PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ನ. ೩೦ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಶೇಂಗಾ ಬೆಳೆಗೆ ಸರಿಗೆ ಹುಳು (ವೈರ್ ವರ್ಮ್) ಕೀಟ ಬಾಧೆ ಕಂಡುಬಂದಿದ್ದು, ಇದರ ನಿರ್ವಹಣೆಗೆ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಲಹೆಗಳನ್ನು ನೀಡಿದೆ.
     ಕೊಪ್ಪಳ ಜಿಲ್ಲೆಯ ಬೆಟಗೇರಿ, ತಿಗರಿ, ಮತ್ತೂರು ಮತ್ತು ಮುಂತಾದ ಗ್ರಾಮಗಳಲ್ಲಿ ತುಂಗಭದ್ರ ನದಿಯ ತೀರದಲ್ಲಿ ಬೆಳೆಯುವ ಬೆಳೆಗಳಿಗೆ ಮುಖ್ಯವಾಗಿ ಶೇಂಗಾ ಬೆಳೆಯಲ್ಲಿ ಸರಿಗೆ ಹುಳು (ವೈರ್ ವರ್ಮ್) ಕೀಟದ ಬಾಧೆ ಕಾಣಿಸಿಕೊಡಿದೆ. ಈ ಕೀಟವು ಬೆಳೆಗಳ ಬೇರುಗಳನ್ನು ತಿನ್ನುವುದರಿಂದ ಗಿಡಗಳು ಒಣಗುತ್ತವೆ.  ಇದರ ನಿರ್ವಹಣೆಗೆ  ೮-೧೦ ಕೆ.ಜಿ ಕಾರ್ಬೊಫ್ಯುರಾನ್ ಹರಳು (ಶೇ.೩) ಅಥವಾ ಫೋರೆಟ ೧೦ ಜಿ ಹರಳನ್ನು ಮಣ್ಣಿಗೆ ಸೇರಿಸಬೇಕು.  ಪ್ರತೀ ಲೀ ನೀರಿಗೆ ೧೦ ಮಿ.ಲೀ ಕ್ಲೋರ್‌ಪೈರಿಫಾಸ್ ೨೦ ಇ.ಸಿ ಬೆರೆಸಿ ಬೆಳೆಯ ಬುಡದಲ್ಲಿ ಭೂಮಿ ನೆನೆಯುವಂತೆ ಮಾಡುವುದರಿಂದ ಹಾನಿಯನ್ನು ಕಡಿಮೆಗೊಳಿಸಬಹುದು. ಬೀಜಗಳನ್ನು ಕೀಟನಾಶಕಗಳಿಂದ ಉಪಚರಿಸಿ ಬಿತ್ತುವುದು ಸೂಕ್ತ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಅವರು ತಿಳಿಸಿದ್ದಾರೆ.

ಡಿ.೦೫ ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ ಹೆಸರು ನೋಂದಣಿಗೆ ಸೂಚನೆ.
ಕೊಪ್ಪಳ, ನ. ೩೦ (ಕ ವಾ) ಕೊಪ್ಪಳ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಡಿ.೦೫ ಮತ್ತು ೦೬ ರಂದು ಎರಡು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಹಾಗೂ ಇದೇ ಕ್ರೀಡಾಕೂಟದ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದು, ಸರ್ಕಾರಿ ನೌಕರರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸುವಂತೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ ಜುಮ್ಮನ್ನವರ್ ಸೂಚನೆ ನೀಡಿದ್ದಾರೆ.     ಸ್ಪರ್ಧೆಗಳ ವಿವರ ಇಂತಿದೆ.  ಕ್ರೀಡಾಕೂಟದ ಪುರುಷ ವಿಭಾಗದಲ್ಲಿ ೪೫ ವರ್ಷದೊಳಗಿನವರಿಗೆ ೧೦೦ ಮೀ, ೨೦೦ ಮೀ, ೪೦೦, ೮೦೦, ೧೫೦೦ ಮೀ. ಓಟ, ಹರ್ಡಲ್ಸ್, ೫೦೦೦ ಮತ್ತು ೧೦,೦೦೦ ಮೀ.ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು, ಚಕ್ರ, ಜಾವೆಲಿನ್ ಎಸೆತ, ೪*೧೦೦ ಮತ್ತು ೪*೪೦೦ ರಿಲೇ. ಗುಂಪು ಸ್ಪರ್ಧೆಗಳಲ್ಲಿ ವಾಲಿಬಾಲ್, ಕಬ್ಬಡ್ಡಿ, ಟೇಬಲ್ ಟೆನ್ನಿಸ್ (ಸಿಂಗಲ್ಸ್ ಮತ್ತು ಡಬಲ್ಸ್), ಬ್ಯಾಡ್ಮಿಂಟನ್, ಕೇರಂ, ಕ್ರಿಕೆಟ್ ಕ್ರೀಡೆಗಳನ್ನು ಹಾಗೂ ೪೫ ವರ್ಷ ಮೇಲ್ಪಟ್ಟವರಿಗೆ ೧೦೦, ೨೦೦ ಮತ್ತು ೪೦೦ ಮೀ.ಓಟ, ಗುಂಡು, ಚಕ್ರ ಎಸೆತ ಕ್ರೀಡೆಗಳನ್ನು ಆಯೋಜಿಸಲಾಗುವುದು. 
