PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೨೮ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ೨೯ ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ. 
     ಕುಷ್ಟಗಿ ತಾಲೂಕಿನಲ್ಲಿ ಹನಮನಾಳ, ಹನಮಸಾಗರ, ಚಳಗೇರಾ, ಕೊರಡಕೇರಾ, ಹಿರೇಮನ್ನಾಪುರ, ಯರಗೇರಾ ಮತ್ತು ಮೆಣೇಧಾಳ ಕ್ಷೇತ್ರಗಳಿದ್ದು, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೊಪ್ಪಳ ಇವರನ್ನು ಚುನಾವಣಾಧಿಕಾರಿಯನ್ನಾಗಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್, ಕುಷ್ಟಗಿ ಇವರನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
     ಕೊಪ್ಪಳ ತಾಲೂಕಿನಲ್ಲಿ ಅಳವಂಡಿ, ಹಿರೇಸಿಂಧೋಗಿ, ಲೇಬಗೇರಿ, ಇರಕಲ್ಲಗಡಾ, ಬಂಡಿಹರ್ಲಾಪುರ, ಹಿಟ್ನಾಳ, ಗಿಣಗೇರಾ, ಗೊಂಡಬಾಳ ಕ್ಷೇತ್ರಗಳಿದ್ದು ಚುನಾವಣಾಧಿಕಾರಿ-ಉಪವಿಭಾಗಾಧಿಕಾರಿಗಳು, ಕೊಪ್ಪಳ ಹಾಗೂ ಸಹಾಯಕ ಚುನಾವಣಾಧಿಕಾರಿ-ಗ್ರೇಡ್-೨ ತಹಶೀಲ್ದಾರ, ಕೊಪ್ಪಳ ಇವರನ್ನು ನೇಮಿಸಲಾಗಿದೆ.
     ಗಂಗಾವತಿ ತಾಲೂಕಿನಲ್ಲಿ ಆನೇಗುಂದಿ, ಮರಳಿ, ಸಿದ್ದಾಪುರ, ಹೇರೂರು, ಹುಲಿಹೈದರ್, ನವಲಿ, ಯರಡೋಣಾ, ಚಿಕ್ಕಮಾದಿನಾಳ-ವೆಂಕಟಗಿರಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, ಚುನಾವಣಾಧಿಕಾರಿ-ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಕೊಪ್ಪಳ ಹಾಗೂ ಸಹಾಯಕ ಚುನಾವಣಾಧಿಕಾರಿ-ಸಹಾಯಕ ಕೃಷಿ ನಿರ್ದೇಶಕರು, ಗಂಗಾವತಿ ಇವರನ್ನು ನೇಮಿಸಲಾಗಿದೆ.
     ಯಲಬುರ್ಗಾ ತಾಲೂಕಿನಲ್ಲಿ ಹಿರೇವಂಕಲಕುಂಟಾ, ಚಿಕ್ಕಮ್ಯಾಗೇರಿ, ಮಂಗಳೂರ, ತಳಕಲ್ಲ, ಇಟಗಿ ಮತ್ತು ಮುಧೋಳ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದು, ಚುನಾವಣಾಧಿಕಾರಿ- ಉಪನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಪ್ಪಳ ಹಾಗೂ ಸಹಾಯಕ ಚುನಾವಣಾಧಿಕಾರಿ-ಕ್ಷೇತ್ರ ಶಿಕ್ಷಣಾಧಿಕಾರಿಗಳು, ಯಲಬುರ್ಗಾ ಇವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ. 

ಕೃಷಿಕರಿಗೆ ರಾಜ್ಯ ಮಟ್ಟದ ತರಬೇತಿ ಶಿಬಿರ.

ಕೊಪ್ಪಳ, ಜ.೨೮ (ಕ ವಾ) ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟ ಇವರ ವತಿಯಿಂದ ತರಕಾರಿ, ಪುಷ್ಪ ಬೆಳೆಗಳ ಮತ್ತು ಸಂರಕ್ಷಿತ ಬೇಸಾಯ (ಗ್ರೀನ್‌ಹೌಸ್) ಕ್ರಮಗಳ ಬಗ್ಗೆ ಮೂರು ದಿನಗಳ ರಾಜ್ಯ ಮಟ್ಟದ ತರಬೇತಿ ಶಿಬಿರವನ್ನು ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಏರ್ಪಡಿಸಲಾಗಿದೆ.
