PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- 28- ನಗರದ ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೫೨೮ನೇ ಕನಕದಾಸ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಯಿತು. ಕಾಲೆಜಿನ ಪ್ರಾಚಾರ್ಯರಾದ ಡಾ. ವಿ.ಬಿ.ರಡ್ಡೇರ ರವರು ಕನಕದಾಸರ ಸಂದೇಶ ಮತ್ತು ಸಾಹಿತ್ಯ ಕುರಿತು ಮಾತನಾಡಿದರು. ಜಗದೀಶ, ಮತ್ತು ಪಾಟೀಲ್ ಶಿಕ್ಷಕರು ಸಹ ಕನಕದಾಸರ ಸಂದೇಶ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಉಪಪ್ರಾಚಾರ್ಯರಾದ ಸರಿತಾ ಜೀ, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಕೂಡಿ ಕನಕದಾಸರ ಗೀತೆಗಳನ್ನು  ಹಾಡಿದರು.
ಬೋಂದಾಡೆ ಶಿಕ್ಷಕರು ಸ್ವಾಗತಿಸಿದರು, ಶ್ರೀಮತಿ ಸುನಿತಾ ವಂಧಿಸಿದರು, ಕಾರ್ಯಕ್ರಮದ ಆಯೋಜನೆಯನ್ನು ಉಪನ್ಯಾಸಕರಾದ ಎಸ್.ವಿ ಮೇಳಿ, ವೀರನಗೌಡ ಹಾಗೂ ಎಲ್ಲಾ ಉಪನ್ಯಾಸಕರು, ಶಿಕ್ಷಕರು ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ನೇರವೆರಿಸಿದರು.

Advertisement

0 comments:

Post a Comment

 
Top