     ಅದೇ ರೀತಿ ಮಹಿಳಾ ವಿಭಾಗದಲ್ಲಿ ೪೦ ವರ್ಷದೊಳಗಿನವರಿಗೆ ೧೦೦ ಮೀ, ೨೦೦ ಮೀ, ೪೦೦, ೮೦೦ ಮೀ. ಓಟ, ಹರ್ಡಲ್ಸ್, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು, ಚಕ್ರ, ಜಾವೆಲಿನ್ ಎಸೆತ, ೪*೧೦೦ ಮತ್ತು ೪*೪೦೦ ರಿಲೇ ಹಾಗೂ ೪೦ ವರ್ಷ ಮೇಲ್ಪಟ್ಟವರಿಗೆ ೧೦೦ ಮೀ, ೨೦೦ ಮೀ, ೪೦೦ ಮೀ. ಓಟ, ಗುಂಡು, ಚಕ್ರ ಎಸೆತ, ಗುಂಪು ಆಟಗಳಲ್ಲಿ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ (ಸಿಂಗಲ್ಸ್ ಮತ್ತು ಡಬಲ್ಸ್), ಕೇರಂ, ಟೆನಿಕಾಯ್ಟ್, ಥ್ರೋಬಾಲ್ ಕ್ರೀಡೆಗಳನ್ನು ಹಾಗೂ ೪೦ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ೧೦೦, ೨೦೦ ಮತ್ತು ೪೦೦ ಮೀ. ಓಟ, ಗುಂಡು, ಚಕ್ರ ಎಸೆತ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್, ಟೆನ್ನಿಕಾಯ್ಡ್ ಸಿಂಗಲ್ಸ್ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
     ಕ್ರೀಡಾಕೂಟದ ಅಂಗವಾಗಿ ಏರ್ಪಡಿಸಲಾಗಿರುವ ಸಾಂಸ್ಕೃತಿಕ ಸ್ಪರ್ಧೆಗಳ ಹಿಂದುಸ್ತಾನಿ ಸಂಗೀತ ಸ್ಪರ್ಧೆ ವಿಭಾಗದಲ್ಲಿ ಮೌಖಿಕ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ ವಿಭಾಗದಲ್ಲಿ ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ನೃತ್ಯ ವಿಭಾಗದಲ್ಲಿ ಜಾನಪದ ನೃತ್ಯ, ಭರತನಾಟ್ಯ, ವಾದ್ಯ ಸಂಗೀತ, ಜಾನಪದ ಗೀತೆ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಕಿರು ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.
     ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಯಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳಿಂದ ಸೇವಾ ಪ್ರಮಾಣ ಪತ್ರದೊಂದಿಗೆ ಡಿ.೦೩ ರ ಸಂಜೆ ೪.೩೦ ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಲ್ಲಿ ಹೆಸರು ನೊಂದಾಸಿಕೊಳ್ಳಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ, ಮೊ :೯೮೮೦೬೭೦೯೨೫ ಅಥವಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಛೇರಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ನ್ನು ಸಂಪರ್ಕಿಸಬಹುದಾಗಿದೆ ಎಂದು  ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top