ಕೊಪ್ಪಳ,ಜ.೮;- ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡಕ್ಕೆ ಸರ್ಕಾರದಿಂದ ೨ ಕೋಟಿ ರುಪಾಯಿ ಅನುದಾನ ಮಂಜೂರಾಗಿದೆ ಎಂದು ಕೊಪ್ಪಳ ಕ್ಷೇತ್ರದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ. ಕೊಪ್ಪಳ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಇಂದು ಭೇಟಿ ನೀಡಿದ್ದ ಶಾಸಕ ರಾಘವೇಂದ್ರ ಹಿಟ್ನಾಳ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಆರಂಭವಾಗಿ ಎರಡು ವರ್ಷವಾಗುತ್ತಾ ಬಂದಿದೆ. ಈಗ ಬೇರೆ ಕಟ್ಟಡದಲ್ಲಿ ಈ ಕಾಲೇಜು ನಡೆಯುತ್ತಿದೆ. ಈ ಕುರಿತಂತೆ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಂದರೆಯುಂಟಾಗುತ್ತಿರೋದು ತಮ್ಮ ಗಮನಕ್ಕೆ ಬಂದಿದೆ. ಹೀಗಾಗಿ, ಈ ಕಾಲೇಜಿಗೆ ಸ್ವಂತ ಕಟ್ಟಡ
ನಿರ್ಮಾಣಕ್ಕಾಗಿ ಸರ್ಕಾರದಿಂದ ಹಣ ಮಂಜೂರು ಮಾಡಿಸಲಾಗಿದೆ ಅಂತ ಶಾಸಕರು ಈ ಸಂದರ್ಭದಲ್ಲಿ
ವಿವರಿಸಿದ್ದಾರೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನವನ್ನು
ತರಲಾಗುತ್ತಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ವಿದ್ಯಾರ್ಥಿಗಳಿಗೆ ಭರವಸೆ
ನೀಡಿದರಲ್ಲದೆ, ಕಾಲೇಜಿನ ಕುಂದು ಕೊರತೆಗಳನ್ನು ಆಲಿಸಿ ಸಂಭಂದಿಸಿದವರಿಗೆ ಸೂಚನೆ
ನೀಡಿದರು. ಕಾಲೇಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉದ್ದೇಶಿತ ಕಾಲೇಜು ಕಟ್ಟಡದ
ಸ್ಥಳವಾದ ಸಾರ್ವಜನಿಕ ಮೈದಾನದಲ್ಲಿರುವ ಪೂರ್ವಭಾಗದಲ್ಲಿರುವ ಜಾಗೆಯನ್ನು ಪೂರ್ವ
ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಅಭಿವೃದ್ದಿ ಸಮಿತಿಯ ಸದಸ್ಯರಾದ
ಗುರುರಾಜ ಹಲಗೇರಿ, ಸಾಹಿತಿಗಳಾದ ಶ್ರೀ ಅಲ್ಲಮ ಪ್ರಭು ಬೆಟ್ಟದೂರ, ಎಚ್ ಎಸ್ ಪಾಟೀಲ್,
ರವಿಂದ್ರಗೌಡ ಪಾಟೀಲ ಬಿಸರಳ್ಳಿ, ಶಿವಾನಂದ ಕರಿಗಾರ, ಹಾಗೂ ಪ್ರಾಚಾರ್ಯ ಪ್ರಭುರಾe ಕೆ
ನಾಯಕ ಸೇರಿದಂತೆ ಕಾಲೇಜ್‌ನ ಸಿಬ್ಬಂದಿ ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment