ಕೊಪ್ಪಳ, ನ. ೨೮ (ಕ ವಾ) ಸಂತ ಕವಿ ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದೊಂದಿಗೆ ಶನಿವಾರದಂದು ನಗರದ ಸಾಹಿತ್ಯ ಭವನದಲ್ಲಿ ಅರ್ಥಪೂರ್ಣವಾಗಿ, ಸರಳವಾಗಿ ಆಚರಿಸಲಾಯಿತು. ಜೀವನ ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಭಕ್ತ ಕನಕದಾಸರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ಪೂಜೆಯೊಂದಿಗೆ, ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿ ಆಚರಣೆಗೆ ಚಾಲನೆ ನೀಡಿದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಕನಕದಾಸರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು, ಭಕ್ತ ಕನಕದಾಸರು ಏಕಕಾಲಕ್ಕೆ ಕವಿ ಹಾಗೂ ದಾರ್ಶನಿಕರೂ ಆಗಿದ್ದರು. ಕನಕದಾಸರ ತಲ್ಲಣ, ಮಾನವಿಯ ನೆಲೆಯಲ್ಲಿ ಪ್ರತಿಸ್ಪಂದಿಸಿದ್ದು, ಈ ಕಾರಣಕ್ಕೆ ಅವರ ಕಾವ್ಯಗಳು, ಕೀರ್ತನೆಗಳು ಮನುಷ್ಯ ಸಮಾಜದೊಂದಿಗೆ ಸ್ಪಂದಿಸುತ್ತಲೇ ಇವೆ. ಕಾಲಮಾನದೊಟ್ಟಿಗೆ ಬೆಳೆಯುತ್ತಲೇ ಬರುತ್ತಿವೆ. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಡಾಂಭಿಕತೆಯನ್ನು ಖಂಡಿಸುವ, ಸಮಾಜವನ್ನು ವಿಮರ್ಶಿಸುವ, ಲೋಕನೀತಿಯನ್ನು ಬೋಧಿಸಿ, ಭಕ್ತಿ ಪಾರಮ್ಯವನ್ನು ಮೆರೆಯುವಂತೆ ಮಾಡಿದ್ದಾರೆ. ಕನಕದಾಸರು, ಪುರಂದರ ದಾಸರಂತಹ ದಾಸ ಶ್ರೇಷ್ಠರು ನಡೆದಾಡಿದ ಈ ನೆಲ ದಾಸ ಪರಂಪರೆಯ ನಾಡಾಗಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನಕದಾಸರ ಜಯಂತಿ ಅಂಗವಾಗಿ ರೂಪಿಸಿದ 'ಸಂತ ಕವಿ ಕನಕದಾಸರು' ಮಡಿಕೆ ಪತ್ರವನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಗಾಯಕ ಸದಾಶಿವ ಪಾಟೀಲರು ಕನಕದಾಸರ ಕೀರ್ತನೆಗಳನ್ನು ಹಾಡುವ
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ತಾ.ಪಂ. ಅಧ್ಯಕ್ಷೆ ಬಾನು ಚಂದುಸಾಬ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದು ಭಕ್ತ ಕನಕದಾಸರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ಪುಷ್ಪ ನಮನ ಸಲ್ಲಿಸಿದರು. 'ಸಂತ ಕವಿ ಕನಕದಾಸರು' ಮಡಿಕೆ ಪತ್ರವನ್ನು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು.
ಮೂಲಕ ಕಾರ್ಯಕ್ರಮಕ್ಕೆ ಶೋಭೆ ತಂದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು, ಭಕ್ತ ಕನಕದಾಸರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ಪೂಜೆಯೊಂದಿಗೆ, ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿ ಆಚರಣೆಗೆ ಚಾಲನೆ ನೀಡಿದರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಕನಕದಾಸರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು, ಭಕ್ತ ಕನಕದಾಸರು ಏಕಕಾಲಕ್ಕೆ ಕವಿ ಹಾಗೂ ದಾರ್ಶನಿಕರೂ ಆಗಿದ್ದರು. ಕನಕದಾಸರ ತಲ್ಲಣ, ಮಾನವಿಯ ನೆಲೆಯಲ್ಲಿ ಪ್ರತಿಸ್ಪಂದಿಸಿದ್ದು, ಈ ಕಾರಣಕ್ಕೆ ಅವರ ಕಾವ್ಯಗಳು, ಕೀರ್ತನೆಗಳು ಮನುಷ್ಯ ಸಮಾಜದೊಂದಿಗೆ ಸ್ಪಂದಿಸುತ್ತಲೇ ಇವೆ. ಕಾಲಮಾನದೊಟ್ಟಿಗೆ ಬೆಳೆಯುತ್ತಲೇ ಬರುತ್ತಿವೆ. ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಡಾಂಭಿಕತೆಯನ್ನು ಖಂಡಿಸುವ, ಸಮಾಜವನ್ನು ವಿಮರ್ಶಿಸುವ, ಲೋಕನೀತಿಯನ್ನು ಬೋಧಿಸಿ, ಭಕ್ತಿ ಪಾರಮ್ಯವನ್ನು ಮೆರೆಯುವಂತೆ ಮಾಡಿದ್ದಾರೆ. ಕನಕದಾಸರು, ಪುರಂದರ ದಾಸರಂತಹ ದಾಸ ಶ್ರೇಷ್ಠರು ನಡೆದಾಡಿದ ಈ ನೆಲ ದಾಸ ಪರಂಪರೆಯ ನಾಡಾಗಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನಕದಾಸರ ಜಯಂತಿ ಅಂಗವಾಗಿ ರೂಪಿಸಿದ 'ಸಂತ ಕವಿ ಕನಕದಾಸರು' ಮಡಿಕೆ ಪತ್ರವನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಗಾಯಕ ಸದಾಶಿವ ಪಾಟೀಲರು ಕನಕದಾಸರ ಕೀರ್ತನೆಗಳನ್ನು ಹಾಡುವ
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ತಾ.ಪಂ. ಅಧ್ಯಕ್ಷೆ ಬಾನು ಚಂದುಸಾಬ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದು ಭಕ್ತ ಕನಕದಾಸರ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ಪುಷ್ಪ ನಮನ ಸಲ್ಲಿಸಿದರು. 'ಸಂತ ಕವಿ ಕನಕದಾಸರು' ಮಡಿಕೆ ಪತ್ರವನ್ನು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸಲಾಯಿತು.
0 comments:
Post a Comment