PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೦೭ (ಕ ವಾ) ಮೈಸೂರು ದಸರಾ ವಸ್ತು ಪ್ರದರ್ಶನ-೨೦೧೫ ರ ಲಲಿತಕಲೆ ಮತ್ತು ಕರಕುಶಲ ಕಲಾ ಉಪಸಮಿತಿ ವತಿಯಿಂದ ಡಿ. ೧೩ ರಂದು ರಾಜ್ಯ ಮಟ್ಟದ ಚಿತ್ರ ಸಂತೆ ಹಾಗೂ ಡಿ. ೧೪ ರಂದು ಕರಕುಶಲ ಕಲಾಮೇಳವನ್ನು ಬೆಳಿಗ್ಗೆ ೯.೦೦ರಿಂದ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಏರ್ಪಡಿಸಲಾಗಿದೆ.
     ಆಸಕ್ತ ಕಲಾವಿದರುಗಳು, ಕಲಾ ವಿದ್ಯಾರ್ಥಿಗಳು ಹಾಗೂ ಕಲಾಪೋಷಕರು ತಮ್ಮ ಕಲಾಕೃತಿಗಳು, ಶಿಲ್ಪಕಲಾಕೃತಿಗಳು, ಮರದ ಕೆತ್ತನೆಗಳು ಹಾಗೂ ಕರಕುಶಲ ಕಲಾಕೃತಿಗಳು ಇತ್ಯಾದಿಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಉಚಿತವಾಗಿ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಕುರಿತು ಹೆಸರನ್ನು ನೋಂದಾಯಿಸಿಕೊಳ್ಳಲಾಗುತ್ತಿದ್ದು, ಆಸಕ್ತ ಕಲಾವಿದರುಗಳು ಶಿವಕುಮಾರ್-೯೬೨೦೫೫೫೧೦೯    ಮಧು-೯೭೩೯೩೬೩೬೮೪ ಜಮೀಲಾ-೯೯೧೬೨೦೪೬೪೨ ಇವರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಅಥವಾ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಲಲಿತ ಕಲೆ ಮತ್ತು ಕರಕುಶಲ ಕಲಾ ಉಪಸಮಿತಿ, ಕನ್ನಡ ಕಾರಂಜಿ ಕಟ್ಟಡ, ದೊಡ್ಡಕೆರೆ ಮೈದಾನ, ಇಂದಿರಾನಗರ, ಮೈಸೂರು - ೫೭೦೦೧೦ ಕಛೇರಿಯಲ್ಲಿ ಸಂಪರ್ಕಿಸುವಂತೆ ತಿಳಿಸಿದೆ.

Advertisement

 
Top