PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-21- ಹೊಲ-ಮನೆ-ಮಠ-ಬೆಳ್ಳಿ-ಬಂಗಾರ ಇವೆಲ್ಲವೂ ಭೌತಿಕ ಸಂಪತ್ತುಗಳು. ಇವೆಲ್ಲವುಗಳನ್ನು ಮೀರಿದ್ದು ಹೃದಯ ಸಂಪತ್ತು. ದೀನರಿಗೆ-ದಲಿತರಿಗೆ ಸಹಕಾರ - ಸಹಾಯ ನೀಡುವಂತಹ ಹೃದಯ ಸಂಪತ್ತನ್ನು, ಸಮಾಜಮುಖಿ ಬದುಕನ್ನು ರೂಡಿಸಕೊಳ್ಳಬೇಕು ಎಂದು ಗವಿಸಿದ್ದೇಶ್ವರ ಮಹಾಸ್ವಾಮಿಗಳವರು - ಸ್ಥಳೀಯ ವರ್ತಕ ಸಂಗಣ್ಣ ಸೊಂಡೂರ ರವರು ಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಪಟ್ಟಾಧಿಕಾರದ ೧೩ ಸಂವತ್ಸರಗಳನ್ನು ಪೂರೈಸಿದ ಸಂದರ್ಭದಲ್ಲಿ ಏರ್ಪಡಿಸಿದ್ದ ಸನ್ಮಾನ, ದಾರ್ಮಿಕ ಹಾಗೂ ಸಂಗೀತ ಸಮಾರಂಭ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
    ಆರಂಭದಲ್ಲಿ ಹಿರಿಯ ಸಾಹಿತಿ ಎಸ್.ಎಮ್ ಕಂಬಾಳಿಮಠರು ಶ್ರಿ ಗವಿಮಠದ ಭವ್ಯಪರಂಪರೆ ಕುರಿತು ಉಪನ್ಯಾಸ ನೀಡಿದರು. ಸಂಗಣ್ಣ ಸೊಂಡೂರರವರು ಪೂಜ್ಯರಿಗೆ ಫಲ-ಪುಷ್ಪ ಕಾಣಿಕೆ ಸಲ್ಲಿಸಿ ಸನ್ಮಾನಿಸಿದರು. ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಕುಮಾರಿ ಬೆನ್ನಾಳ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.

Advertisement

0 comments:

Post a Comment

 
Top