PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ- ದಿ. ೨೪ ರಂದು ತಾಲೂಕಿನ ಕುಕನಪಳ್ಳಿಗ್ರಾಮದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೈನುಗಾರಿಕೆ ವಿಚಾರ ಸಂಕಿರಣ ಹಾಗೂ ಶೌಚಾಲಯ ಅನುದಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಸಂಸದ ಸಂಗಣ್ಣ ಕರಡಿ ಉದ್ಘಾಟಣೆ ಮಾಡಿ ಮಾತನಾಡಿ, ಸಮಾಜಿಕ ಸಮಾನತೆ ಹಾಗೂ ಕುಟುಂಬ ನಿರ್ವಹಣೆಯಲ್ಲಿ ಆರ್ಥಿಕ ಉತ್ಪಾದನೆಯಲ್ಲಿ ಶ್ರೀ ಶಕ್ತಿ ಸದಸ್ಯರ ಪ್ರಮುಖ ಪಾತ್ರ, ಆರ್ಥಿಕ ವಲಯದ ಪರಿಕಲ್ಪನೆಯನ್ನು ಗ್ರಾಮೀಣ ಮಟ್ಟದ ಬಡಜನರಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಯೋಜನೆಯಲ್ಲಿ ಬರುವ ಹೈನುಗಾರಿಕ ಕಾರ್ಯಕ್ರಮಗಳು ಉತ್ತಮವಾಗಿ ನಿರ್ವಹಣೆ ಆಗುತ್ತಿದ್ದು ಕುಟುಂಬದ ಸದಸ್ಯರು ಬ್ಯಾಂಕಿನಿಂದ ಆರ್ಥಿಕ ಸೌಲಭ್ಯಪಡೆದುಕೊಂಡು ಸ್ವಾವಲಂಭಿ ಜೀವನ ಸಾಗಿಸಬೇಕು ಹಾಗೇ ನಿರಂತರ ಉಳಿತಾಯ ಮಾಡುವುದರ ಬಗ್ಗೆ ಸಂಸ್ಥೆಯವರು ಮಾಹಿತಿ ಮತ್ತು ಕಾರ್ಯಕ್ರಮಗಳನ್ನು ಎರ್ಪಡಿಸುತ್ತಿದ್ದಾರೆ ಎಂದು ತಿಳಿಸಿದರು. ಕುಕನಪಳ್ಳಿ ಗ್ರಾಮದ ೨೯ ಜನ ಸದಸ್ಯರಿಗೆ ಶ್ರೀ ಕ್ಷೇತ್ರದಿಂದ ಬಿಡುಗಡೆಯಾದ ಅನುದಾನವನ್ನು ವಿತರಿಸಿದರು.
    ಕಾರ್ಯಕ್ರಮವನ್ನುದ್ದೇಶಿಸಿ ಹೈ.ಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಕೆ. ಬೂದಪ್ಪಗೌಡ ಮಾತನಾಡಿ, ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕುಟುಂಬ ಅಭಿವೃದ್ದಿಗೆ ಯೋಜನೆಯು ಕಾರ್ಯನಿರ್ವಹಿಸುತ್ತಿದ್ದು ರಾಜ್ಯದಲ್ಲಿ ೩೫ ಲಕ್ಷ ಸದಸ್ಯರನ್ನೊಳಗೊಂಡು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ಅದರಲ್ಲಿ ಮುಖ್ಯವಾಗಿ ಹೈನುಗಾರಿಕೆ, ಕೃಷಿ ಅಧ್ಯಯನ ಪ್ರವಾಸ, ರೈತ ಕ್ಷೇತ್ರ ಪಾಠಶಾಲೆ ಇದಕ್ಕೆ ಪೂರಕವಾಗಿ ಕೊಪ್ಪಳ ತಾಲೂಕಿನಲ್ಲಿ ಯುನಿಯನ್ ಬ್ಯಾಂಕ್ ಮೂಲಕ ಸದಸ್ಯರಿಗೆ ಆಥಿಕ ಸೌಲಬ್ಯವನ್ನು ಮಾಡಿ ಹೈನುಗಾರಿಕೆ, ಪುಷ್ಟಕೃಷಿ, ಕೃಷಿ ಯಂತ್ರೋಪಕರಣಗಳ ಅಳವಡಿಕೆ ಮಾಡಿದ ಸದಸ್ಯರಿಗೆ ಕ್ಷೇತ್ರದ ಮೂಲಕ ಅನುಧಾನ ನೀಡಲಾಗುತ್ತಿದೆ ಎಂದು ತಿಳಿಸಿ ಗ್ರಾಮದಲ್ಲಿ ಹಾಗೂ ಕುಟುಂಬದಲ್ಲಿ ಸ್ವಚ್ಚತೆಯನ್ನು ಕಾಪಾಡಲು ಶೌಚಾಲಯ ರಚನೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು ಶೌಚಾಲಯು ರಚನೆ ಮಾಡಿದ ಸದಸ್ಯರಿಗೆ ೧೦೦೦ ರೂ ಅನುದಾನ ನೀಡಲಾಗುತ್ತಿದೆ.
ಸಂಪನ್ಮೂಲ ವ್ಯಕ್ತಿ ಬಿ. ಬೈಯಣ್ಣ ಸಮನ್ವ ಅಧಿಕಾರಿ ಬೈಫ್ ಸಂಸ್ಥೆ ಹೈನುಗಾರಿಕೆ ಒಂದು ಲಾಭದಾಯಕ ಉದ್ಯಮ ಎಂಬ ವಿಷಯ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಪಿ.ಎಮ್.ಸಿ ಸದಸ್ಯ ಪಕ್ಕೀರಯ್ಯ ಹಿರೇಮಠ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಹೆಚ್.ಎಲ್. ಮುರಳೀಧರ, ರಮೇಶ ಪಾಟೀಲ, ಲಿಂಗನಗೌಡ  ಪಾಟೀಲ, ಮತ್ತಿತರರು ಉಸ್ಥಿತರಿದ್ದರು. ಯೋಜನಾಧಿಕಾರಿ ಸುರೇಂದ್ರ ನಾಯ್ಕ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಮಂಜುನಾಥ ನಿರೂಪಿಸಿದರು. ಮೇಲ್ವಿಚಾರಕ ವಿನಾಯಕ ವಂದಿಸಿದರು.

Advertisement

0 comments:

Post a Comment

 
Top