PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-10-  ಮುಂಬರುವ ಫೆಬ್ರುವರಿ ೨೮ರಂದು ನಡೆಯಲಿರುವ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರು ಹಾಗೂ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
    ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೇಲೆ ರಾಜ್ಯಮಟ್ಟದ ೧೪ನೇ ಮತ್ತು ೧೭ನೇ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಕೊಪ್ಪಳ ಜಿಲ್ಲಾ ಮಟ್ಟದ ೬ ಸಮ್ಮೇಳನಗಳನ್ನು ಹಮ್ಮಿಕೊಂಡು ಈಗ ೭ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸಿದ್ದತೆ ನಡೆದಿದೆ. ಚುಟುಕು ಸಿರಿ, ಕಾಯಕ ಸಿರಿ, ಗವಿಸಿರಿ, ಚುಟುಕು ತರಂಗ, ಗವಿಬೆಳಕು, ಶರಣ ಪಥಿಕ, ಗಾನಯೋಗಿ, ಮೂಗುತಿ ಮಹಿಮೆ, ದಕ್ಷ ಆಡಳಿತಗಾರ, ಸಹೃದಯಿ, ಹಾಡು-ಪಾಡು, ಅಪರಿಮತದ ಬೆಳಗು, ಕಂಬಾರರಿಗೆ ಜ್ಞಾನಪೀಠ ಅಭಿನಂದನೆ, ಸ್ವಾತಂತ್ರ್ಯ ಸೇನಾನಿ ಶಂಕ್ರಪ್ಪ ಯರಾಶಿ, ಕರ್ನಾಟಕದ ಹುಲಿ, ಮನಸ್ಸು ಮಲ್ಲಿಗೆ, ರಂಗಭೂಮಿಯ ಜಂಗಮ, ಚೈತನ್ಯಶೀಲ ಸಂಶೋಧಕ, ಮರೆಯಲಾಗದ ನೆನಪುಗಳು, ಸಾರ್ಥಕ ಬದುಕು, ಸದಭಿರುಚಿಯ ಸರದಾರ, ಕಾಡಿನ ಹೂ, ಜ್ಞಾನ ದೀಪ್ತಿ, ಚುಟುಕು ಚಿಲುಮೆ, ಜಾನಪದ ಸಿರಿ, ಹೇಮಗಿರಿ, ಒಡಲ್ಲಿಲ್ಲದಂಬಿಗ ಸೇರಿದಂತೆ  ಸಾಹಿತ್ಯಿಕವಾಗಿ ಒಟ್ಟು ೨೭ ಗ್ರಂಥಗಳನ್ನು ಹೊರತಂದಿದ್ದೇನೆ.
    ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಈ ಸಲ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.

Advertisement

0 comments:

Post a Comment

 
Top