PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಡಿ.೨೩ (ಕ ವಾ) ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕೈಗೊಂಡು ಸರ್ವ ಶಿಕ್ಷಣ ಅಭಿಯಾನದ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂಬಂಧ ಕೊಪ್ಪಳ ಜಿಲ್ಲೆಯಲ್ಲಿ ಡಿ. ೨೬ ರಿಂದ ಸಮೀಕ್ಷಾ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ ಉಪನಿರ್ದೇಶಕರು ತಿಳಿಸಿದ್ದಾರೆ.
     ಸರ್ವ ಶಿಕ್ಷಣ ಅಭಿಯಾನದ ಈ ವಾರ್ಷಿಕ ಕ್ರಿಯಾ ಯೋಜನೆಯನ್ನು ೨೦೧೬ ಜನೇವರಿ ೧೨ ರೊಳಗೆ ಸಿದ್ಧಪಡಿಸಿ, ಅಂತಿಮಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ಮೊದಲು ಸಮೀಕ್ಷಾ ಕಾರ್ಯವನ್ನು ಡಿ. ೨೮ ರಿಂದ ಪ್ರಾರಂಭ ಮಾಡಲು ದಿನಾಂಕ ನಿಗದಿಡಿಸಲಾಗಿತ್ತು.  ಇದೀಗ ಇಲಾಖೆಯ ಸೂಚನೆ ಮೇರೆಗೆ ಡಿ. ೨೬ ರಿಂದ ಸಮೀಕ್ಷೆ ಕಾರ್ಯ ಪ್ರಾರಂಭಿಸಲಾಗುವುದು.  ಅಲ್ಲದೆ ಇದಕ್ಕೆ ಸಂಬಂಧಿಸಿದಂರತೆ ಡಿ.೧೬ ರಂದು ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿನ ದಿನಾಂಕಗಳನ್ನು ಸಹ ಬದಲಾವಣೆ ಮಾಡಲಾಗಿದೆ.   ಅದರನ್ವಯ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಸಮೀಕ್ಷಾ ಕಾರ್ಯವನ್ನು ಡಿ.೨೬ ರಿಂದ ೨೦೧೬ರ ಜನೇವರಿ ೦೫ ರೊಳಗಾಗಿ ಕೈಗೊಳ್ಳಬೇಕು. ಜ.೦೭ ರೊಳಗಾಗಿ ಕ್ಲಸ್ಟರ್ ಹಂತದಿಂದ ಬ್ಲಾಕ್‌ಗೆ ಮಾಹಿತಿ ಸಲ್ಲಿಸಬೇಕು. ಜ.೦೮ ರೊಳಗಾಗಿ ಬ್ಲಾಕ್ ಹಂತದಿಂದ ಜಿಲ್ಲೆಗೆ ಖುದ್ದಾಗಿ ಮಾಹಿತಿ ಸಲ್ಲಿಸಬೇಕು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಅಂಕಿ-ಅಂಶ ಅಂತಿಮಗೊಳಿಸಬೇಕು. ಜ.೦೯ ರೊಳಗಾಗಿ ಜಿಲ್ಲಾ ಹಂತದಲ್ಲಿ ಅಂತಿಮಗೊಂಡ ಶಾಲೆಯಿಂದ ಹೊರಗುಳಿದ ಮಕ್ಕಳ ಅಂಕಿ-ಅಂಶಗಳನ್ನು ಎನ್.ಜಿ.ಓ ಗಳೊಂದಿಗೆ ವಿನಿಮಯ ಮಾಡಿಕೊಳ್ಳಬೇಕು. ಅಂತಿಮವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಪಟ್ಟಿ ಮತ್ತು ಅಂಕಿ-ಅಂಶಗಳ ನಮೂನೆಗಳನ್ನೊಳಗೊಂಡ ಪೂರ್ಣ ಪ್ರಸ್ತಾವನೆಯನ್ನು ಜ.೧೧ ರೊಳಗಾಗಿ ರಾಜ್ಯ ಕಛೇರಿಗೆ ಸಲ್ಲಿಸಬೇಕು ಎಂಬುದಾಗಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿ, ಡಿವೈಪಿಸಿ ಅವರಿಗೆ ತಿಳಿಸಲಾಗಿದೆ ಎಂದು ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳದ ಉಪನಿರ್ದೇಶಕರು ತಿಳಿಸಿದ್ದಾರೆ.

Advertisement

0 comments:

Post a Comment

 
Top