PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-26- ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೊರಾಟದ ಫಲವಾಗಿ ರಾಜ್ಯದಲ್ಲಿರುವ ಪರಿಶಿಷ್ಟಜಾತಿಯೊಳಗಿನ ಮೀಸಲಾತಿ ತಾರತಮ್ಯವನ್ನು ಸರಿಪಡಿಸಲು ೧೦೧ ಜಾತಿಗಳ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ವರ್ಗೀಕರಣ ಮಾಡಲು ಅಂದಿನ ಕಾಂಗ್ರೇಸ್ ಸರ್ಕಾರವು ಆಯೋಗವನ್ನು ರಚಿಸಿ ನಿವೃತ್ತ ನ್ಯಾಯಾಧೀಶರಾದ ಎ.ಜೆ.ಸದಾಶಿವ ರವರ ಅಧ್ಯಕ್ಷತೆಯಲ್ಲಿ ರಾಜ್ಯಾದ್ಯಂತ ಸಂಚರಿಸಿ ಪರಿಶಿಷ್ಟ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ರಂಗದಲ್ಲಿ ಪ್ರಗತಿಯ ತಾರತಮ್ಯವನ್ನು ಸರಿಪಡಿಸಲು ಒಳಮೀಸಲಾತಿ ಜಾರಿಗಾಗಿ ಆಯೋಗವು ಮಾದಿಗ ಸಂಬಂಧಿ ಜಾತಿಗಳಿಗೆ ಶೇ.೬% ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ. ೫% ಕೊರಮ, ಲಂಬಾಣಿ, ಭೋವಿ ಸಂಬಂಧಿತ ಜಾತಿಗಳಿಗೆ ಶೇ.೩% ಹಾಗೂ ಇತರೆ ಜಾತಿಗಳಿಗೆ ಶೇ.೧% ನೀಡುವಂತೆ ಶಿಫಾರಸ್ಸು ಮಾಡಿ ಪೂರ್ಣ ವರದಿಯನ್ನು ಕಳೆದ ೨೦೧೨ ರಲ್ಲಿ ಸರ್ಕಾರಕ್ಕೆ ವರದಿಯನ್ನು ಮಂಡಿಸಿದಾಗ ಅಂದಿನ ಬಿ.ಜೆ.ಪಿ ಸರ್ಕಾರವು ಅಂಗೀಕರಿಸಿದೆ ಆದರೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ.ಈ ವರದಿಯನ್ನು ಅನುಮೋದಿಸಿ ಅಂಗೀಕಾರಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಆದರೆ ಮೂರು ವರ್ಷಗಳಿಂದ ಕ್ಯಾಬಿನೆಟ್ ಸಭೆಯಲ್ಲಿ ವಿನಾಕಾರಣ ಮುಂದೂಡಲಾಗುತ್ತಿದೆ. ಕ.ದ.ಸಂ.ಸ.ವು ಪ್ರತಿ ಅಧಿವೇಶನದ ಸಂದರ್ಭದಲ್ಲೂ ಸರ್ಕಾರವನ್ನು ಒತ್ತಾಯಿಸುತ್ತಿದೆ. ಈಗಲೂ ಸಿದ್ದರಾಮಯ್ಯನವರ ನೇತೃತ್ವದ ಅದೇ ಕಾಂಗ್ರೇಸ್ ಸರ್ಕಾರವು ಕ್ಯಾಬಿನೆಟ್ ಸಭೆಯ ಸಂದರ್ಭದಲ್ಲೂ ದಿನಾಂಕ: ೦೫-೧೧-೨೦೧೫ ರಮದು ಕೆಲವರ ಒತ್ತಡಕ್ಕೆ ಮಣಿದು ಮತ್ತೆ ಮುಂದೂಡಲಾಗಿದೆ ಅದೂ ಅಲ್ಲದೇ ಈ ವರದಿ ನ್ಯಾಯಾಂಗ ಒಪ್ಪಿಗೆ (ಲೀಗಲ್ ಒಪೀನಿಯನ್) ಪಡೆಯುವ ಅಗತ್ಯವಿದೆ ಎಂದು ಹೇಳುವುದರ ಮೂಲಕ ಪರಿಶಿಷ್ಟ ಜಾತಿಗಳಿಗೆ ಆಂತರಿಕ ಸಂಘರ್ಷವನ್ನು ಹುಟ್ಟು ಹಾಕುತ್ತಿದ್ದಾರೆ.
ಈ ಎಲ್ಲಾ ಗಂಭೀರವಾದ ವಿಚಾರಗಳನ್ನು ಸರ್ಕಾರ ಮಂದಿಸುತ್ತಾ ೨೦೧೫ ರ ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿಯೇ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಸಿ ಯಥಾವತ್ತಾಗಿ ಜಾರಿಮಾಡಿ ಈ ಕೆಳಗೆ ನೀಡಿರುವ ಹಕ್ಕೋತ್ತಾಯಗಳನ್ನು ಈಡೆರಿಸಬೇಕೆಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆಯ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

0 comments:

Post a Comment

 
Top