PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-31- ಕಾಂಗ್ರೆಸ್ ಮುಖಂಡ ಹಾಗೂ ಕೊಪ್ಪಳ ಜಿಲ್ಲಾ ಉಪ್ಪಾರ ಸಮಾಜದ ಕಾರ್ಯಾಧ್ಯಕ್ಷ ಮರ್ದಾನಪ್ಪ ಬಿಸರಳ್ಳಿ (೬೩) ಇವರು ಗುರುವಾರ ಸಂಜೆ ೬.೨೦ಕ್ಕೆ ಬಳ್ಳಾರಿಯ ಬಿ.ಕೆ.ಶ್ರೀನಿವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಸುಮಾರು ೪೦ ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು. ರಾಜ್ಯ ಮಟ್ಟದ ಅನೇಕ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ಕೊಪ್ಪಳದ ಟಿಎಪಿಸಿಎಂಎಸ್‌ನ ಮಾಜಿ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ಹಾಲಿ ಸದಸ್ಯರಾಗಿದ್ದರು. ಉಪ್ಪಾರ ಸಮಾಜದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು, ತುಂಬಾ ಚಟುವಟಿಕೆಯ ವ್ಯಕ್ತಿಗಳಾಗಿದ್ದರು. ಕೊಪ್ಪಳ ತಾಲೂಕಿನ ಅಗಳಾಕೇರಾ ಗ್ರಾಮದಲ್ಲಿ ವಾಸವಾಗಿದ್ದ ಇವರದ್ದು ತುಂಬು ಕುಟುಂಬ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಮತ್ತು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮರ್ದಾನಪ್ಪ ಅವರ ನಿಧನಕ್ಕೆ ಮಾಜಿ ಸಂಸದ ಹೆಚ್.ಜಿ.ರಾಮುಲು, ಸಚಿವ ಶಿವರಾಜ್ ತಂಗಡಗಿ, ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕರಾದ ಬಸವರಾಜ್ ಇಟ್ನಾಳ್, ಹೆಚ್.ಸಿ.ನೀರಾವರಿ, ಶಾಸಕರಾದ ರಾಘವೇಂದ್ರ ಇಟ್ನಾಳ್, ಇಕ್ಬಾಲ್ ಅನ್ಸಾರಿ, ಅಮರೇಗೌಡ ಬಯ್ಯಾಪುರ, ಬಸವರಾಜ್ ರಾಯರೆಡ್ಡಿ, ಮಾಜಿ ಶಾಸಕ ಶ್ರೀರಂಗದೇವರಾಯಲು, ಜೆಡಿಎಸ್ ಪ್ರಮುಖರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೋಮಣ್ಣ ಇಂಗಳದಾಳ, ಗಂಗಾವತಿ ಪುರಸಭೆ ಮಾಜಿ ಅಧ್ಯಕ್ಷ ಅಮರಜ್ಯೋತಿ ದುರುಗಪ್ಪ, ನಗರಸಭೆ ಮಾಜಿ ಅಧ್ಯಕ್ಷ ದರೋಜಿ ದಾನಪ್ಪ, ನೌರರ ಸಂಘದ ತಾಲೂಕಾ ಅಧ್ಯಕ್ಷ ಕುಪ್ಪಣ್ಣ ಮಿಣಜಿಗಿ, ಮುಖಂಡರಾದ ಶಿವಣ್ಣ ಚಳ್ಳಿಕೇರಾ, ನರಸಪ್ಪ ಅಮರಜ್ಯೋತಿ, ಯಮನೂರಪ್ಪ ಹುಲಗಿ, ಕಟ್ಟೆಮನಿ ಯಂಕಪ್ಪ, ಇಂಗಳಗಿ ನಾಗರಾಜ್ ಸೇರಿದಂತೆ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top