ಕೊಪ್ಪಳ-23- ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ನೀಲಾ ಎಸ್. ತೆವರಣ್ಣವರ, ಇವರು ೨೦೧೪-೧೫ನೇ ಸಾಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಬಿ.ಎಸ್ಸಿ ವಿಭಾಗದಲ್ಲಿ ೯ನೇ ರ್‍ಯಾಂಕ ಪಡೆದಿರುತ್ತಾರೆ. ಇವರ ಸಾಧನೆಗೆ ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು ಆಶಿರ್ವದಿಸಿದ್ದಾರೆ. ಅಲ್ಲದೇ ಎಸ್.ಜಿ ಟ್ರಸ್ಟ ಕಾರ್ಯದರ್ಶಿ ಎಸ್ ಮಲ್ಲಿಕಾರ್ಜುನ ಹಾಗೂ ಸದಸ್ಯರು ಆಡಳಿತಾಧಿಕಾರಿ ಡಾ.ಮರೆಗೌಡ, ಪ್ರಾಚಾರ್ಯ ಮನೋಹರ ದಾದ್ಮಿ , ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹರ್ಷವ್ಯಕ್ತಪಡಿಸಿದ್ದಾರೆ.
Subscribe to:
Post Comments (Atom)
0 comments:
Post a Comment