      ವಿವಿಧ ತರಕಾರಿ ಮತ್ತು ಪುಷ್ಪ ಬೆಳೆಗಳಲ್ಲಿ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ತ ನೀರಾವರಿ ಪದ್ಧತಿಗಳು, ಕೊಯ್ಲೋತ್ತರ ಹಾಗೂ ಸಂಸ್ಕರಣಾ ಕ್ರಮಗಳು, ಮಾರುಕಟ್ಟೆ ವಿಧಾನಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು. ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಫೆ.೧೫ ರೊಳಗಾಗಿ ಕೇಂದ್ರದಲ್ಲಿ ನೊಂದಾಯಿಸಬಹುದು. 
      ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟ-೫೮೭೧೦೩, ಮೊಬೈಲ್: ೯೪೮೨೬೩೦೭೯೦ ಇವರನ್ನು ಸಂಪರ್ಕಿಸಬಹುದು ಎಂದು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ಹೆಚ್.ಸಿ ಅವರು ತಿಳಿಸಿದ್ದಾರೆ. 

ತಾಲೂಕಾ ಪಂಚಾಯತಿ ಚುನಾವಣೆ ಚುನಾವಣಾಧಿಕಾರಿಗಳ ನೇಮಕ.
ಕೊಪ್ಪಳ, ಜ.೨೮ (ಕ ವಾ) ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ನಾಲ್ಕೂ ತಾಲೂಕುಗಳ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ   ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.
ಯಲಬುರ್ಗಾ ತಾಲೂಕಿನ  ತಾ.ಪಂ. ಕ್ಷೇತ್ರ ಸಂಖ್ಯೆ ೦೧ ರಿಂದ ೧೨ ರವರೆಗೆ ಅಂದರೆ, ಗಾಣಧಾಳ, ತಾಳಕೇರಿ, ಹಿರೇವಂಕಲಕುಂಟಾ, ಮಾಟಲದಿನ್ನಿ, ಹಿರೇಅರಳಿಹಳ್ಳಿ, ಗೆದಿಗೇರಿ, ಮುರಡಿ, ವಜ್ರಬಂಡಿ, ಬಂಡಿ, ಹಿರೇಮ್ಯಾಗೇರಿ, ಮುಧೋಳ, ಕರಮುಡಿ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ತಹಶೀಲ್ದಾರರು, ಯಲಬುರ್ಗಾ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ದೈಹಿಕ ಶಿಕ್ಷಣಾಧಿಕಾರಿಗಳು, ಯಲಬುರ್ಗಾ ಇವರನ್ನು ನೇಮಿಸಲಾಗಿದೆ. ತಾ.ಪಂ. ಕ್ಷೇತ್ರ ಸಂಖ್ಯೆ ೧೩ ರಿಂದ ೨೪ ರವರೆಗೆ ಅಂದರೆ, ಮಂಗಳೂರು, ಬೇವೂರು, ಕುದ್ರಿಮೋತಿ, ಹಿರೇಬಿಡನಾಳ, ಇಟಗಿ, ರಾಜೂರ, ಬಳಿಗೇರಿ, ಶಿರೂರ, ಯರೇಹಂಚಿನಾಳ, ತಳಕಲ್, ಬನ್ನಿಕೊಪ್ಪ, ಬೆಣಕಲ್ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್, ಯಲಬುರ್ಗಾ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಹಾಯಕ ನಿರ್ದೇಶಕರು, ನರೇಗಾ ಯೋಜನೆ, ತಾಲೂಕಾ ಪಂಚಾಯತ್, ಯಲಬುರ್ಗಾ ಇವರನ್ನು ನೇಮಿಸಲಾಗಿದೆ.
ಗಂಗಾವತಿ ತಾಲೂಕಿನ ತಾ.ಪಂ. ಕ್ಷೇತ್ರ ಸಂಖ್ಯೆ ೦೧ ರಿಂದ ೧೬ ರವರೆಗೆ ಅಂದರೆ, ಆನೇಗುಂದಿ, ಸಂಗಾಪೂರ, ಬಸಾಪಟ್ಟಣ, ಚಿಕ್ಕಜಂತಕಲ್, ಜಂಗಮರಕಲ್ಗುಡಿ, ಶ್ರೀರಾಮನಗರ, ಹೊಸಕೇರಾ, ಮುಸ್ಟೂರ, ಈಳಿಗನೂರು, ಉಳೇನೂರು, ಸಿದ್ದಾಪುರ, ಗುಂಡೂರು, ಬೂದಗುಂಪಾ, ಯರಡೋಣಾ, ಚಳ್ಳೂರ, ವಡ್ಡರಹಟ್ಟಿ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ತಹಶೀಲ್ದಾರರು, ಗಂಗಾವತಿ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಹಾಯಕ ಅಭಿಯಂತರರು, ಸ.ಕಾ.ನಿ.ಅ ಕಾರ್ಯಾಲಯ, ಜಿಲ್ಲಾ ಪಂಚಾಯತ್ ಉಪವಿಭಾಗ, ಗಂಗಾವತಿ ಇವರನ್ನು ನೇಮಿಸಲಾಗಿದೆ.  ತಾ.ಪಂ. ಕ್ಷೇತ್ರ ಸಂಖ್ಯೆ ೧೭ ರಿಂದ ೩೧ ರವರೆಗಿನ ಅಂದರೆ, ಹೇರೂರ, ಹಣವಾಳ, ಕೆಸರಟ್ಟಿ, ವೆಂಕಟಗಿರಿ, ಹಿರೇಬೆಣಕಲ್, ಚಿಕ್ಕಮಾದಿನಾಳ, ಆಗೋಲಿ, ಸುಳೇಕಲ್, ಹಿರೇಖೇಡಾ, ಹುಲಿಹೈದರ, ಗೌರಿಪುರ, ನವಲಿ, ಬೇವಿನಾಳ, ಮೈಲಾಪುರ ಮತ್ತು ಜೀರ್‍ಹಾಳ ಕಲ್ಗುಡಿ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗಂಗಾವತಿ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಗಂಗಾವತಿ ಇವರನ್ನು ನೇಮಿಸಲಾಗಿದೆ.
ಕುಷ್ಟಗಿ ತಾಲೂಕಿನ ತಾ.ಪಂ. ಕ್ಷೇತ್ರ ಸಂಖ್ಯೆ ೦೧ ರಿಂದ ೧೩ ರವರೆಗಿನ ಅಂದರೆ, ನಿಲೋಗಲ್ಲ, ತುಗ್ಗಲದೋಣಿ, ಹನುಮನಾಳ, ಮಾಲಗಿತ್ತಿ, ಹನುಮಸಾಗರ, ಕಬ್ಬರಗಿ, ಕಾಟಾಪುರ, ಹೂಲಗೇರಾ, ಕುಂಭಳಾವತಿ, ಬೆನಕನಾಳ, ಯರಗೇರಾ, ಅಡವಿಭಾವಿ ಮತ್ತು ಚಳಗೇರ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ತಹಶೀಲ್ದಾರರು, ಕುಷ್ಟಗಿ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಪತಹಶೀಲ್ದಾರರು, ನಾಡ ಕಾರ್ಯಾಲಯ, ಹನುಮಸಾಗರ ಇವರನ್ನು ನೇಮಿಸಲಾಗಿದೆ. ತಾ.ಪಂ. ಕ್ಷೇತ್ರ ಸಂಖ್ಯೆ ೧೪ ರಿಂದ ೨೫ ರವರೆಗೆ ಅಂದರೆ, ಕ್ಯಾದಿಗುಪ್ಪ, ಬಿಜಕಲ್ಲ, ಕಂದಕೂರು, ತಳುವಗೇರ, ಕೊರಡಕೇರ, ಹಿರೇಮನ್ನಾಪುರ, ಮುದೇನೂರು, ದೋಟಿಹಾಳ, ಜುಮಲಾಪುರ, ಹುಲಿಯಾಪುರ, ಕಳಮಳ್ಳಿ ಮತ್ತು ಮೆಣೇದಾಳ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕುಷ್ಟಗಿ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಷ್ಟಗಿ ಇವರನ್ನು ನೇಮಿಸಲಾಗಿದೆ.
