ಕೊಪ್ಪಳ, ೨೦- ನಗರದ ಸಾಲಾರಜಂಗ ರಸ್ತೆಯಿಂದ ಪಲ್ಟನ್ ಓಣಿಯ ಮುಖಾಂತರ ವಡ್ಡರ ಓಣಿಯ ಗವಿಮಠ ಮುಖ್ಯ ರಸ್ತೆಗೆ ಸೇರುವ ಸಿಮೇಂಟ್ ರಸ್ತೆ ಮಾಡುತ್ತಿದ್ದು, ಸಿಮೆಂಟ್ ರಸ್ತೆಯ ತೀರಾ ಕಳಪೆ ರಸ್ತೆ ಮಾಡುತ್ತಿದ್ದಾರೆ ಎಂದು ಪಲ್ಟನ್ ಓಣಿಯ ಸಾರ್ವಜನಿಕರು ಜ. ೧೪ ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಕೊಪ್ಪಳ ಜಿಲ್ಲಾ ಆದಾಗಿನಿಂದ ಪುರಸಭೆ ಇದ್ದದ್ದು, ಈಗ ನಗರಸಭೆಯಾಗಿ ಪರಿವರ್ತನೆಯಾದರೂ ನಗರಸಭೆಯಲ್ಲಿರುವ ಅಧಿಕಾರಿಗಳು ನಗರದ ಸೌಂದರ್ಯ ಹಾಗೂ ರಸ್ತೆಗಳ ಅಭಿವೃದ್ಧಿಗೆ ಕಿಂಚಿತ್ತು ಕಾಳಜಿ ವಹಿಸದೇ ರಸ್ತೆ ಕಾಮಗಾರಿಗೆ ಗುತ್ತಿಗೆ ಕೊಟ್ಟು ಕಾಮಗಾರಿಯನ್ನು ತೀರಾ ಕಳಪೆ ಮಟ್ಟದಾಗಿದ್ದು, ಉದಾಹರಣೆ ಪಲ್ಟನ್ ಓಣಿಯ ರಸ್ತೆಯೇ ಅದರ ಕೈಗನ್ನಡಿಯಾಗಿದೆ. ವಡ್ಡರ ಓಣಿಯಲ್ಲಿ ಮಾಡಿರುವ ಸಿಮೇಂಟ್ ರಸ್ತೆ ಅಗಲೀಕರಣವಾಗಿದ್ದು, ವಾಹನ ಓಡಾಟಕ್ಕೂ ಅನುಕೂಲವಾಗಿದೆ. ಆದರೆ ಪಲ್ಟನ್ ಓಣಿಯಿಂದ ವಡ್ಡರ ಓಣಿಯವರೆಗೆ ಪ್ರಾರಂಭಿಸಿರುವ ಕಾಮಗಾರಿಯು ತೀರಾ ಕಳಪೆಯಾಗಿದ್ದು, ಅದರ ವೀಕ್ಷಣೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಇಂಜೀನಿಯರನ್ನು ಕಳಿಸಿ ವೀಕ್ಷಿಸಿದರೆ ತಮಗೆ ನಿಜರೂಪ ತಿಳಿಯುತ್ತದೆ.
ಒಂದು ಸಣ್ಣ ಆಟೋ ಹೋಗಲು ಬಾರದಂತೆ ಚರಂಡಿ ದಾಟಿ ರಸ್ತೆಗಳಲ್ಲಿ ಮನೆ ಕಟ್ಟಿಕೊಂಡಿದ್ದರೂ ನಗರಸಭೆಯ ಅಧಿಕಾರಿಗಳು ನೋಡಿಯೂ ನೋಡದಂತೆ ಓಡಾಡುತ್ತಿದ್ದಾರೆ. ನಗರಾಭಿವೃದ್ಧಿ ಕಾರ್ಯಾಲಯದಿಂದ ಅನುಮತಿ ಪಡೆಯದೇ ಸರಕಾರಿ ರಸ್ತೆಗಳನ್ನು ಅಕ್ರಮಿಸಿಕೊಂಡು ಮನೆಗಳನ್ನು ಕಟ್ಟಿಕೊಂಡರೂ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಿಗಳು ತಕರಾರು ಮಾಡದೇ ಸುಮ್ಮನಿದ್ದಾರೆ. ಹೀಗಾಗಿ ನಗರದ ಅಭಿವೃದ್ಧಿ ಹಾಗೂ ನಗರವು ಸ್ವಚ್ಛವಾಗಿರಲು ಹೇಗೆ ಸಾಧ್ಯ ?

0 comments:
Post a Comment