PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-೩೦- ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೈನುಗಾರಿಕೆ ವಿಚಾರ ಸಂಕಿರಣ ಹಾಗೂ ಶೌಚಾಲಯ ಅನುದಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಬಳ್ಳಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ವೇಂಕನಗೌಡ ಎಲ್ ಹಿರೇಗೌಡ್ರು ಉದ್ಘಾಟಣೆ ಮಾಡಿ ಮಾತನಾಡಿ, ಹೈನುಗಾರಿಕೆ ಒಂದು ಲಾಭದಯಕ ಉದ್ಯಮ ರೈತರು ಹಾಗೂ ಮಹಿಳೆಯರು ಹೈನುಗಾರಿಕೆಯಲ್ಲಿ ತೋಡಗಿಸಿಕೊಂಡಲ್ಲಿ ಉತ್ತಮವಾಗಿ ಲಾಭ ಪಡೆಯುವುದರ ಮೂಲಕ ಕುಟುಂಬದಲ್ಲಿ ನೆಮ್ಮದಿಯ ಜೀವನ ಸಾಗಿಸಬಹುದು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದರ ಮೂಲಕ ಬಿ.ಎಸ್.ಸಿ ಅಗ್ರ್ರೀಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಯಗಳಿಗೆ ಕೆ.ಎಂ.ಎಫ್ ವತಿಯಿಂದ ೨೦.೦೦೦ ರೂ ಸಹಾಯಧನ ನೀಡುವುದು ಹಾಗೂ ರೈತ ಮಹಿಳೆಯರು ಗುಣಮಟ್ಟದ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೀಡಿದ್ದೆ ಆದಲ್ಲಿ ಪ್ರತಿ ಲೀಟರಗೆ ೨೩ ರೂ ಹಾಗೂ ಸಹಾಯಧನ ೪ ರೂ ನೀಡುವುದಾಗಿ ಮತ್ತು ಶ್ರೀ ಕ್ಷೇತ್ರದ ಮೂಲಕ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ಬೇಕಾಗುವಂತಹ ಯಂತ್ರಗಳಿಗೆ ಹಾಗೂ ಕಟ್ಟಡಗಳಿಗೆ ಅನುದಾನ  ಕೊಡುವಲ್ಲಿ ಹಾಗೂ ಹಾಲು ಉತ್ಪಾದನೆ ಜಾಸ್ತಿಯಾಗುವಲ್ಲಿ ಸ್ವಸಹಾಯ ಸಂಗದ ಸದ್ಯಸರಿಗೆ ಮಾಹಿತಿ ಮಾರ್ಗದರ್ಶನ ಹಾಗೂ ಆರ್ಥಿಕ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು. ಗೊಂಡಬಾಳ ಗ್ರಾಮದ ೧೦೦ ಜನ ಸದಸ್ಯರಿಗೆ ತಲಾ ೧೦೦೦ ರೂ ಹಾಗೂ ೧ ಲಕ್ಷ ರೂ ಶ್ರೀ ಕ್ಷೇತ್ರದಿಂದ ಮಂಜೂರಾದ ಶೌಚಾಲಯದ ಅನುದಾನದ ಮೊತ್ತವನ್ನು ವಿತರಣೆ ಮಾಡಿದರು.
    ಕಾರ್ಯಕ್ರಮವನ್ನುದ್ದೇಶಿಸಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ನಾಯ್ಕ ಮಾತನಾಡಿ, ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕುಟುಂಬ ಅಭಿವೃದ್ದಿಗೆ ಯೋಜನೆಯು ಕಾರ್ಯನಿರ್ವಹಿಸುತ್ತಿದ್ದು ರಾಜ್ಯದಲ್ಲಿ ೩೫ ಲಕ್ಷ ಸದಸ್ಯರನ್ನೊಳಗೊಂಡು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ಅದರಲ್ಲಿ ಮುಖ್ಯವಾಗಿ ಹೈನುಗಾರಿಕೆ, ಕೃಷಿ ಅಧ್ಯಯನ ಪ್ರವಾಸ, ರೈತ ಕ್ಷೇತ್ರ ಪಾಠಶಾಲೆ ಇದಕ್ಕೆ ಪೂರಕವಾಗಿ ಕೊಪ್ಪಳ ತಾಲೂಕಿನಲ್ಲಿ ಯುನಿಯನ್ ಬ್ಯಾಂಕ್ ಮೂಲಕ ಸದಸ್ಯರಿಗೆ ಆಥಿಕ ಸೌಲಬ್ಯವನ್ನು ಮಾಡಿ ಹೈನುಗಾರಿಕೆ, ಪುಷ್ಟಕೃಷಿ, ಕೃಷಿ ಯಂತ್ರೋಪಕರಣಗಳ ಅಳವಡಿಕೆ ಮಾಡಿದ
ಸಂಪನ್ಮೂಲ ವ್ಯಕ್ತಿ ಬಿ. ಬೈಯಣ್ಣ ಸಮನ್ವ ಅಧಿಕಾರಿ ಬೈಫ್ ಸಂಸ್ಥೆ ಹೈನುಗಾರಿಕೆ ಒಂದು ಲಾಭದಾಯಕ ಉದ್ಯಮ ಎಂಬ ವಿಷಯ ಕುರಿತು ಮಾಹಿತಿ ನೀಡಿದರು.
 ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕ್ರಪ್ಪ ಚಳಗೇರಿ ಗ್ರಾ.ಪಂ ಅಧ್ಯಕ್ಷರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಲಿಂಗಜ್ಜ ಎಂ ಜಾಗೀರದಾರ, ನಾಗನಗೌಡ ಪೋಲಿಸ್ ಪಾಟೀಲ್, ಬಸವರಾಜ ಹಳ್ಳಿಕೇರಿ, ಮತ್ತಿತರರು ಉಪಸ್ಥಿತರಿದ್ದರು.
ಮೇಲ್ವಿಚಾರಕ ವೆಂಕಟೇಶ ನಾಯ್ಕ, ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಮಂಜುನಾಥ ನಿರೂಪಿಸಿ ವಂದಿಸಿದರು.

ಸದಸ್ಯರಿಗೆ ಕ್ಷೇತ್ರದ ಮೂಲಕ ಅನುಧಾನ ನೀಡಲಾಗುತ್ತಿದೆ ಎಂದು ತಿಳಿಸಿ ಗ್ರಾಮದಲ್ಲಿ ಹಾಗೂ ಕುಟುಂಬದಲ್ಲಿ ಸ್ವಚ್ಚತೆಯನ್ನು ಕಾಪಾಡಲು ಶೌಚಾಲಯ ರಚನೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು ಶೌಚಾಲಯು ರಚನೆ ಮಾಡಿದ ಸದಸ್ಯರಿಗೆ ೧೦೦೦ ರೂ ಅನುದಾನ ನೀಡಲಾಗುತ್ತಿದೆ.

Advertisement

0 comments:

Post a Comment

 
Top