PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-02- ತಾಲೂಕಿನ ದದೇಗಲ್ ಗ್ರಾಮದಲ್ಲಿ ಶ್ರೀ ಜಗದ್ಗುರು ಸಿದ್ಧಾರೂಢ ಮಹಾಸ್ವಾಮಿಗಳ ೨೬ ನೇ ಜಾತ್ರಾ ಮಹೋತ್ಸವ, ಶ್ರೀ ಸದ್ಗುರು ಸೋಮಲಿಂಗ ಮಹಾಸ್ವಾಮಿಗಳ ೧೨ ವರ್ಷದ ಪುಣ್ಯಾರಾಧನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಡಿಸೆಂಬರ್ ೪ ರಿಂದ ೬ರ ವರೆಗೆ ನಡೆಯಲಿವೆ. ಡಿಸೆಂಬರ್ ೬ ರಂದು ಸಾಮೂಹಿಕ ವಿವಾಹ ಹಾಗೂ ಶ್ರೀ ಸದ್ಗುರು ವಿದ್ಯಾನಂದ ಭಾರತಿ ಮಹಾಸ್ವಾಮಿಗಳ ತುಲಾಭಾರ, ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಲಿದೆ.
         ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳ ಸಾನಿಧ್ಯವನ್ನು ಕೊಪ್ಪಳದ ಶ್ರೀ ಸಂಸ್ಥಾನ ಗವಿಮಠದ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹಾಗೂ ಹೇಮಕೂಟದ ಶ್ರೀ ಶಿವರಾಮ ಅವಧೂತ ಆಶ್ರಮದ ಸದ್ಗುರು ಶ್ರೀ ವಿದ್ಯಾನಂದ ಭಾರತಿ ಮಹಾಸ್ವಾಮಿಗಳು ವಹಿಸುವರು.  ಹುಬ್ಬಳ್ಳಿ ಸಿದ್ಧಾರೂಢಮಠದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ನಗರದ ರಾಮಕೃಷ್ಣ ಆಶ್ರಮದ ಶ್ರೀ ಚೈತನ್ಯಾನಂದ ಸ್ವಾಮಿಗಳು, ಮೈನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಚಿಕೇನಕೊಪ್ಪದ ಶ್ರೀ ಶಂಭುಲಿಂಗಾರೂಢಮಠದ ಸದ್ಗುರು ಅನ್ನದಾನಿ ಭಾರತಿ ಮಹಾಸ್ವಾಮಿಗಳು ಧಾರ್ಮಿಕ ಉಪನ್ಯಾಸ ನೀಡುವರು.
            ಹನುಮಸಾಗರದ ಶಂಕ್ರಪ್ಪ ಶಾಸ್ತ್ರಿಗಳು, ವಿಠ್ಠಪ್ಪ ಗೋರಂಟ್ಲಿ, ಡಾ.ರಾಜಶೇಖರ ಹನುಮಸಾಗರ, ಈರಣ್ಣ ಹುರಕಡ್ಲಿ, ಗಂಗಮ್ಮ ತಾಯಿ, ವಿರೂಪಾಕ್ಷಪ್ಪ ಹುರಕಡ್ಲಿ, ಶರಣಪ್ಪ ಗುದಗಿ, ಬಸವರಾಜ ಇಂಗಳದಾಳ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ತಿಮ್ಮಪ್ಪ ಚಿನ್ನೂರು ಕುಟುಂಬದವರಿಂದ ಶ್ರೀ ವಿದ್ಯಾನಂದಭಾರತಿ ಮಹಾಸ್ವಾಮಿಗಳಿಗೆ ಹಾಗೂ ನಾಗಪ್ಪ ಪೂಜಾರಿ ಕುಟುಂಬದವರಿಂದ ದದೇಗಲ್‌ನ ಸಿದ್ಧಾರೂಢಮಠದ ಶ್ರೀ ಆತ್ಮಾನಂದ ಮಹಾಸ್ವಾಮಿಗಳಿಗೆ ತುಲಾಭಾರ ನಡೆಯಲಿದೆ. ಸಾರ್ವಜನಿಕರು ಜಾತ್ರಾಮಹೋತ್ಸವದಲ್ಲಿ ಭಾಗವಹಿಸುವಂತೆ ಸಂಚಾಲಕ ಕೋಟೇಶ ತಳವಾರ ಕೋರಿದ್ದಾರೆ.

Advertisement

0 comments:

Post a Comment

 
Top