PLEASE LOGIN TO KANNADANET.COM FOR REGULAR NEWS-UPDATES

ಹಂಪಿ ಪ್ರಾಧಿಕಾರವು ವಿರುಪಾಪುರ ಗಡ್ಡೆಯ ಅರಣ್ಯಪ್ರದೇಶದಲ್ಲಿರುವ ಅಕ್ರಮ ರೆಸಾರ್ಟ್‌ಗಳನ್ನು ತೆರುವು ಮಾಡಿದ್ದು ಸ್ವಾಗತಾರ್ಹ. ಕೆಲವು ರೆಸಾರ್ಟ್‌ಗಳನ್ನು ತೆರುವು ಮಾಡದೇ ಇರುವುದು ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್ ತಿಳಿಸಿದ್ದಾರೆ. ವಿರುಪಾಪುರ ಗಡ್ಡೆಯಲ್ಲಿ ಸರಕಾರಿ ಅರಣ್ಯ ಭೂಮಿಯಲ್ಲಿ ಇರುವ ಅಕ್ರಮ ರೆಸಾರ್ಟ್‌ಗಳನ್ನು ತೆರುವುಗೊಳಿಸಲು ಸರಕಾರ ಬಹಳ ದಿನಗಳಿಂದ ಪ್ರಯತ್ನಿಸುತ್ತಾ ಬಂದಿದೆ. ಈಗ ತೆರುವು ಕಾರ್ಯಕ್ರಮಕ್ಕೆ ಮುಂದಾಗಿರುವ ಸರಕಾರ ಕೆಲವು ಅಕ್ರಮ ರೆಸಾರ್ಟ್‌ಗಳನ್ನು ದ್ವಂಸಗೊಳಿಸಿದ್ದು, ಮತ್ತು ಕೆಲವನ್ನು ಹಾಗೆಯೇ ಉಳಿಸಿರುವುದರಲ್ಲಿ ರಾಜಕೀಯ ಪ್ರಭಾವ ಎದ್ದು ಕಾಣುತ್ತದೆ. ಕರ್ನಾಟಕದಲ್ಲಿಯೇ ಭೂಗತ ಜಗತ್ತಿಗೆ ಆಶ್ರಯ ತಾಣವಾದ ವಿರುಪಾಪುರ ಗಡ್ಡೆಯಲ್ಲಿ ಯಥೇಚ್ಛವಾಗಿ ಅಕ್ರಮ ಮಧ್ಯ, ಗಾಂಜಾ, ಅಫೀಮು ಬ್ರೌನ್‌ಶುಗರ್ ನಂತಹ ಮಾದಕ ವಸ್ತುಗಳ ವಹಿವಾಟು ನಡೆಸಲಾಗುತ್ತಿದೆ. ಈ ವಹಿವಾಟಿನಲ್ಲಿ ವಿದೇಶಿಗರು ಮತ್ತು ದೇಶದ ಭೂಗತ ಜಗತ್ತಿನ ನೇರ ಪಾತ್ರವಿದೆ. ಇದರಿಂದಾಗಿ ಎಲ್ಲಾ ರೆಸಾರ್ಟ್‌ಗಳನ್ನು ತೆರುವುಗೊಳಿಸಿ ಅಲ್ಲಿನ ಕೃಷಿ ಕಾರ್ಮಿಕರಿಗೆ ಹೊಸ ಅರಣ್ಯ ಕಾಯ್ದೆ ಅಡಿಯಲ್ಲಿ ನಿವೇಶನಗಳನ್ನು ಹಂಚಿ ಅವರ ಬದುಕಲು ಅವಕಾಶ ಮಾಡಿಕೊಡಬೇಕೆಂದಿದ್ದಾರೆ.  ವಿರುಪಾಪುರ ಗಡ್ಡೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳಲ್ಲಿ ಪ್ರಭಾವಿಗಳು, ರಾಜಕಾರಣಿಗಳ ಕೈವಾಡವಿರುವುದು ಸತ್ಯಸಂಗತಿಯಾಗಿದೆ. ಹಂಪಿ ಪ್ರಾಧಿಕಾರ ರೆಸಾರ್ಟ್‌ಗಳನ್ನು ತೆರುವುಗೊಳಿಸುವುದು ಸ್ವಾಗರ್ತಾಹವಾಗಿದೆ. ಅಲ್ಲಿನ ಬಡ ಕೃಷಿ ಕಾರ್ಮಿಕರನ್ನು ಒಕ್ಕಲೆಬ್ಬಿಸುವುದು ಖಂಡನಾರ್ಹವಾಗಿದೆ. ಶೀಘ್ರದಲ್ಲಿಯೇ ಸಿಪಿಐಎಂಎಲ್ ಪಕ್ಷವು ನಿಜವಾದ ಫಲಾನುಭವಿಗಳಾದ ಕೃಷಿ ಕಾರ್ಮಿಕರನ್ನು ಗುರುತಿಸಿ ಅವರಿಗೆ ನ್ಯಾಯ ಕೊಡಿಸಲು ಕಾನೂನು ಸಮರ ಮತ್ತು ಹೋರಾಟ ನಡೆಸಲಿದೆ ಎಂದು ಸಿಪಿಐಎಂಎಲ್ ಪಕ್ಷ ತಿಳಿಸಿದೆ.

Advertisement

0 comments:

Post a Comment

 
Top