PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ನ.೨೩ (ಕ ವಾ) ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಂದೇ ಮಾತರಂ ಯುವ ಸಾಂಸ್ಕೃತಿಕ ಸೇವಾ ಸಂಘ (ರಿ), ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವವನ್ನು ನ.೨೫ ರಂದು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದ್ದು, ಭಾಗವಹಿಸಲಿಚ್ಛಿಸುವವರು ಅಂದು ಬೆಳಿಗ್ಗೆ ೧೦ ಗಂಟೆ ಒಳಗಾಗಿ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ|| ಶಾರದಾ ನಿಂಬರಗಿ ಅವರು ತಿಳಿಸಿದ್ದಾರೆ. .
     ಸ್ಪರ್ಧೆಗಳ ವಿವರ ಇಂತಿದೆ.  ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವದಲ್ಲಿ ಜನಪದ ನೃತ್ಯ, ೨೦ ಜನರು, ೧೫ ನಿಮಿಷ. ನಾಟಕ ಹಿಂದಿ ಅಥವಾ ಇಂಗ್ಲೀಷ್, ೧೨ ಜನರು, ೪೫ ನಿಮಿಷ. ಭರತನಾಟ್ಯ, ವೈಯಕ್ತಿಕ, ೧೫ ನಿಮಿಷ. ತಬಲಾ ಸೋಲೋ, ವೈಯಕ್ತಿಕ, ೫ ನಿಮಿಷ. ಕೊಳಲು ವಾದನ, ವೈಯಕ್ತಿಕ, ೧೫ ನಿಮಿಷ. ಶಾಸ್ತ್ರೀಯ ಸಂಗೀತ ಹಿಂದುಸ್ತಾನ, ೧೫ ನಿಮಿಷ. ವೀಣಾ ಸೋಲೋ, ವೈಯಕ್ತಿಕ, ೧೫ ನಿಮಿಷ. ಮೃದಂಗಂ, ವೈಯಕ್ತಿಕ, ೧೦ ನಿಮಿಷ. ಜನಪದಗೀತೆ, ೧೦ ಜನರು, ೭ ನಿಮಿಷ. ಆಶುಭಾಷಣ, ಹಿಂದಿ ಅಥವಾ ಇಂಗ್ಲೀಷ್. ಕುಚುಪುಡಿ ನೃತ್ಯ, ವೈಯಕ್ತಿಕ, ೧೫ ನಿಮಿಷ. ಗಿಟಾರ್ ಸೋಲೋ, ವೈಯಕ್ತಿಕ, ೧೦ ನಿಮಿಷ. ಹಾರ್ಮೋನಿಯಂ, ವೈಯಕ್ತಿಕ, ೧೦ ನಿಮಿಷ. ಶಾಸ್ತ್ರೀಯ ಸಂಗೀತ, ಕರ್ನಾಟಕ, ೧೫ ನಿಮಿಷ. ಸಿತಾರ್ ಸೋಲೋ, ವೈಯಕ್ತಿಕ, ೧೫ ನಿಮಿಷ. ಮಣಿಪುರಿ, ಓಡಿಸ್ಸಿ ಕತಕ್ ನೃತ್ಯ ಸ್ಪರ್ಧೆಗೆ ೧೫ ನಿಮಿಷ ಸಮಯ ನಿಗದಿಪಡಿಸಲಾಗಿದೆ. ಈ ಮೇಲಿನ ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವ ೧೮ ರಿಂದ ೩೫ ವರ್ಷದೊಳಗಿನ ಕಾಲೇಜು ಮಹಿಳಾ ಪುರುಷ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು, ಸಂಗೀತ ಸಂಸ್ಥೆಗಳ ಸದಸ್ಯರು, ಕಲಾವಿದರು, ಆಸಕ್ತರು ನ.೨೫ ರ ಬೆಳಿಗ್ಗೆ ೧೦ ಗಂಟೆಗಳೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಯುವ ಜನೋತ್ಸವದಲ್ಲಿ ಭಾಗವಹಿಸುವ ಕಲಾವಿದರಿಗೆ ಪ್ರಯಾಣ ಭತ್ಯೆ ನೀಡಲಾಗುವುದು.
     ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ೪೦ ಜನರ ತಂಡವನ್ನು ನ.೩೦ ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ಸ್ಪರ್ಧಾಳುಗಳಿಗೆ ಬೇಕಾಗುವ ಸಾಮಗ್ರಿಗಳನ್ನು ತಾವೇ ತರಬೇಕು. ಭಾಗವಹಿಸುವ ಎಲ್ಲಾ ಸ್ಫರ್ಧಾಳುಗಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ಅಥವಾ ಆನಂದ ಹಳ್ಳಿಗುಡಿ, ಮೊ : ೯೧೬೪೧೦೭೦೧೬ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ|| ಶಾರದಾ ನಿಂಬರಗಿ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top