ಕೊಪ್ಪಳ, ಜ.೨೫ ಬರುವ ಫೆಬ್ರುವರಿ ೨೮ ರಂದು ಜರುಗುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಲ್ಲಿನ ಸಾಹಿತಿ ವಿಚಾರವಾದಿ ಪತ್ರಕರ್ತರ ಗವಿಸಿದ್ದಪ್ಪ ಶೇಖರಪ್ಪ ಗೋನಾಳ (ಜಿ.ಎಸ್ ಗೋನಾಳ) ರವರು ಶುಕ್ರವಾರ ತಮ್ಮ ಅಪಾರ ಸಂಖ್ಯೆ ಬೆಂಬಲಿಗರ ಅಜೀವ ಸದಸ್ಯರ ಸಮ್ಮುಖದಲ್ಲಿ ತಮ್ಮ ಉಮೇದುವಾರಿಕೆಯ ನಾಮಪತ್ರವನ್ನು ಸಹ ಚುನಾವಣಾ ಅಧಿಕಾರಿಯಾಗಿರುವ ಪ್ರಾಣೇಶ್ ರವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಕಸಾಪ ಅಜೀವ ಸದಸ್ಯರಾದ ಶಿವಾನಂದ ಹೊದ್ಲೂರ, ಎಂ.ಸಾದಿಕ್ ಅಲಿ, ಹರೀಶ್ ಎಚ್.ಎಸ್. ಹನುಮಂತ ಹಳ್ಳಿಕೇರಿ, ಪೀರಸಾಬ್ ಬೆಳಗಟ್ಟಿ, ಜೋಡಪ್ಪ ಯತ್ನಟಿ, ಉಮೇಶ ಪೂಜಾರ್, ವೈ.ಬಿ.ಜೂಡಿ, ಮಂಜುನಾಥ ಗೊಂಡಬಾಳ ಸೇರಿದಂತೆ ಅನೇಕ ಜನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.
Home
»
Koppal News
»
koppal organisations
» ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಜಿ.ಎಸ್ ಗೋನಾಳರಿಂದ ನಾಮಪತ್ರ ಸಲ್ಲಿಕೆ.
Subscribe to:
Post Comments (Atom)
0 comments:
Post a Comment