PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-01- ಜಿಲ್ಲೆಯ ಆಸಕ್ತ ಯುವತಿ-ಯುವಕರಿಗೆ ೨೧ ದಿನಗಳ ಕಾಲ ಉಚಿತ ಊಟ ವಸತಿಯುತ ಯುವ ರಂಗ ಶಕ್ತಿ-೨೦೧೫ ಯುವ ರಂಗ ತರಬೇತಿ ಶಿಬಿರವು ಬಾಂದವಿ ಸಮಗ್ರ ಶಿಕ್ಷಣ ಚಿಕ್ಕಬಿಡ್ನಾಳದ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ೧೯೮೯ರಿಂದ ಪ್ರಾರಂದಿಂದಲೇ ವಿಸ್ತಾರ್ ಸಂಸ್ಥೆಯು ರಂಗಭೂಮಿ ಚಟುವಟಿಗಳನ್ನು ಮಾಡುತ್ತಲೇ ಬಂದಿರುತ್ತದೆ. ಇದೀಗ, ವಿಸ್ತಾರ್ ಕಮ್ಯೂನಿಟಿ ಕಾಲೇಜ್‌ನ ಅಡಿಯಲ್ಲಿ ವಿಸ್ತಾರ ರಂಗ ಶಿಕ್ಷಣ ಶಾಲೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಮಾನ್ಯತೆಯೊಂದಿಗೆ ಬರುವ ಜೂನ ೨೦೧೬ ರಿಂದ ರಂಗ ಶಿಕ್ಷಣ ಕೆಂದ್ರವನ್ನು ಪೂರ್ಣವದಿಯಾಗಿ ಪ್ರಾರಂಬಿಸುತ್ತಿರುವುದು ಸಂಬ್ರಮದ ವಿಷಯ. ಇದು ಭಾರತೀಯ ರಂಗ ಭೂಮಿಯಲ್ಲೇ ವಿಶೇಷವಾದ ಪಠ್ಯದೊಂದಿಗೆ ತಂತ್ರಜ್ಞರು ಮತ್ತು ಶಿಕ್ಷಕರೊಂದಿಗೆ ಪ್ರಾರಂಬವಾಗುvದೆ. ಇಲ್ಲಿ ಉತ್ತರ ಕರ್ನಾಟಕದ ಭಾಗದ ೨೦ ಜನ ಯುವತಿ-ಯುವಕರು ಸಂದರ್ಶನದ ಮೂಲಕ ಪ್ರವೇಶ ಪಡೆಯುತ್ತಾರೆ. ಅದರ ಪೂರ್ವ ತಯಾರಿಯಾಗಿ ಬೀದರ, ಬಿಜಾಪೂರ, ರಾಯಚೂರು, ಕೊಪ್ಪಳದಲ್ಲಿ ಒಟ್ಟು ೨೧ ದಿನಗಳ ೩ ರಂಗ ತರಬೇತಿ ಶಿಬಿರಗಳನ್ನು ಮಾಡಲು ವಿಸ್ತಾರ ಆಯೋಜಿಸುತ್ತಿದೆ. ಹೀಗಾಗಿ ಮೊದಲು ರಂಗ ತರಬೇತಿ ಶಿಬಿರ ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಚಿಕ್ಕಬಿಡ್ನಾಳದ ಬಾಂಧವಿ ಶಾಲೆಯಲ್ಲಿ ನಡೆಯಲಿದೆ. ಇದರಲ್ಲಿ ದಲಿತ-ದೇವದಾಸಿಯರ ಮಕ್ಕಳು ಹಾಗೂ ಅಲ್ಪಸಂಖ್ಯಾತ ಯುವತಿ-ಯುವಕರು ಭಾಗವಹಿಸಿ, ಸದುಪಯೋಗ ಪಡೆಯುತ್ತಿದ್ದಾರೆ. ಶಿಬಿರದಲ್ಲಿ ಅಭಿನಯ, ಯೋಗ ಕೋಲಾಟ, ರಂಗಗೀತೆಗಳು, ಚಿತ್ರಕಲೆ, ರಂಗಸಜ್ಜಿ, ಪರಿಕರ, ವಸ್ತವಿನ್ಯಾಸ, ಪ್ರಸಾದನ, ಪ್ರಸಿದ್ಧ ಚಲನಚಿತ್ರಗಳು, ನಾಟಕಗಳ ವಿಡಿಯೋ ಪ್ರದರ್ಶನೆಗಳು, ರಂಗಭೂಮಿಯ ಇತಿಹಾಸ, ಆಧುನಿಕ ರಂಗಭೂಮಿ, ರಂಗ ಕ್ರಿಯಾತ್ಮಕ ಆಟ-ಪಾಠಗಳು ಸೇರಿ ಹೆಚ್ಚಿನ ಭಾಗ ಚಟುವಟಿಕೆಗಳಿಂದ ಕೂಡಿರುತ್ತದೆ. ಶಿಬಿರದ ಕೊನೆಯಲ್ಲಿ ಶಿಬಿರಾರ್ಥಿಗಳು ಅವರೆ ಸಿದ್ಧಪಡಿಸಿರುವ ಒಂದು ಪೂರ್ಣಾವಧಿಯ ನಾಟಕವನ್ನು ಪ್ರದರ್ಶಿಸುತ್ತಾರೆ.  ಈ ಶಿಬಿರದಲ್ಲಿ ಶಿಬಿರಾರ್ಥಿಗಳೊಂದಿಗೆ ಸಾಹಿತಿಗಳು, ಕಲಾವಿದರು, ಜಾನಪದಕಲಾವಿದರು, ರಂಗ ನಿದೇಶಕರು, ತಂತ್ರಜ್ಞರು ಚರ್ಚೆ-ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

0 comments:

Post a Comment

 
Top