧ್ಯಯನ ಮತ್ತು ಹೋರಾಟದ ಛಲವೇ ಹೆಚ್.ಎಸ್. ಪಾಟೀಲರರಿಗೆ ಯಶಸ್ಸು ದೊರೆಯಲು ಕಾರಣವಾದ ಅಂಶವಾಗಿದೆ ಎಂದು ಕೊಪ್ಪಳದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು, ಜಿಲ್ಲೆಯ ಹಿರಿಯ ಲೇಖಕ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್.ಎಸ್. ಪಾಟೀಲ್ ಅವರ ಜೀವನ-ಸಾಧನೆಗಳ ಕುರಿತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ವಿಚಾರಸಂಕಿರಣ ಹಾಗೂ ಸಂವಾದ ಗೋಷ್ಠಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಹುಟ್ಟಿದ ಹೆಚ್.ಎಸ್. ಪಾಟೀಲರು, ವಿದ್ಯಾರ್ಥಿ ದೆಸೆಯಿಂದಲೇ ಅಧ್ಯಯನದತ್ತ ಹೆಚ್ಚು ಆಸಕ್ತಿ ವಹಿಸಿದ್ದರು. ಶಿಕ್ಷಕರಾಗಿ, ನಂತರ ಮುಖ್ಯೋಪಾಧ್ಯಾಯರಾಗಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅನುಪಮ ಸೇವೆ ಸಲ್ಲಿಸಿದ ಪಾಟೀಲರು, ನಂತರದ ದಿನಗಳಲ್ಲಿ ನಿರಂತರ ಅಧ್ಯಯನ ಮತ್ತು ಹೋರಾಟದ ಮನೋಭಾವ ಬೆಳೆಸಿಕೊಂಡು, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ೧೯೯೩ ರಲ್ಲಿ ಕೊಪ್ಪಳದಲ್ಲಿ ಜರುಗಿದ ೬೨ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಯಶಸ್ವಿಯಲ್ಲಿ ಹೆಚ್.ಎಸ್. ಪಾಟೀಲರ ಪಾತ್ರ ಬಹು ಮುಖ್ಯವಾಗಿತ್ತು. ಆ ಸಂದರ್ಭದಲ್ಲಿ 'ತಿರುಳ್ಗನ್ನಡ' ಸ್ಮರಣ ಸಂಚಿಕೆಯನ್ನು ಹೊರತರುವಲ್ಲಿ ಅವರ ಶ್ರಮ ನಿಜಕ್ಕೂ ಸ್ಮರಣಾರ್ಹವಾಗಿದೆ. ಹೈದ್ರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಹೆಚ್.ಎಸ್. ಪಾಟೀಲರು, ರಂಗಭೂಮಿಯ ಆಸಕ್ತರೂ ಹೌದು. ಪ್ರತಿಭಾವಂತರಾಗಿದ್ದರೂ, ಬೆಳಕಿಗೆ ಬಾರದ ರಂಗಭೂಮಿ ಕಲಾವಿದೆ ರಹಮಾನವ್ವ ಕಲ್ಮನಿ ಅವರ ಕುರಿತು, ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಲು ಸಂಚಾರ ನಡೆಸಿ, 'ರಂಗ ಅಭಿನೇತ್ರಿ' ಎಂಬ ಪುಸ್ತಕವನ್ನು ಸಂಪಾದಿಸಿದರು, ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸುವ ಮೂಲಕ, ಅವರ ಶ್ರಮಕ್ಕೆ, ಸಾಧನೆಗೆ ಗೌರವ ಸಲ್ಲಿಸಿದಂತಾಯಿತು. ಕೊಪ್ಪಳ ಜಿಲ್ಲೆಯ ಸಂಸ್ಕೃತಿ, ಇತಿಹಾಸ ಕುರಿತು ಅಧ್ಯಯನ ನಡೆಸಿರುವ ಪಾಟೀಲರ ಪರಿಶ್ರಮವನ್ನು ಗಮನಿಸಿರುವ ಸರ್ಕಾರ, ಇದೀಗ ಕೊಪ್ಪಳ ಗೆಜೆಟಿಯರ್ ಪ್ರಕಟಿಸಲು ಮುಂದಾಗಿದ್ದು, ಇದರ ಬಹುಮುಖ್ಯ ಕಾರ್ಯವನ್ನು ಹೆಚ್.ಎಸ್. ಪಾಟೀಲರಿಗೆ ವಹಿಸಿದೆ. ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸದೇ ಇದ್ದರೂ, ಸಹ ಸರ್ಕಾರ ಇವರ ಸಾಧನೆ ಹಾಗೂ ಪರಿಶ್ರಮವನ್ನು ಗುರುತಿಸಿ, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು, ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಪಾಟೀಲರು ಸರಳ ಸಜ್ಜನಿಕೆಯ ವ್ಯಕ್ತಿ ಹೇಗೋ, ಜನ ಹಿತದ ಪ್ರಶ್ನೆ ಬಂದಾಗ ಅಷ್ಟೇ ನಿಷ್ಠುರತೆಯನ್ನು ಪ್ರದರ್ಶಿಸುತ್ತಾರೆ. ಹೆಚ್.ಎಸ್. ಪಾಟೀಲರಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಅನೇಕ ಸಾಧಕರು ಈ ಭಾಗದಲ್ಲಿ ಇದ್ದಾರೆ. ಆದರೆ ಇಂತಹವರನ್ನು ಗುರುತಿಸಿ, ಅವರನ್ನು ಗೌರವಿಸುವ ಕಾರ್ಯ ಸರ್ಕಾರದಿಂದ ಆಗಬೇಕಿದೆ ಎಂದು ಅಲ್ಲಮಪ್ರಭು ಬೆಟ್ಟದೂರ ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಮಾತನಾಡಿ, ಒಬ್ಬ ವ್ಯಕ್ತಿ ತನ್ನನ್ನು ತಾನು ಸಮಾಜಕ್ಕೆ ಅರ್ಪಿಸಿಕೊಂಡಿರುವುದನ್ನು, ಸಮಾಜವೇ ಗುರುತಿಸಿ, ಸನ್ಮಾನಿಸಿದಾಗ, ಅದರಿಂದ ಸಿಗುವ ಆನಂದವೇ ಶ್ರೇಷ್ಠವಾದದ್ದು. ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರ ಹಿಂದುಳಿದಿದ್ದರೂ, ಸಾಹಿತ್ಯ ಕ್ಷೇತ್ರ ಅತ್ಯಂತ ಶ್ರೀಮಂತವಾಗಿದೆ. ಇಲ್ಲಿನ ಸಾಹಿತ್ಯಿಕ ವಲಯ ನಿರ್ಮಾಣಗೊಳ್ಳುವಲ್ಲಿ, ಹೆಚ್.ಎಸ್. ಪಾಟೀಲರ ಪಾತ್ರವೂ ಬಹುಮುಖ್ಯ ವಾಗಿದೆ ಎಂದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಸ್ಥಾಪಿಸಲಾಗಿರುವ ತಿರುಳ್ಗನ್ನಡ ಸಾಹಿತ್ಯ ಸಹಕಾರ ಸಂಘದ ಸ್ಥಾಪನೆಯಲ್ಲಿ ಹೆಚ್‌ಎಸ್ ಪಾಟೀಲರ ಆಶಯ ಹಾಗೂ ಪಾತ್ರ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ವಿಚಾರ ಮಂಡಿಸಿದ ಹಿರಿಯ ಸಾಹಿತಿ ಡಾ. ಕೆ.ಬಿ. ಬ್ಯಾಳಿ ಅವರು, ಇಲ್ಲಿನ ಸಾಹಿತ್ಯ ವಲಯದ ಪ್ರಮುಖರೆನಿಸಿಕೊಂಡ ಪಂಚಾಕ್ಷರಯ್ಯ ಹಿರೇಮಠ, ಸಾರಂಗ ಮಠ, ಹಕಾರೆ ಮುಂತಾದವರು, ಕೊಪ್ಪಳ ಜಿಲ್ಲೆಯವರೇ ಆಗಿದ್ದರೂ, ಕಾರಣಾಂತರಗಳಿಂದ ಬೇರೆ ಜಿಲ್ಲೆಗಳಲ್ಲಿ ನೆಲೆಸಿ, ಜಿಲ್ಲೆಯ ಕೀರ್ತಿಯನ್ನು ಹರಡಿಸಿದ್ದಾರೆ. ಹೆಚ್.ಎಸ್. ಪಾಟೀಲರು, ಇಲ್ಲಿಯೇ ನೆಲೆ ನಿಂತು, ನಿರಂತರ ಅಧ್ಯಯನದಲ್ಲಿ ಈಗಲೂ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ಜಿಲ್ಲೆಯ ಇತಿಹಾಸದ ನಡೆದಾಡುವ ಕೋಶ ಎನಿಸಿಕೊಂಡಿದ್ದಾರೆ. ಉರ್ದು ಭಾಷೆಯ ಪ್ರಭಾವ ಜಿಲ್ಲೆಯಲ್ಲಿ ಹೆಚ್ಚಾಗಿದ್ದ ಸಂದರ್ಭದಲ್ಲೂ ಕೂಡ, ಕನ್ನಡ ಸಾಹಿತ್ಯದ ಕೃಷಿಯನ್ನು ಅವರು ಕೈಗೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ತಿಮ್ಮಾರೆಡ್ಡಿ ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಡಾ. ಮಹಾಂತೇಶ್ ಮಲ್ಲನಗೌಡರ, ಹನುಮಾಕ್ಷಿ ಗೋಗಿ ಅವರು ವಿಚಾರ ಮಂಡಿಸಿದರು. ಇದಕ್ಕೂ ಮುನ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಚ್.ಎಸ್. ಪಾಟೀಲರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರ ಸನ್ಮಾನಿಸಿದರು. ನಂತರ ಹೆಚ್.ಎಸ್. ಪಾಟೀಲರೊಂದಿಗೆ ನಡೆದ ಸಂವಾದದಲ್ಲಿ ಡಾ. ವಿ.ಬಿ. ರಡ್ಡೇರ್, ಡಾ. ಮಮ್ತಾಜ್ ಬೇಗಂ, ಈಶ್ವರ ಹತ್ತಿ, ಗಾಯಿತ್ರಿ ಬಾವಿಕಟ್ಟಿ, ಪ್ರಮೋದ್ ತುರ್ವಿಹಾಳ, ಶರಣಪ್ಪ ನಿಡಶೇಸಿ, ಸಿರಾಜ್ ಬಿಸರಳ್ಳಿ ಅವರು ಪಾಲ್ಗೊಂಡರು. ಗಂಗಾವತಿಯ ಬಸವಕೀರ್ತಿ ಅವರು ಸುಗಮ ಸಂಗೀತ ನಡೆಸಿಕೊಟ್ಟರು. ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು.

0 comments:
Post a Comment