PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಅ. ೧. ಸಿನೆಮಾ ಕ್ಷೇತ್ರದ ಆಸಕ್ತರಿಗೆ ಮತ್ತು ಪ್ರತಿಭಾವಂತರಿಗೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಡೆಸುತ್ತಿರುವ ಆಡಿಷನ್ ಅಕ್ಟೋಬರ್ ೩ ಮತ್ತು ೪ ರ ಬದಲಾಗಿ ಅಕ್ಟೋಬರ್ ೪ ಹಾಗೂ ೧೦ ರಂದು ನಡೆಯಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿಗೊಂಡಿರುವ ಆರು ಚಲನಚಿತ್ರಗಳಿಗೆ ಆಸಕ್ತ ಕಲಾವಿದರಿಗೆ ಆಡಿಷನ್ (ಪ್ರತಿಭಾ ಶೋಧ) ನಡೆಸಲಿದೆ. ಅಕ್ಟೋಬರ್ ೪ ರವಿವಾರ ರಂದು ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಎದುರಿಗಿರುವ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೫ ರ ತನಕ ನಡೆಯುತ್ತಿದ್ದು ನಂತರ ಅಕ್ಟೋಬರ್ ೧೦ ರಂದು ಕೊಪ್ಪಳದ ಲಕ್ಷ್ಮೀ ಶಿವೆ ಚಿತ್ರಮಂದಿರದ ಹತ್ತಿರವಿರುವ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಅಂದು ಬೆಳಿಗ್ಗೆ ರಿಂದ ಸಂಜೆ ೫ ರ ತನಕ ನಡೆಯುತ್ತಿದೆ ಆದ್ದರಿಂದ ದಿನಾಂಕ ಮತ್ತು ಸ್ಥಳ ಬದಲಾವಣೆಯನ್ನು ಕಲಾಸಕ್ತರು ಗಮನಿಸಬೇಕು, ಆಡಿಷನ್‌ನಲ್ಲಿ ಭಾಗವಹಿಸುವದಕ್ಕೆ ಯಾವುದೇ ಶುಲ್ಕವಿರುವದಿಲ್ಲ. ಇದೇ ವೇಳೆ ತಂತ್ರಜ್ಞರು, ಕ್ಯಾಮರಾಮೆನ್, ಸಂಕಲನಕಾರರು, ನಾಯಕ ನಟ, ನಾಯಕ ನಟಿಯರ ಜೊತೆಗೆ ಪೋಷಕ, ಖಳ ನಟ-ನಟಿ ಪಾತ್ರಗಳಿಗೂ ಆಡಿಷನ್ ನಡೆಯಲಿದೆ. ಸಂಗೀತ ಸಂಯೋಜಕರು, ಹಾಡುಗಾರರು, ನೃತ್ಯಪಟುಗಳು, ನೃತ್ಯ ಸಂಯೋಜಕರೂ ಆಗಮಿಸಿ ತಮ್ಮ ಪ್ರತಿಭೆ ತೋರಿಸಿ ಮುಂದಿನ  ಚಿತ್ರಗಳಲ್ಲಿ ಅವಕಾಶ ಪಡೆಯಬಹುದಾಗಿದೆ. ಸಾಹಿತ್ಯ ಎಂಟರ್‌ಪ್ರೈಸಸ್ ಶ್ರೀ ಸಹಸ್ರಾಂಜನೇಯ ಪಿಕ್ಷರ್‍ಸ್‌ರವರ ಹೊಂಗಿರಣ (ಮಕ್ಕಳ ಚಿತ್ರ), ಎಸ್‌ಜೆ ಆರ್ಟ್ಸ್ ಫಿಲಂಸ್‌ರವರ ಗರಗದ ಶ್ರೀ ಮಡಿವಾಳೇಶ್ವರರು (ಭಕ್ತಿ ಪ್ರಧಾನ ಚಿತ್ರ), ಹೆತ್ತೊಡಿಲು ಕ್ರಿಯೇಷನ್‌ರವರ ಸೇವಕ (ಸಾಮಾಜಿ ಚಿತ್ರ), ಜಗಜ್ಯೋತಿ ಶ್ರೀ ಬಸವೇಶ್ವರ (ಐತಿಹಾಸಿಕ) ಮತ್ತು ಶ್ರೀ ಪರಮೇಶ್ವರಿ ಮೂವಿ ಮೇಕರ್‍ಸ್‌ರವರ ತ್ರಿಡೇಸ್ (ಹಾರರ್ ತ್ರಿಲ್ಲರ್ ಚಿತ್ರ) ಹಾಗೂ ಹಿಂದಿ ಚಿತ್ರ ಹಾಲಿಡೇ ಇನ್ ಅಲಿಬಾಗ್ ಚಿತ್ರಗಳಿಗೆ ಆಯ್ಕೆ ನಡೆಯಲಿದೆ. ಚಿತ್ರಗಳಲ್ಲಿ ಅಭಿನಯಿಸಲು, ಕೆಲಸ ಮಾಡಲು ಮಂಡಳಿಯ ಖಾಯಂ ಸದಸ್ಯರಾಗಬೇಕು ಅದಕ್ಕೆ ಅವರು ತಮ್ಮ ಎರಡು ಭಾವಚಿತ್ರ, ಗುರುತಿನ ಚೀಟಿ ಹಾಗೂ ಮಂಡಳಿಯ ಸದಸ್ಯತ್ವ ಶುಲ್ಕ ೬೦೦ ಗಳನ್ನು ತೆಗೆದುಕೊಂಡು ನೇರವಾಗಿ ಆಡಿಷನ್ ಸ್ಥಳಕ್ಕೆ ಬರಬೇಕು, ಅಲ್ಲಿ ನೋಂದಣಿ ಮಾಡಿಸಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸಿ ಐದು ಚಿತ್ರಗಳಲ್ಲಿ ಅವಕಾಶ ಪಡೆಯಬಹುದು, ಹೆಚ್ಚಿನ ಮಾಹಿತಿಯನ್ನು ಮಂಡಳಿಯ ಅಧ್ಯಕ್ಷ ಶಂಕರ ಸುಗತೆ ಅಥವಾ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ (ಮೊ ೯೪೪೮೩೦೦೦೭೦) ರವರಿಂದ ಪಡೆಯಬಹುದು.

Advertisement

0 comments:

Post a Comment

 
Top