ಕೊಪ್ಪಳ, ಜ, ೧೮ ಇಂದು ನಗರದ ಪತ್ರಿಕಾಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಕಸಾಪ ನಿಯೋಜಿತ ಅಭ್ಯರ್ಥಿ ಯುವ ಸಾಹಿತಿ ಜಿ.ಎಸ್.ಗೋನಾಳ ಚುನಾವಣಾ ಪ್ರನಾಳಿಕೆ ಬಿಡುಗಡೆಗೊಳಿಸಿ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬಲ ಪಡಿಸಲು, ಹೆಚ್ಚು ಸಾಹಿತ್ಯ, ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದ ವರೆಗೂ ಯುವಕರು, ಮಹಿಳೆಯರು, ಮಕ್ಕಳು, ಹಿರಿಯ ಸಾಹಿತಿಗಳನ್ನು ಒಳಗೊಂಡು ಕಾರ್ಯಕ್ರಮಗಳನ್ನು ಆಯೋಜಿಸಲು ಈ ಬಾರಿ ನಡೆಯುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನನಕ್ಕೆ ಚುನಾವಣೆ ನಡೆಯುತ್ತಲಿದ್ದು ಜಿಲ್ಲೆಯ ಆಜೀವ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮತವನ್ನು ಹಾಕಿ ಬಹುಮತದಿಂದ ಗೆಲ್ಲಿಸಬೇಕೆಂದು ಆಜೀವ ಸದಸ್ಯರುಗಳಲ್ಲಿ ಮನವಿಮಾಡಿಕೊಂಡಿದ್ದಾರೆ.
ಮಂಜುನಾಥ ಗೊಂಡಬಾಳ ಮಾತನಾಡಿ ಕೊಪ್ಪಳ ಕಸಾಪಕ್ಕೆ ಶಕ್ತಿ ತುಂಬಲು ಜಿ.ಎಸ್.ಗೋನಾಳ ಸೂಕ್ತ ವ್ಯಕ್ತಿಯಾಗಿದ್ದು ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಮುಂದಾಳತ್ವವಹಿಸಿಕೊಂಡು ಯಶಸ್ವಿ ಸಂಘಟಕರಾಗಿದ್ದು ತಮ್ಮ ವಿಶಾಲ ಪ್ರಕಾಶನದ ಮೂಲಕ ೨೦ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯ ಸೇವೆಯಲ್ಲಿ ಹಗಲಿರುಳು ತೊಡಗಿಕೊಂಡಿದ್ದಾರೆ. ಇವರಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕೊಪ್ಪಳ, ಗಂಗಾವತಿ, ಕುಷ್ಟಗಿ ತಾಲೂಕಿನ ಎಲ್ಲಾ ಆಜೀವ ಸದಸ್ಯರು ಜಾತ್ಯಾತೀತವಾಗಿ ಗೋನಾಳರನ್ನು ಬೆಂಬಲಿಸಿ ಗೆಲ್ಲಿಸಿ, ಕಸಾಪವನ್ನು ನಿರಂತರ ಚಟುವಟಿಕೆಗಳ ಕ್ರೀಯಾಶೀಲವಾಗಿರಲು ಬೆಂಬಲಿಸಬೇಕೆಂದು ಕೋರಿದರು.
ಪತ್ರಿಕಾ ಗೋಷ್ಠಿಯಲ್ಲಿ ವಾಯ್.ಬಿ.ಜೂಡಿ ಮಾತನಾಡಿ ಇತ್ತಿಚಿಗೆ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಗೌಣವಾಗಿವೆ. ಜಿ.ಎಸ್ ಗೋನಾಳರನ್ನು ಆಜೀವ ಸದಸ್ಯರು ಗೆಲ್ಲಿಸಿ ಅವರಿಂದ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯು ಸದಾ ಅಚ್ಚ ಹಸಿರಾಗಿರಲು ಜಿಲ್ಲೆಯ ಎಲ್ಲಾ ಆಜೀವ ಸದಸ್ಯರು ಗೋನಾಳರನ್ನು ಆಶೀರ್ವದಿಸಿ ಗೆಲ್ಲಿಸಿ ಕೊಪ್ಪಳ ಜಿಲ್ಲೆಯ ಕಸಾಪವನ್ನು ರಾಜ್ಯದಲ್ಲಿಯೇ ಮಾದರಿಯವಾಗಿ ನಿರಂತರವಾಗಿ ಸಾಹಿತ್ಯ ಸಮ್ಮೇಳನ, ಪುಸ್ತಕ ಪ್ರಕಟಣೆ, ಕನ್ನಡ ಜನ ಜಾಗೃತಿ, ಚಿಂತನ ಮಂಥನ ನಡೆಯಲು ಗೋನಾಳರನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಹಿರಿಯ ಮುಖಂಡ ಸಂಗಮೇಶ.ಡಿ.ಡಂಬಳ, ಆಜೀವ ಸದಸ್ಯರಾದ ಶ್ರೀಮತಿ ಸರೋಜಾ ಬಾಕಳೆ, ಮುನೀರ ಅಹಮ್ಮದ್ ಸಿದ್ದಿಕಿ ಉಪಸ್ಥಿತರಿದ್ದರು.

0 comments:
Post a Comment