ಕೊಪ್ಪಳ ತಾಲೂಕಿನ ತಾ.ಪಂ. ಕ್ಷೇತ್ರ ಸಂಖ್ಯೆ ೦೧ ರಿಂದ ೧೫ ರವರೆಗೆ ಅಂದರೆ, ಕವಲೂರು, ಅಳವಂಡಿ, ಬೋಚನಹಳ್ಳಿ, ಮತ್ತೂರ, ಬೆಟಗೇರಿ, ಕಾತರಕಿ ಗುಡ್ಲಾನೂರ, ಬಿಸರಳ್ಳಿ, ಹಿರೇಸಿಂಧೋಗಿ ಹಲಗೇರಾ, ಚಿಲವಾಡಗಿ, ಕಿನ್ನಾಳ, ಲೇಬಗೇರಾ, ಇಡಕಲ್ಲಗಡಾ, ಚಿಕ್ಕಬೊಮ್ಮನಾಳ ಮತ್ತು ವಣಬಳ್ಳಾರಿ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ತಹಶೀಲ್ದಾರರು, ಕೊಪ್ಪಳ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಪತಹಶೀಲ್ದಾರರು, ನಾಡ ಕಾರ್ಯಾಲಯ, ಇರಕಲ್ಲಗಡಾ ಇವರನ್ನು ನೇಮಿಸಲಾಗಿದೆ. ತಾ.ಪಂ. ಕ್ಷೇತ್ರ ಸಂಖ್ಯೆ ೧೬ ರಿಂದ ೨೯ ರವರೆಗಿನ ತಾಲೂಕಾ ಪಂಚಾಯತ್ ಕ್ಷೇತ್ರಗಳಾದ ಬಂಡಿಹರ್ಲಾಪುರ, ಅಗಳಕೇರಾ, ಹುಲಗಿ, ಹಿಟ್ನಾಳ, ಹೊಸಳ್ಳಿ, ಮುನಿರಾಬಾದ್ ಯೋಜನಾ ಗ್ರಾಮ, ಗಿಣೀಗೇರಾ, ತಾವರಗೇರಾ, ಕೂಕನಪಳ್ಳಿ, ಬೂದಗುಂಪಾ, ಕರ್ಕಿಹಳ್ಳಿ, ಕುಣಿಕೇರಿ, ಮುದ್ದಾಬಳ್ಳಿ ಮತ್ತು ಬಹದ್ದೂರಬಂಡಿ ತಾಲೂಕಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ್, ಕೊಪ್ಪಳ ಇವರನ್ನು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಉಪತಹಶೀಲ್ದಾರರು, ನಾಡ ಕಾರ್ಯಾಲಯ, ಅಳವಂಡಿ ಇವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು  ಆದೇಶದಲ್ಲಿ ತಿಳಿಸಿದ್ದಾರೆ. 

ಭಾರತೀಯ ವಾಯುಪಡೆಗೆ ನೇಮಕಾತಿ ರ್‍ಯಾಲಿ.
ಕೊಪ್ಪಳ ಜ. ೨೮ (ಕರ್ನಾಟಕ ವಾರ್ತೆ) ಭಾರತೀಯ ವಾಯುಪಡೆಯಲ್ಲಿ 'ವೈ' ಗುಂಪಿನ ಏರ್‌ಮೆನ್ (ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‌ಟ್ರಕ್ಟರ್,ಐ.ಎ.ಎಫ್ (ಪೊಲೀಸ್) ಮತ್ತು ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳ ಭರ್ತಿಗಾಗಿ ಫೆ. ೧೭ ರಂದು ಚಾಮುಂಡಿ ವಿಹಾರ್ ಕ್ರೀಡಾಂಗಣ, ನಜರಬಾದ್, ಮೈಸೂರು ಇಲ್ಲಿ ನೇರ ನೇಮಕಕ್ಕಾಗಿ ರ್‍ಯಾಲಿ ಆಯೋಜಿಸಲಾಗಿದೆ. 
     ಕರ್ನಾಟಕ ರಾಜ್ಯದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ರ್‍ಯಾಲಿಯಲ್ಲಿ ಭಾಗವಹಿಸಲು ಅರ್ಹರು.  ಅಭ್ಯರ್ಥಿಗಳು ದಿನಾಂಕ: ೧-೮-೧೯೯೬ ರಿಂದ ೩೦-೧೧-೧೯೯೯ ರ ಅವಧಿಯಲ್ಲಿ ಜನಿಸಿದವರಾಗಿರಬೇಕು.
