PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-21- ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಕೆನರಾ ಬ್ಯಾಂಕ ಕೊಪ್ಪಳ ಶಾಖೆ ವತಿಯಿಂದ 'ಕೆನರಾ ವಿದ್ಯಾಜ್ಯೋತಿ' ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು.
ಸ.ಪ್ರೌ ಶಾಲೆಯಲ್ಲಿ ಓದುತ್ತಿರುವ ೫ ರಿಂದ ೭ನೇ ತರಗತಿಯಲ್ಲಿ ಓದುವ ಮೂರು ಜನ ವಿದ್ಯಾರ್ಥಿನಿಯರಿಗೆ ತಲಾ ೨೫೦೦/ ರೂಗಳು ಹಾಗೂ ೮ ರಿಂದ ೧೦ನೇ ತರಗತಿಯಲ್ಲಿ ಓದುವ ಮೂರು ಜನ ವಿದ್ಯಾರ್ಥಿನಿಯರಿಗೆ ತಲಾ ೫೦೦೦/ ರೂ.ಗಳನ್ನು ನೀಡಲಾಯಿತು. ಈ ವಿದ್ಯಾರ್ಥಿನಿಯರಿಗೆ ಕೆ.ಮುರಳಿಧರ ಮುಖ್ಯವ್ಯವಸ್ಥಾಪಕರು ಹಾಗೂ ಎ. ರವೀಂದ್ರ ವ್ಯವಸ್ಥಾಪಕರು, ದ್ವಾರಕಾದಾಸ್ ಫೋರಾತ್, ಕೃಷಿ ವಿಸ್ತರಣಾ ಅಧಿಕಾರಿ  ಇವರು ಬೇಟಿ ನೀಡಿ ವಿದ್ಯಾರ್ಥಿವೇತನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಾದ ಹನುಮಂತಪ್ಪ ಮೂಲಿಮನಿ, ದೈ.ಶಿ ಶರಣಬಸಪ್ಪ ಮಣ್ಣೂರು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಭೀರಪ್ಪ ಕಿನ್ನೂರಿ, ಹಾಗೂ ಸದಸ್ಯರುಗಳಾದ  ಮಲ್ಲಿಕಾರ್ಜುನ ಪೋಲಿಸ್ ಪಾಟೀಲ್, ಗ್ಯಾನಪ್ಪ ಬೆಳವಿನಾಳ, ಸಿದ್ದಾರಡ್ಡಿ ಸೀಗೆನಹಳ್ಳಿ ಮತ್ತು ಗ್ರಾ.ಪಂ ಸದಸ್ಯರಾದ ನಿಂಗನಗೌಡ ಪೋಲಿಸ್ ಪಾಟೀಲ್, ಹಾಗೂ ರಾಮನಗೌಡ ಹ್ಯಾಟಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು,

Advertisement

0 comments:

Post a Comment

 
Top