ಕೊಪ್ಪಳ೦೮, ಕ್ಷೇತ್ರದ ನರೇಗಲ್ ಗ್ರಾಮದಲ್ಲಿ ಹೆಚ್.ಕೆ.ಆರ್.ಡಿ.ಬಿ. ಯೋಜನೆಯಡಿಯಲ್ಲಿ ರೂ.೧೦ ಲಕ್ಷದ ಸಿಸಿ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಗ್ರಾಮವಿಕಾಸನ ಯೋಜನೆಯಡಿಯಲ್ಲಿ ಕೊಪ್ಪಳ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಗುಣಮಟ್ಟದ ರಸ್ತೆನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ನನ್ನ
ಕನಸಾಗಿದ್ದು, ಬರುವ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಜನಸಾಮಾನ್ಯರ ಮೂಲಭೂತ
ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಕಾರ್ಯರೂಪದಲ್ಲಿ ತರುವೇನು. ಈಗಾಗಲೇ ಅನೇಕ
ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕಗಳು
ಪ್ರಾರಂಭಗೊಂಡಿವೆ. ಬರುವ ಆರ್ಥಿಕ ವರ್ಷದಲ್ಲಿ ಗ್ರಾಮ ಹಾಗೂ ನಗರದ ಎಲ್ಲಾ ರಸ್ತೆಗಳ
ನಿರ್ಮಾಣ ಕಾರ್ಯಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಸನ್ನಾ
ಗಡಾದ, ವೀರಣ್ಣ ನರೇಗಲ್, ವೀರನಗೌಡ ಮಾಲಿಪಾಟೀಲ, ಶಂಕ್ರಪ್ಪ, ಸಿದ್ದಪ್ಪ ನರೇಗಲ್,
ರವಿಕುಮಾರ ಹಾದಿಮನಿ, ಬೀರಪ್ಪ, ಭೂಸೇನಾ ನಿಗಮದ ಅಧಿಕಾರಿಗಳು, ಗ್ರಾಮದ ಗುರುಹಿರಿಯರು,
ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment