ಇತ್ತಿಚಿಗೆ ನಿಧನರಾದ ಕಮ್ಯೂನಿಷ್ಟ್ ಪಕ್ಷದ ರಾಷ್ಟ್ರೀಯ ನಾಯಕರಾದ ಎ.ಬಿ.ಬರ್ಧನ್ ಹಾಗೂ ಕಾರ್ಮಿಕ ಮುಖಂಡರಾದ ಪ್ರಸನ್ನ ಕುಮಾರ್ ಇವರನ್ನು ಸ್ಮರಿಸಿ ಸಂತಾಪ ಸಭೆ ನಡೆಸಲಾಯಿತು. ಕಾಂ:ಭಾರದ್ವಜ್ ಮಾತನಾಡಿ ಕಮೂನಿಷ್ಟ್ ಪಕ್ಷದ ಆದರ್ಶಗಳು, ದುಡಿಯುವ ಜನರಿಗೆ ಸದಾ ಪ್ರಸ್ತುತವಾಗಿವೆ. ಕಾಂ: ಎ.ಬಿ.ಬರ್ಧನ್ ಅವರು ತಮ್ಮ ಚಿಕ್ಕ ವಯಸಿನಲ್ಲಿಯೇ ಕಮೂನಿಷ್ಟ್ ಚಳುವಳಿಯೊಳಗೆ ಧುಮುಕಿ ಬಂಡವಾಳಶಾಹಿ ಮತ್ತು ಭೂ ಮಾಲೀಕರ ವಿರುದ್ಧ ಸತತ ಹೋರಾಟ ನಡೆಸಿದ್ದರು. ಕೋಮುವಾದ, ಮೂಲಭೂತವಾದ, ಜಾತಿವಾದಗಳಿಗೆ ರಾಜಿಯಾಗದೆ ಹೋರಾಟ ನಡೆಸಿ ನಮ್ಮೆಲ್ಲರಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಕಾಂ:ಬಸವರಾಜ.ಶೀಲವಂತರುಮಾತನಾಡಿ ಎ.ಬಿ.ಬರ್ಧನ್ ಹಾಗೂ ಪ್ರಸನ್ನ ಕುಮಾರ್ ಅವರ ಸಾವು ಎಡ ಪಂಥಿಯ ಚಳುವಳಿಗೆ
ತುಂಬಲಾರದ ನಷ್ಟವಾಗಿದೆ ಎಂದರು. ಕಾಂ:ಡಿ.ಎಚ್.ಪೂಜಾರ್ ಮಾತನಾಡಿ ರೈತ ಕಾರ್ಮಿಕರ
ವಿಮೋಚನೆಗಾಗಿ ನಿಸ್ವಾರ್ಥದಿಂದ ಹೋರಾಡಿ ಮಡಿದವರ ಸಾವು 'ಬೆಟ್ಟದ್ದಷ್ಷು, ಆದರೆ
ಭ್ರಷ್ಟಾಚಾರ ಸ್ವಜನ ಪಕ್ಷಪಾತ ಖಾಸಗಿ ಕುಟುಂಬ ಜೀವನಕ್ಕಾಗಿ ಸೀಮಿತಗೊಂಡು
ಸಾವನ್ನಪ್ಪಿದ್ದರೆ ಅವರ ಸಾವಿನ ಭಾರ ಹಕ್ಕಿಯ ಪುಕ್ಕದಷ್ಟು ಎಂದರು, ಮುಂದುವರೆದು
ಮಾತನಾಡಿ ಇಂದಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಮೂನಿಷ್ಟ್ ಚಳುವಳಿ ತೀವ್ರವಾಗಿ
ಮುಂದುವರೆದಿವೆ. ಕಾರ್ಪೋರೇಟ್ ಬಂಡವಾಳಿಗರ ವಿರುದ್ಧ ಹೋರಾಡುವ ಎಲ್ಲಾ ಕ್ರಾಂತಿಕಾರಿ ಎಡ
ಶಕ್ತಿಗಳು ಐಕ್ಯಗೊಳ್ಳುವುದರೊಂದಿಗೆ ಜನತಾ ಪರ್ಯಾಯ ಸ್ಥಾಪಿಸಬೇಕೆಂದರು. ಸಭೆಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಠ್ಠಪ್ಪ.ಗೋರಂಟ್ಲಿ ಅವರು ಕಮೂನಿಷ್ಟ್ ಪಕ್ಷದ
ಸದಸ್ಯರಾದವರು ಅದರ ತತ್ವ ಮೈಗೂಡಿಸಿಕೊಂಡರೆ ಸಾಯುವವರೆಗೆ ಪ್ರಾಮಾಣಿಕವಾಗಿ ಜನಸಾಮಾನ್ಯರ
ಪರವಾಗಿ ಹೋರಾಡುತ್ತಾರೆ. ಎ.ಬಿ.ಬರ್ಧನ್ ಅವರು ೧೯೫೪ ರಿಂದಲೇ ಪಾರ್ಲಿಮೆಂಟ್ ಒಳಗೆ ಮತ್ತು
ಹೊರಗೆ ಪ್ರಮಾಣಿಕವಾಗಿ ದುಡಿಯುತ್ತಲೇ ಬಂದವರು. ಅವರ ಪಕ್ಷ ನಿಷ್ಠೆ ಮತ್ತು ಬದ್ಧತೆ
ಮಾದರಿಯಾದದ್ದು, ಪ್ರಸನ್ನ ಕುಮಾರ್ ಅವರು ಸಹಿತ ಕಮೂನಿಷ್ಟ್ ಪಕ್ಷದ ನಿಷ್ಠಾವಂತ
ಮುಖಂಡರಾಗಿ ತಮ್ಮ ಜೀವನವನ್ನೇ ಸಮಾಜ ಸೇವೆಗೆ ಅರ್ಪಿಸಿಕೊಂಡವರು. ಈ ರೀತಿಯ ಸಾಮಾಜಿಕ
ಹೋರಾಟದ ಬದ್ಧತೆಯನ್ನು ಈಗಿನ ಯುವಜನತೆ ಪ್ರಾಮಾಣಿಕವಾಗಿ ಸ್ವೀಕರಿಸಿ ಹೋರಾಡಬೇಕೆಂದು ಕರೆ
ನೀಡಿದರು. ಜನವರಿ ೦೩ ೨೦೧೬ ಸಂಜೆ ೦೪:೦೦ ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ
ಮೌನಾಚರಣೆ ಮಾಡಿ ಸಂತಾಪ ಸಭೆ ನಡೆಸಲಾಯಿತು. ಸಂತಾಪ ಸಭೆಯಲ್ಲಿ ಭಾರಧ್ವಾಜ್,
ಡಿ.ಎಚ.ಪೂಜಾರ್, ಬಸವರಾಜ.ಶೀಲವಂತರು, ಮಣ್ಣೂರು.ಕೆಎಸ್.ಆರ್.ಟಿ.ಸಿ,
ಶಿವಶಂಕರ.ಹಾಲ್ಕುರಿಕಿ, ಶಿವಪ್ಪ.ಹಡಪದ, ಮುತ್ತು, ಡಿ.ಸಿ.ಅನಿಲ್‌ಕುಮಾರ್ ಮುಂತಾದವರು
ಉಪಸ್ಥಿತರಿದ್ದರು.
Home
»
Koppal News
»
koppal organisations
» ಕಾಮ್ರೇಡ್||ಬರ್ದನ್ ಮತ್ತು ಕಾಮ್ರೇಡ್|| ಪ್ರಸನ್ನಕುಮಾರ್ ನಿಧನಕ್ಕೆ ಸಂತಾಪ.
Subscribe to:
Post Comments (Atom)
0 comments:
Post a Comment