ಕೊಪ್ಪಳ, ಜ.೦೨ (ಕ ವಾ) ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ
ಪೋಷಕರ ಮಕ್ಕಳಿಗೆ ಯಲಬುರ್ಗಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ
ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ
ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಯಲಬುರ್ಗಾ ತಾಲೂಕಿನಲ್ಲಿ ಚರ್ಮ ಹದಮಾಡುವುದು,
ಚರ್ಮ ಸುಲಿಯುವುದು, ಚಿಂದಿ ಆಯುವುದು ಇತ್ಯಾದಿ ಅನೈರ್ಮಲ್ಯ ಪರಿಸರದಲ್ಲಿ ಕೆಲಸ ಮಾಡುವವರ
ಮಕ್ಕಳು ಹಲವಾರು ಕಾರಣಗಳಿಂದ ಶಾಲೆಗೆ ಹೋಗದಿರುವ ಸಾಧ್ಯತೆಗಳು ಹೆಚ್ಚು. ಇಂತಹ ಮಕ್ಕಳ
ಶಾಲಾ ದಾಖಲಾತಿಗೆ ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗುವುದು. ಯೋಜನೆಯ
ನಿಲಯವಾಸಿಗಳ ವಿದ್ಯಾರ್ಥಿ ವೇತನದಡಿ ೩ ರಿಂದ ೧೦ನೇ ತರಗತಿಯವರೆಗೆ ಮಾಸಿಕ ೭೦೦ ರೂ.
ವಿದ್ಯಾರ್ಥಿ ವೇತನ ಹಾಗೂ ೧೦೦೦ ರೂ.ಗಳ ವಾರ್ಷಿಕ ಅಡಾಕ್ ಗ್ರಾಂಟ್ ನೀಡಲಾಗುವುದು. ಡೇ
ಸ್ಕಾಲರ್ ವಿದ್ಯಾರ್ಥಿ ವೇತನದಡಿ ೧ ರಿಂದ ೧೦ನೇ ತರಗತಿಯವರೆಗೆ ಮಾಸಿಕ ೧೧೦ ರೂ.
ವಿದ್ಯಾರ್ಥಿ ವೇತನ ಹಾಗೂ ೭೫೦ ರೂ.ಗಳ ವಾರ್ಷಿಕ ಅಡಾಕ್ ಗ್ರಾಂಟ್
ನೀಡಲಾಗುವುದು.ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಭಾರತದ ಯಾವುದೇ ಜನಾಂಗ ಹಾಗೂ
ಧರ್ಮದವರು ಅರ್ಜಿ ಸಲ್ಲಿಸಬಹುದಾಗಿದೆ. ಅನೈರ್ಮಲ್ಯ ವೃತ್ತಿಯಲ್ಲಿ ಪೋಷಕರು
ತೊಡಗಿರುವುದಕ್ಕೆ ಪುರಾವೆಯಾಗಿ ಪಟ್ಟಣ ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿಯಿಂದ ದೃಢೀಕರಣ
ಪಡೆದು ಲಗತ್ತಿಸಬೇಕು. ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವವರು ದತ್ತು
ಪಡೆದುಕೊಂಡಿದ್ದಲ್ಲಿ ಅಂತಹ ಮಕ್ಕಳಿಗೂ ಸಹ ವಿದ್ಯಾರ್ಥಿ ವೇತನ ನೀಡಲಾಗುವುದು. ಹೆಚ್ಚಿನ
ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಯಲಬುರ್ಗಾ, ದೂರವಾಣಿ ಸಂಖ್ಯೆ
: ೦೮೫೩೪-೨೨೦೪೨೬ ನ್ನು ಸಂಪರ್ಕಿಸಬಹುದಾಗಿದೆ.
Home
»
Koppal News
»
koppal organisations
» ಅನೈರ್ಮಲ್ಯ ವೃತ್ತಿಯಲ್ಲಿರುವ ಪೋಷಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ.
Subscribe to:
Post Comments (Atom)
0 comments:
Post a Comment