PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೧೮ (ಕ ವಾ) ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಕೃಷ್ಣಗಿರಿ ಕಾಲೋನಿಯ  ಸೀಮಾ (೧೯) ಗಂಡ ಉಮೇಶ ಚಿತ್ರಗಾರ ಎಂಬ ಮಹಿಳೆ ಕಳೆದ ಡಿ. ೧೩ ರಿಂದ ಕಾಣೆಯಾಗಿದ್ದು, ಈ ಮಹಿಳೆಯ ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣಾ ಪ್ರಭಾರಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
     ಮಹಿಳೆಯು ಡಿ.೧೩ ರ ಭಾನುವಾರದಂದು ಮುಂಜಾನೆ ೬.೦೦ ಗಂಟೆಗೆ ಕುಷ್ಟಗಿಯ ತನ್ನ ಗಂಡನ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ ಬಂದಿಲ್ಲ. ಈ ಕುರಿತಂತೆ ಮಹಿಳೆಯ ತವರು ಮನೆ ತಳಕಲ್ ಸೇರಿದಂತೆ  ಸಂಬಂಧಿಕರ ಮನೆಗಳಲ್ಲೂ ಮಹಿಳೆಯ ಬಗ್ಗೆ ಸುಳಿವು ಸಿಕ್ಕಿಲ್ಲ. 
     ಕಾಣೆಯಾದ ಮಹಿಳೆಯ ವಿವರ ಇಂತಿದೆ ಹೆಸರು: ಸೀಮಾ, ಗಂಡ ಉಮೇಶ ಚಿತ್ರಗಾರ, ವಯಸ್ಸು: ೧೯, ಸಾ|| ಕೃಷ್ಣಗಿರಿ ಕಾಲೋನಿ, ಕುಷ್ಟಗಿ.  ತಂದೆ: ರೇಣುಕಾರಾಜ,  ಜಾತಿ: ಸೋಮವಂಶ ಕ್ಷತ್ರೀಯ, ಎತ್ತರ: ೫ ಫೀಟು, ವಿದ್ಯಾರ್ಹತೆ: ೯ನೇ ತರಗತಿ, ಕನ್ನಡ ಭಾಷೆ ಮಾತನಾಡುತ್ತಾಳೆ, ಸಾಧಾರಣ ಮೈಕಟ್ಟು, ಕೆಂಪು ಮೈಬಣ್ಣ, ಕಪ್ಪು ತಲೆಕೂದಲು, ದುಂಡನೆಯ ಮುಖ, ಹಣೆಯ ಮಧ್ಯದಲ್ಲಿ ಒಂದು ಸಣ್ಣ ಹಚ್ಚೆ ಹಾಕಿಸಲಾಗಿದೆ. ಕಾಣೆಯಾದ ಸಂದರ್ಭದಲ್ಲಿ ಹಳದಿ ಬಣ್ಣದ ಡಿಸೈನ್  ಸೀರೆ, ಕುಪ್ಪಸ ತೊಟ್ಟಿರುತ್ತಾಳೆ.
     ಈ  ಚಹರೆಯುಳ್ಳ ಮಹಿಳೆಯ ಬಗ್ಗೆ ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ಗೊತ್ತಾದಲ್ಲಿ, ಕುಷ್ಟಗಿ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: ೦೮೫೩೬-೨೬೭೦೩೩, ಕೊಪ್ಪಳ ನಿಯಂತ್ರಣ ಕೊಠಡಿ, ದೂರವಾಣಿ ಸಂಖ್ಯೆ: ೦೮೫೩೯-೨೩೦೨೨೨ ಇವರಿಗೆ ಮಾಹಿತಿ ನೀಡುವಂತೆ ಕುಷ್ಟಗಿ ಪೊಲೀಸ್ ಠಾಣಾ ಪ್ರಭಾರಕರು ತಿಳಿಸಿದ್ದಾರೆ.

Advertisement

0 comments:

Post a Comment

 
Top