PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಡಿ,೧೩ ನಗರದ ಸಾಹಿತ್ಯ ಭವನದಲ್ಲಿ ರವಿವಾರ ನಿರ್ದೇಶಕ ತಿರುಪತಿ ರಾತೋಡ ರವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಚಲುವಿನ ಚಂದಿರ ಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭ ಜರುಗಿತು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರವರು ಧ್ವನಿ ಸುರಳಿ ಬಿಡುಗಡೆ ಮಾಡಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
   ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ರವರು ಮಾತನಾಡಿ ಉತ್ತರ ಕರ್ನಾಟಕ ಭಾಗದಿಂದ ಚಿತ್ರಿಕರಣಗೊಂಡು ನಿರ್ಮಾಣಗೊಳ್ಳುತ್ತಿರುವ ಕನ್ನಡ ಚಲನ
  ಈ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮತ್ತು ಕೆ.ಎಂ.ಸಯ್ಯದ್ ಸೇರಿದಂತೆ ಅನೇಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು,
  ವೇದಿಕೆಮೇಲೆ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ್,  ಇಂದಿರಾ ಬಾವಿಕಟ್ಟಿ, ಅಭಿಯಂತರಾದ ಲಷ್ಕರಿ ನಾಯಕ್, ರಾಮಣ್ಣ ಸಾಲಬಾವಿ, ವೀರಪ್ಪ ಕುಡಗುಂಟಿ, ಯುವ ಸಾಹಿತಿ ಮಂಜುನಾಥ ಗೊಂಡಬಾಳ. ನಾಯಕ ತಿರುಪತಿ ರಾಥೋಡ, ಚಂದ್ರಗುಪ್ತ ಬೇನಾಳ, ಶಿವು ಸಣ್ಣಗೌಡರ್, ಶಿವಾನಂದ ಹೊದ್ಲೂರ್, ಶರಣಪ್ಪ, ನಟಿ ಮಂಡ್ಯದ ಸನ್ನಿಧಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಚಿತ್ರ ಚಲುವಿನ ಚಂದಿರ ಚಿತ್ರ ಯಶಸ್ವಿಯಾಗಲಿ ಈ ಭಾಗದ ಪ್ರೇಕ್ಷಕರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಲಿಎಂದು ಶುಭ ಹಾರೈಸಿz ಅವರು ಉತ್ತರ ಕರ್ನಾಟಕ ಭಾಗದಿಂದ ಚಿತ್ರನಿರ್ಮಾಣಗೊಳ್ಳುತ್ತಿರುವುದು ಈ ಭಾಗದ ಪ್ರೇಕ್ಷಕರಿಗೆ ಸಂತಸವನ್ನುಂಟುಮಾಡಿದೆ. ತಿರುಪತಿ ರಾಥೋಡ ರವರ ಪ್ರಯತ್ನ ಅತ್ಯಂತ ಶ್ಲಾಘನೀಯವಾಗಿದೆ ಅವರ ಶ್ರಮಕ್ಕೆ ಪ್ರತಿಫಲ ಸಿಗಲಿಎಂದು ಕೆ.ಎಂ.ಸಯ್ಯದ್ ಆಶಯ ವ್ಯಕ್ತಪಡಿಸಿದರು.

Advertisement

0 comments:

Post a Comment

 
Top