ವಿದ್ಯಾರ್ಹತೆ:  'ವೈ'  ಗುಂಪಿನ ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‌ಟ್ರಕ್ಟರ್, ಐ.ಐ.ಎಫ್ (ಪೊಲೀಸ್) ಹುದ್ದೆಗಳಿಗೆ ಯಾವುದೇ ವಿಷಯಗಳಲ್ಲಿ ೧೦ + ೨ ಅಥವಾ ದ್ವಿತೀಯ ಪಿ.ಯು.ಸಿ.ಯಲ್ಲಿ ಸರಾಸರಿ ಕನಿಷ್ಟ ಶೇ  ೫೦ ಅಂಕ ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ ೫೦ ಅಂಕ ಪಡೆದಿರಬೇಕು. ಅಥವಾ ಸಿ.ಬಿ.ಎಸ್.ಇ/ರಾಜ್ಯ ಶಿಕ್ಷಣ ಮಂಡಳಿ /ಪರಿಷತ್‌ನಿಂದ ಅಂಗೀಕೃತವಾದ ಹಾಗೂ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್‌ನಿಂದ ೧೦+೨ ಕ್ಕೆ ತತ್ಸಮಾನ ಎಂದು ಪರಿಗಣಿಸಲ್ಪಟ್ಟಿರುವ ಎರಡು ವರ್ಷಗಳ ವೃತ್ತಿಪರ ಶಿಕ್ಷಣದಲ್ಲಿ ಸರಾಸರಿ ಶೇ ೫೦ ಅಂಕಗಳಿಸಿ ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ ೫೦ ಅಂಕ ಗಳಿಸಿರಬೇಕು.  ವೃತ್ತಿಪರ ಶಿಕ್ಷಣದಲ್ಲಿ ಇಂಗ್ಲೀಷ್ ಭಾಷೆ ಇಲ್ಲದಿದ್ದಲ್ಲಿ ಇಂಡರ್‌ಮೀಡಿಯೆಟ್/ ಮೆಟ್ರಿಕುಲೇಷನ್‌ನ ಇಂಗ್ಲೀಷ್ ವಿಷಯದಲ್ಲಿ ಶೇ ೫೦ ಅಂಕ ಗಳಿಸಿರಬೇಕು.
    'ವೈ' ಗುಂಪಿನ ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ೧೦+೨ ಅಥವಾ ದ್ವಿತೀಯ ಪಿ.ಯು.ಸಿ. ಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಆಂಗ್ಲ ಭಾಷೆ ವಿಷಯಗಳನ್ನು ಹೊಂದಿದ್ದು, ಸರಾಸರಿ ಶೇ ೫೦ ಅಂಕ ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ ೫೦ ಅಂಕ ಪಡೆದಿರಬೇಕು.
    ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯ ಮೂಲ ಅಂಕ ಪಟ್ಟಿಗಳು, ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ ೪ ಸೆಟ್ ಜೆರಾಕ್ಸ್ ಪ್ರತಿಗಳು ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ೭ ಭಾವಚಿತ್ರಗಳೊಂದಿಗೆ ದಿನಾಂಕ: ೧೭-೨-೨೦೧೬ ರಂದು ಬೆಳಿಗ್ಗೆ ಚಾಮುಂಡಿ ವಿಹಾರ ಕ್ರೀಡಾಂಗಣ, ನಜಿರಬಾದ್, ಮೈಸೂರು ಇಲ್ಲಿ ಹಾಜರಾಗುವುದು.  ಅರ್ಹತಾ ನಿಬಂಧನೆಗಳು, ವೈದ್ಯಕೀಯ ವಾಯುದಳದ ವೆಬ್‌ಸೈಟ್ ತಿತಿತಿ.ಚಿiಡಿmeಟಿseಟeಛಿಣioಟಿ.gov.iಟಿ ಗೆ ಭೇಟಿ ನೀಡಿ ಅಥವಾ, ೭ ಏರ್‌ಮೆನ್ ಸೆಲೆಕ್ಷನ್ ಸೆಂಟರ್, ನಂ. ೦೧, ಕಬ್ಬನ್ ರಸ್ತೆ, ಬೆಂಗಳೂರು-೦೧  ಈ ಕಚೇರಿಯನ್ನು ದೂರವಾಣಿ ಸಂಖ್ಯೆ ೦೮೦-೨೫೫೯೨೧೦೦, ಇ-ಮೇಲ್ ವಿಳಾಸ ಮೂಲಕ ಸಂಪರ್ಕಿಸಿ ಅಭ್ಯರ್ಥಿಗಳು ಹತ್ತಿರದ ಉದ್ಯೋಗ ವಿನಿಯಮ ಕೇಂದ್ರವನ್ನು ಸಹ ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು.

Advertisement

0 comments:

Post a Comment

 
Top