PLEASE LOGIN TO KANNADANET.COM FOR REGULAR NEWS-UPDATES

ಹೊಸಪೇಟೆ-31-  ನಗರದ ಜಂಬುನಾಥ್ ರಸ್ತೆಯಲ್ಲಿರುವ ಅನ್ಮೋಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಅನ್ಮೋಲ್ ಪಂಚ್ ಕ್ಯಾಲೆಂಡರ್‌ನ್ನು ಅನ್ಮೋಲ್ ಸಂಸ್ಥೆಯ ಸಂಸ್ಥಾಪಕರು ಮತ್ತು ಅನ್ಮೋಲ್ ಪಂಚ್ ಇಂಗ್ಲೀಷ್ ಮಂತ್ಲಿ ಮ್ಯಾಗ್ಝಿನ್‌ನ ಪ್ರಧಾನ ಸಂಪಾದಕರಾದ ಎಂ.ಎ.ವಲಿಸಾಹೇಬ್  (ಹಕೀಂಸಾಬ್) ಅವರು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಅನ್ಮೋಲ್ ಪಂಚ್ ಕ್ಯಾಲೆಂಡರ್ ವಿನೂತನ ಪ್ರಯೋಗವಾಗಿದ್ದು, ಕ್ಯಾಲೆಂಡರ್ ಜತೆಗೆ ಮ್ಯಾಗ್ಝಿನ್‌ನ್ನು ಸಹ ನೀಡಲಾಗಿದೆ. ಇದರಲ್ಲಿ ಭಾರತೀಯ ದೇಸಿಯತೆಗೆ ಅವಶ್ಯಕವಾಗಿರುವ ಎಲ್ಲಾ ಮಾಹಿತಿ ಒಳಗೊಂಡಿದ್ದು, ಅತ್ಯಂತ ಸಂಗ್ರಹಯೋಗ್ಯ ಕ್ಯಾಲೆಂಡರ್ ಇದಾಗಿದೆ ವಿವರಿಸಿದರು.
   ಇನ್ನೂ ಈ ಹೊಸ ವರ್ಷಾಚರಣೆ ಪಾಶ್ಚಾತ್ತರದಾಗಿದ್ದರೂ ಸಹ ದೇಶದಲ್ಲಿ ಅನೇಕರು ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಶ್ವದಾದ್ಯಂತ ಬಹುತೇಕ ದೇಶದ ಜನರು ಈ ಆಚರಣೆಯಲ್ಲಿ ತೊಡಗುತ್ತಿದ್ದಾರೆ. ಇದು  ವಿಶ್ವ ಒಗ್ಗೂಡುವಿಕೆಗೆ ಕಾರಣೀ ಭೂತವಾಗಿದೆ. ಆದರೆ ಹೊಸ ವರ್ಷಾಚರಣೆಯ ನೆಪದಲ್ಲಿ ಮೋ
ಜು  ಮಸ್ತಿಯಲ್ಲಿ ತೊಡಗದೆ. ಆರೋಗ್ಯಕರವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖೇನ ದೇಸಿಯತೆಗೆ ಆದ್ಯತೆ ನೀಡಬೇಕು. ಜೀವನದ ಪ್ರತಿ ಕ್ಷಣವೂ ಹೊಸ ವರ್ಷವಾಗಿದ್ದು, ಆದರ ಆಚರಣೆ ಮಾಡುವ ವಿಧಾನ ಜನರಿಗೆ ರೇಜಿಗೆ ಹುಟ್ಟಿಸಬಾರದು. ಎಲ್ಲಂದರಲ್ಲಿ ಕುಡಿದು ಸಾರ್ವಜನಿಕರಿಗೆ ತೊಂದರೆ ಮಾಡಬಾರದು, ರಸ್ತೆಗಳಲ್ಲಿ ವಾಹನದ ಸೈಲೆನ್ಸರ್ ಕಿತ್ತು ಯುವಕರು ಅಡ್ಡಾದಿಡ್ಡಿಯಾಗಿ ಬೈಕ ಓಡಾಡಿಸುವುದು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಇನ್ನೂ ಕೆಲವರು ಪಾರ್ಟಿಯ ನೆಪದಲ್ಲಿ ನಮಗೆ ವಗ್ಗದ ಆಚರಣೆಗಳನ್ನು ಮಾಡುತ್ತಾರೆ ಅವುಗಳನ್ನು ಯುವ ಸಮುದಾಯ ನಿಷೇಧಿಸಬೇಕು. ಪೊಲೀಸರು ನಮ್ಮನ್ನು ಜಾಗೃತಿಗೊಳಿಸುವುದಕ್ಕೆ ಮುನ್ನಾ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
   ಇನ್ನೂ ಅನ್ಮೋಲ್ ಪಂಚ್ ಇದು ಇಂಗ್ಲಿಷ್ ತಿಂಗಳ ಪತ್ರಿಕೆಯಾಗಿದ್ದು ಪ್ರತಿ ತಿಂಗಳ ಗಮನಾರ್ಹ ಲೇಖನಗಳ ಮೂಲಕ ಹೊರಬರುತ್ತಿದೆ, ಹೊಸ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಆಳುವ ಪಕ್ಷಗಳಿಗೆ ಚಾಟಿ ಏಟು ನೀಡುತ್ತಿದೆ. ದೇಶದಲ್ಲಿ ಆಡಳಿತ ನಡೆಸುವವರು ದಿಸೆ ತಪ್ಪದಂತೆ ಜಾಗೃತಿ ವಹಿಸಲಾಗುವುದು ಯಾವುದೇ ಮುಖ ಮುಲಾಜಿ ನೋಡದೆ ಪಕ್ಷ ಬೇಧ ತಾಳೆದೆ ಎಲ್ಲಾ ಪಕ್ಷಗಳಿಗೂ ಸಮಾನವಾಗಿ ಟೀಕೆ ಮಾಡಲಾಗುವುದು ಎಂದು ತಿಳಿಸಿದರು.

Advertisement

0 comments:

Post a Comment

 
Top