PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-30- ತಾಲೂಕಿನ ಕುಣಿಕರಿ ಗ್ರಾಮದ  ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಗೆ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಯಮಾಡಿಸಿ ಶಾಲೆಯವರು ಕೈಗೊಂಡ ಪಾದ ಪೂಜೆಯನ್ನು ಸ್ವೀಕರಿಸಿ ನಂತರ ಹಸ್ತಾಕ್ಷರ ಹಾಕುವುದರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳಸುತ್ತಿರುವ ಸಮಾಜ ಸೇವೆ ಶ್ಲಾಘನೀಯ. ಇಲ್ಲಿ ಸಾವಿರ ಸಾವಿರ ಮಕ್ಕಳ ಭವಿಷ್ಯ ಈ ಜ್ಞಾನದೇಗುಲದಲ್ಲಿ ನಿರ್ಮಾಣವಾಗಲಿ  ಆ ದಿವ್ಯ ಶಕ್ತಿ ಗವಿಸಿದ್ದೇಶ್ವರ ಅನುಗ್ರಹಿಸಲಿ ಎಂದರು. ಮುಂದುವರೆದು ವಿದ್ಯಾಭ್ಯಾಸದ ಬಗ್ಗೆ ವಿದ್ಯಾರ್ಥಿಗಳೋಂದಿಗೆ ಸಂವಾದ ನಡೆಸಿದರು. ಸಂಸ್ಥೆಯವರು ಕೊಟ್ಟ ಭಕ್ತಿ ಕಾಣಿಕೆಯನ್ನು ಪುನಹ ಶಾಲಾ ಕಾರ್ಯಕ್ಕೆ ಬಳಸಲು ಕೊಟ್ಟು ಎಲ್ಲರನ್ನು ಆಶಿರ್ವದಿಸಿದರು.
    ಈ ಸಂದರ್ಭದಲ್ಲಿ ಭೂದಾನಿ ಹುಚ್ಚಮ್ಮ ಚೌದರಿ, ಸಂಸ್ಥೆಯ ಅಧ್ಯಕ್ಷ ಈಶಪ್ಪ ಸೊಂಪೂರ, ಕಾರ್ಯದರ್ಶಿ ಈರಮ್ಮ ಸೊಂಪೂರ, ಮುಖ್ಯೋಪಾದ್ಯಾಯ ಫಕೀರಪ್ಪ ಎನ್. ಅಜ್ಜಿ, ಶಿಕ್ಷಕಿಯರಾದ ಫಕೀರಮ್ಮ ತಳವಾರ, ರುಕ್ಮಿಣಿ ವೈ. ಜೆ, ಮರಿಯಮ್ಮ ಹರಿಜನ, ಹುಲಿಗೇಶ ಭೋವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Advertisement

0 comments:

Post a Comment

 
Top