PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜ. ೨೫ (ಕ ವಾ) ಕೊಪ್ಪಳ ನಗರದಲ್ಲಿ ಜರುಗುವ  ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ಆವರಣದಲ್ಲಿ ತೋಟಗಾರಿಕೆ ಇಲಾಖೆ (ಜಿ.ಪಂ) ಕೊಪ್ಪಳ ವತಿಯಿಂದ ವಿಶೇಷ ಫಲ ಪುಷ್ಟ ಪ್ರದರ್ಶನವನ್ನು ಜ. ೨೬ ರಿಂದ ೨೮ ರವರೆಗೆ ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ಫಲ ಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯ ಫಲ ಪುಷ್ಪ ಪ್ರದರ್ಶನದ ವಿಶೇಷತೆಗಳೆಂದೆರೆ,  ಪುಷ್ಪಾಲಂಕೃತ  ಶ್ರೀ ಗವಿಸಿದ್ದೇಶ್ವರ ರಥ, ಅಲ್ಲದೆ ಪುಷ್ಪಾಲಂಕೃತ  ಶ್ರೀ ಗವಿಸಿದ್ದೇಶ್ವರ ಮಹಾದ್ವಾರ. ಪುಷ್ಪಾಲಂಕೃತ  ಶ್ರೀ ಶಿವಶಾಂತವೀರ ಸ್ವಾಮಿಗಳು ಉಪಯೋಗಿಸಿದ ಬಂಡಿ. ವರ್ಟಿಕಲ್ ಗಾರ್ಡನ್.  ವಿವಿಧ ತರಕಾರಿ ಕೆತ್ತನೆಗಳು.  ಪುಷ್ಪದಿಂದ ರಚಿಸಿದ ವಿವಿಧ ವಿನ್ಯಾಸದ ರಂಗೋಲಿಗಳು.  ಅಲಂಕಾರಿಕ ಸಸ್ಯ ಕುಂಡಗಳ ಜೋಡಣೆ. ಮನಸೂರೆಗೊಳ್ಳುವ ಪುಷ್ಪಾಲಂಕೃತವಾದ ವಿವಿಧ ಕೃತಕ ಮಾದರಿಗಳು.  ಜಿಲ್ಲೆಯ ನಾನಾ ಭಾಗದ ರೈತರು ಬೆಳೆದ ಮಾದರಿ ಹಣ್ಣು ಮತ್ತು ತರಕಾರಿ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳ ಪ್ರದರ್ಶನ.  ಔಷಧಿ ಸಸ್ಯಗಳ ಪ್ರದರ್ಶನ ಮತ್ತು ಮಾಹಿತಿ.  ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ  ವಿವಿಧ ಯೋಜನೆಗಳ ಬಗ್ಗೆ ಫ್ಲೆಕ್ಸ್‌ಗಳ ಮೂಲಕ ಮಾಹಿತಿ. ವಿದ್ಯಾರ್ಥಿಗಳಿಂದ ರಚಿತವಾದ ವಿವಿಧ ಮಾದರಿಗಳ ಪ್ರದರ್ಶನ ಇರಲಿದೆ.       ಇದರ ಜೊತೆಗೆ ಇಲಾಖೆಯ ವಿವಿಧ ಯೋಜನೆಗಳನ್ನು ಬಿಂಬಿಸುವ ಮಾಹಿತಿಗಳನ್ನು ಇಲ್ಲಿ ಒದಗಿಸಲಾಗುವುದು.  ಈ ವಿಶೇಷ ಫಲ ಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ರೈತ ಬಾಂಧವರು ಭೇಟಿ ನೀಡಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರಾದ ಶ್ರೀ ಶಶಿಕಾಂತ ಕೋಟಿಮನಿ ರವರು ಮನವಿ ಮಾಡಿಕೊಂಡಿದ್ದಾರೆ. 
ಗವಿಸಿದ್ದೇಶ್ವರ ಜಾತ್ರೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಮಾರ್ಗ ಬದಲಾವಣೆ.
ಕೊಪ್ಪಳ ಜ.೨೫ (ಕ ವಾ) ಶ್ರೀ ಗವಿಸಿದ್ದೇಶ್ವರನ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಜಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗಾಗಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಮಾರ್ಗ ಬದಲಾವಣೆಗಳನ್ನು ಮಾಡಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ. ಪಾರ್ಕಿಂಗ ವ್ಯವಸ್ಥೆ : ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಕುಷ್ಟಗಿ ರಸ್ತೆ ರೈಲ್ವೇ ಗೇಟ್ ಕಡೆಯಿಂದ ಬರುವ ಟಾಂ ಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಕುಷ್ಟಗಿ ರಸ್ತೆಯಲ್ಲಿರುವ ತಾಲೇಡಾ ಹೋಂಡಾ ಶೋ ರೂಂ ಎದುರು.  ಎಸ್‌ಎಫ್‌ಎಸ್ ಶಾಲೆ ಕಡೆಯಿಂದ ಆಗಮಿಸುವ ಟಾಂ ಟಾಂ, ಟ್ರ್ಯಾಕ್ಟರ್, ಲಾರಿ, ಆಟೋಗಳಿಗೆ ಶ್ರೀ ಮಲಿಯಮ್ಮ ಗುಡಿಯ ಹಿಂದುಗಡೆ ಖಾಲಿ ಸ್ಥಳದಲ್ಲಿ.

Advertisement

0 comments:

Post a Comment

 
Top