PLEASE LOGIN TO KANNADANET.COM FOR REGULAR NEWS-UPDATES

20 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆಯುವ ಈ ಚುನಾವಣೆಗಾಗಿ ಒಟ್ಟು 6,314 ಮತಗಟ್ಟೆಗಳನ್ನು ತೆರೆಯಲಾಗಿದೆ. ಒಟ್ಟು 1 ಲಕ್ಷದ 7 ಸಾವಿರ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಪರಿಷತ್‍ನ ಬಲಾಬಲ ಒಟ್ಟು 75 ಈ ಪೈಕಿ ಕಾಂಗ್ರೆಸ್‍ನ 12, ಬಿಜೆಪಿಯ 7, ಜೆಡಿಎಸ್‍ನ 5 ಮತ್ತು ಓರ್ವ ಪಕ್ಷೇತರ ಸದಸ್ಯ ನಿವೃತ್ತರಾಗಲಿದ್ದಾರೆ. ಸದ್ಯಕ್ಕೀಗ ಮೇಲ್ಮನೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‍ಗೆ 28 ಸ್ಥಾನವಿದ್ದು ಬಹುಮತವಿಲ್ಲ. ಹೀಗಾಗಿ 17 ಅಥವಾ 18 ಸ್ಥಾನಗಳನ್ನ ಗೆಲ್ಲಲೇಬೇಕು ಎನ್ನುವುದು ಕಾಂಗ್ರೆಸ್ ಗುರಿ. ಇನ್ನು ಬಿಜೆಪಿಗೆ ಇರುವವರನ್ನು ಉಳಿಸಿಕೊಳ್ಳುವುದರ ಜೊತೆಗೆ ಕಾಂಗ್ರೆಸ್‍ಗೆ ಡ್ಯಾಮೇಜ್ ಮಾಡುವ ತಂತ್ರ ಹೂಡಿದೆ. ಉಳಿದಂತೆ ಜೆಡಿಎಸ್‍ಗೆ ಹಳೇ ಮೈಸೂರಿನ ಪ್ರಾಬಲ್ಯವಿದ್ದರೂ ಇರೋದನ್ನು ಉಳಿಸಿಕೊಳ್ಳಬೇಕಿರುವ ಸವಾಲು ಎದುರಾಗಿದೆ. ಇದೀಗ 25 ಸ್ಥಾನಗಳಿಗೆ ನಡೆಯುತ್ತಿರೋ ಚುನಾವಣೆಯಲ್ಲಿ ಕಾಂಗ್ರೆಸ್ 21, ಬಿಜೆಪಿ 20, ಜೆಡಿಎಸ್ 18 ಕಡೆ ಸ್ಪರ್ಧಿಸಿದೆ.

Advertisement

0 comments:

Post a Comment

 
Top