PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ, ನ.೨೫ (ಕ ವಾ) ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ 'ತೋಟಗಾರಿಕೆ ಮೇಳ-೨೦೧೫' ನ್ನು ಡಿ.೧೯ ರಿಂದ ೨೧ ರವರೆಗೆ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದೆ.
     ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಈ ಬೃಹತ್ ತೋಟಗಾರಿಕೆ ಮೇಳವು 'ಆರೋಗ್ಯ ಜೀವನಕ್ಕೆ ಆರೋಗ್ಯಯುತ ಮಣ್ಣು' ಎಂಬ ಶೀರ್ಷಿಕೆಯಡಿ ಚಾಲನೆಗೊಳ್ಳಲಿದೆ. ಮೇಳದಲ್ಲಿ ರಾಜ್ಯದ ಎಲ್ಲ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಗ್ರ ಮಣ್ಣಿನ ಆರೋಗ್ಯದ ತಾಂತ್ರಿಕತೆ, ಹೈಟೆಕ್ ತೋಟಗಾರಿಕೆ, ಫಲ ಪುಷ್ಪ ತರಕಾರಿಗಳ ಪ್ರದರ್ಶನ, ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧಿತ ಪದಾರ್ಥಗಳು, ಗುಣಮಟ್ಟದ ಸಸ್ಯಗಳ ಮಾರಾಟ, ಹಸಿರು ಮನೆ, ನೆರಳು ಮನೆ, ನಿಖರ ಬೇಸಾಯ ತಂತ್ರಜ್ಞಾನ, ಜೈವಿಕ ಹಾಗೂ ಸಾವಯುವ ಗೊಬ್ಬರಗಳು, ನಡುತೋಪು, ಔಷಧೀಯ ಮತ್ತು ಸುಗಂಧಿ ಸಸ್ಯಗಳ ಮಾಹಿತಿ, ಜಾನುವಾರು, ಮತ್ಸ್ಯ ಹಾಗೂ ಶ್ವಾನಗಳ ಪ್ರದರ್ಶನ, ಯಂತ್ರೋಪಕರಣಗಳು ಮತ್ತು ಸಲಕರಣೆಗಳು, ರಾಸಾಯನಿಕ ಗೊಬ್ಬರಗಳು ಹಾಗೂ ಪೀಡೆನಾಶಕಗಳು, ಜೇನು ಕೃಷಿ, ಸಮಗ್ರ ಕೃಷಿ ಪದ್ಧತಿ, ಸುಸ್ಥಿರ ಕೃಷಿ ಪದ್ಧತಿಗಳು, ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿ, ಕೃಷಿ ಬ್ಯಾಂಕಿಂಗ್ ವ್ಯವಹಾರಗಳು, ಕೃಷಿ ಪರಿಕರಗಳ ಪ್ರದರ್ಶನ, ಕೃಷಿ ಮತ್ತು ತೋಟಗಾರಿಕಾ ಪ್ರಕಟಣೆಗಳು, ತೋಟಗಾರಿಕೆ ಹಾಗೂ ಖಾದಿ ಉದ್ದಿಮೆಗಳು, ಶ್ರೇಷ್ಠ ರೈತ/ ರೈತ ಮಹಿಳೆ ಪ್ರಶಸ್ತಿ ಸಮಾರಂಭ, ಶ್ರೇಷ್ಠ ತೋಟಗಾರಿಕೆ ರೈತ ಉದ್ಯಮಿ ಪ್ರಶಸ್ತಿ ಸಮಾರಂಭ, ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮಗಳು ಇತ್ಯಾದಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದು, ತೋಟಗಾರಿಕೆಯಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳುವಂತೆ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಅವರು ತಿಳಿಸಿದ್ದಾರೆ. 
 ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ನ. ೨೬ ರಂದು ಪೂರ್ವಭಾವಿ ಸಭೆ.
ಕೊಪ್ಪಳ, ನ.೨೫ (ಕ ವಾ) ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ಕೊಪ್ಪಳ ಜಿಲ್ಲೆಯಲ್ಲಿ ಇದೇ ನ. ೨೮ ಮತ್ತು ೨೯ ರಂದು ಎರಡು ದಿನಗಳ ಕಾಲ ಆಯೋಜಿಸುವುದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ನ. ೨೬ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವಹಿಸುವರು ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.
ನ.೨೬ ರಂದು ಕೊಪ್ಪಳದಲ್ಲಿ ಬಾಲಿಕಾ ಸಂಘಗಳ ಸಮಾವೇಶ.
ಕೊಪ್ಪಳ, ನ.೨೫ (ಕ ವಾ) ಕೊಪ್ಪಳ ಜಿಲ್ಲಾಡಳಿತ, ಯುನಿಸೆಫ್, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಇವರುಗಳ ಸಂಯುಕ್ತಾಶ್ರಯದಲ್ಲಿ ಬಾಲಿಕಾ ಸಂಘಗಳ ಸಮಾವೇಶವನ್ನು ನ.೨೬ ರಂದು ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಲಾಗಿದೆ.
     ಜಿಲ್ಲೆಯಲ್ಲಿ ಈಗಾಗಲೇ ಸುಮಾರು ೯೦ ಗ್ರಾಮ ಪಂಚಾಯತಿಗಳಲ್ಲಿರುವ ಬಾಲಿಕಾ ಸಂಘಗಳಿಗೆ ಮಕ್ಕಳ ಸಂರಕ್ಷಣೆ, ಲಿಂಗತ್ವ, ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾಯ್ದೆಗಳ ಬಗ್ಗೆ ತರಬೇತಿಯನ್ನು ನೀಡಲಾಗಿದ್ದು, ಬಾಲಿಕಾ ಸಂಘಗಳ ಸಮಾವೇಶದಲ್ಲಿ ತರಬೇತಿಯ ಸಾಧಕ-ಬಾದಕಗಳು ಹಾಗೂ ವಿಮರ್ಶೆ ನಡೆಸಲಾಗುವುದು. ನಂತರದಲ್ಲಿ ಬಾಲಿಕೆಯರ ಸಬಲೀಕರಣಕ್ಕಾಗಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಬಾಲಿಕಾ ಸಂಘಗಳ ಸುಮಾರು ೩೦೦ ಜನ ಸದಸ್ಯರು ಭಾಗವಹಿಸಲಿದ್ದಾರೆ. ಅಲ್ಲದೆ, ದೆಹಲಿಯಿಂದ ಯುನಿಸೆಫ್ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಸಂಯೋಜಕರು ತಿಳಿಸಿದ್ದಾರೆ.  

Advertisement

0 comments:

Post a Comment

 
Top