ಕೊಪ್ಪಳ ನ. ೨೨. ಕೊಪ್ಪಳ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನವೆಂಬರ್ ೨೫ ರಂದು ನಡೆಯುವ ಕೊಪ್ಪಳ ತಾಲೂಕ ಮಟ್ಟದ ಸ್ಕೌಟರ್‍ಸ್ ಗೈಡರ್‍ಸ್ ಸಮಾವೇಶಕ್ಕೆ ಎಲ್ಲಾ ಶಾಲೆಗಳ ಶಿಕ್ಷಕಕರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಆದೇಶ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ತಾಲೂಕ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳು, ಅತ್ಯಂತ ಮುತುವರ್ಜಿವಹಿಸಿ ಸಮಾವೇಶಕ್ಕೆ ಗಮನ ನೀಡಿದ್ದು ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು, ಕಬ್ಸ್ ಬುಲ್ ಬುಲ್ಸ್
ತೆರೆಯುವದನ್ನು ಕಡ್ಡಾಯ ಮಾಡಿದೆ ಅದರಂತೆ ಕೊಪ್ಪಳ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಇದರ ಘಟಕವನ್ನು ಒಂದು ತಿಂಗಳಲ್ಲಿ ಆರಂಭಿಸಬೇಕು, ಅದಕ್ಕಾಗಿ ೨೫ ರಂದು ಬೆಳಿಗ್ಗೆ ೯ ರಿಂದ ನಡೆಯುವ ಸಮಾವೇಶದಲ್ಲಿ ಘಟಕ ಹೊಂದಿ ಶಾಲೆಯವರು ನವೀಕರಣ ಶುಲ್ಕ ತುಂಬಬೇಕು, ಘಟಕ ಇಲ್ಲದವರು ಸಹ ಶುಲ್ಕ ತುಂಬಿ ಹೊಸ ಘಟಕವನ್ನು ಆರಂಭಿಸಬೇಕು, ತಪ್ಪಿದಲ್ಲಿ ಸಂಬಂಧಿಸಿದ ಶಾಲೆಯ ಶಿಕ್ಷಕರನ್ನು ಹೊಣೆಗಾರರನ್ನಾಗಿಸಲಾಗುವದು ಎಂದಿರುವ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಆದೇಶ ಮಾಡಲು ಸೂಚಿಸಿದ್ದಾರೆ. ಆದ್ದರಿಂದ ಈಗಾಗಲೆ ಎಲ್ಲಾ ಶಾಲೆಗಳಿಗೆ ಅಂಚೆ ಮೂಲಕ ಆದೇಶ ಪ್ರತಿಗಳನ್ನು ಕಳುಹಿಸಲಾಗಿದ್ದು, ಪತ್ರ ತಡವಾದರೂ ಸಹ ಪತ್ರಿಕಾ ಪ್ರಕಟಣೆಯನ್ನೇ ಆದೇಶವೆಂದು ಭಾವಿಸಿ ಪಾಲ್ಗೊಳ್ಳಬೇಕು ಹೆಚ್ಚಿನ ಮಾಹಿತಿಯನ್ನು ಕಾರ್ಯದರ್ಶಿ ಎಂ.ಕೆ. ಹಿರೇಮಠ ಮೊ: ೯೩೭೯೦೦೭೧೨೪, ಬಸನಗೌಡ ಪಾಟೀಲ ಮೊ : ೭೮೨೯೦೩೯೩೬೯ ಇವರನ್ನು ಸಂಪರ್ಕಿಸುವಂತೆ ಅಧ್ಯಕ್ಷ ಗೊಂಡಬಾಳ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ತಾಲೂಕ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳು, ಅತ್ಯಂತ ಮುತುವರ್ಜಿವಹಿಸಿ ಸಮಾವೇಶಕ್ಕೆ ಗಮನ ನೀಡಿದ್ದು ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು, ಕಬ್ಸ್ ಬುಲ್ ಬುಲ್ಸ್
0 comments:
Post a Comment