PLEASE LOGIN TO KANNADANET.COM FOR REGULAR NEWS-UPDATES

  ಡಾ ಶಶಿಕಾಂತ ಪಟ್ಟಣ   ಪೂನಾ

ಅಖಿಲ ಭಾರತ  ಶರಣ ಸಾಹಿತ್ಯ ಪರಿಷತ್ ಮೈಸೂರು ಇವರು ಪ್ರತಿ ವರ್ಷ ಕೊಡಮಾಡುವ ರಮಣಶ್ರೀ  ಶರಣ ಪ್ರಶಸ್ತಿಯನ್ನು ಶರಣ ಸಾಹಿತ್ಯದಲ್ಲಿ ಬಸವಾದಿ ಶರಣರ ವಿಚಾರವನ್ನು ನಾಡಿನೆಲ್ಲ ಪಸರಿಸಲು ದುಡಿದ ಹಿರಿಯ ಸಾಹಿತಿಗಳು ಸಂಶೋಧಕರು ಮತ್ತು ಸಾಧಕರಿಗೆ ಕೊಡುತ್ತಾರೆ..
 
ವಚನ ರಚನೆಯಲ್ಲಿ ಮುಂಡರಗಿ ಡಾ ಅನ್ನದಾನೇಶ್ವರ ಸ್ವಾಮಿಗಳಿಗೆ ಶರಣ ಸಾಹಿತ್ಯ ಪರಿಷತ್ ವತಿಯಿದಾ ಕೊಡಮಾಡುವ ರಮಣ ಶ್ರೀ   ಪ್ರಶಸ್ತಿ  ಕೊದಮಾದಿರುವದು ಆಶ್ಚರ್ಯ ತಂದಿದೆ.  ಕಾರಣ ಮುಂಡರಗಿ ಡಾ ಅನ್ನದಾನೇಶ್ವರ ಸ್ವಾಮಿ ಎಂದೂ ಬಸವಣ್ಣ ಮತ್ತು ಶರಣರ ಸಮಕಾಲಿನ ಸಾಹಿತ್ಯವಾದ ವಚನ ಸಾಹಿತ್ಯವನ್ನು ಅಧ್ಯನ ಮಾಡಿದವರಲ್ಲ ಅಷ್ಟೆ ಏಕೆ ಬಸವ ಪೂರ್ವಯುಗದ ವೀರಶೈವ ಸಿದ್ಧಾನ್ಥದ ಪ್ರಬಲ ಪ್ರತಿಪಾದಕರಲ್ಲಿ ಒಬ್ಬರು.
 
ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕ ಎಂದು ಒಪ್ಪಿಕೊಳ್ಳದ ಮುಂಡರಗಿ ಡಾ ಅನ್ನದಾನೇಶ್ವರ ಸ್ವಾಮಿಗಳಿಗೆ ಪ್ರಶಸ್ತಿ ನೀಡಿರುವದು ಮೈಸೂರು ಮಠದ ವೀರಶೈವ ಪರಂಪರೆಯ   ಪ್ರೀತಿಯನ್ನು  ಕಾಣುತ್ತೇವೆ.ಮುಂಡರಗಿ ಡಾ ಅನ್ನದಾನೇಶ್ವರ ಸ್ವಾಮಿ ಗಳು ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂದು ನಡೆಸಿದ ಹೋರಾಟಕ್ಕೆ ಅಡ್ಡಗಾಲು ಆಗಿದ್ದರೆ.ಹೇಗಾದರೂ ಮಾಡಿ ಈ ಹೋರಾಟವನ್ನು ಮುಗಿಸಬೇಕೆಂಬ ಸಂಚು ಹಾಕಿದವರಲ್ಲಿ ಮುಂಡರಗಿ ಡಾ ಅನ್ನದಾನೇಶ್ವರ ಸ್ವಾಮಿಗಳು ಅಗ್ರರು.
ಈ ವಿಷಯ ಗೊರುಚೆ ಅವರಿಗೆ ಗೊತ್ತಿಲ್ಲಾ ಅಂತ ಅಲ್ಲ.ಆದರು ತಮ್ಮ ವೀರಶೈವ ಶ್ರದ್ಧೆ ಭಕ್ತಿ ನಿಷ್ಠೆಯನ್ನು ಪ್ರದರ್ಶಿಸುವಲ್ಲಿ ಗೊರುಚೆ ಯಸಹವ ಕಂಡಿದ್ದಾರೆ.
 
 
ಈ ಬಗ್ಗೆ ನಾನು ಶ್ರೀ ಚಂದ್ರ ಕಾಂತ ಬೆಲ್ಲದ ಅವರನ್ನು ಸಂಪರ್ಕಿಸಿದೆನು,ಅವರು ತಮ್ಮ ಬೇಸರ ವ್ಯಕ್ತ ಪಡಿಸಿದರು. ಮುಂಡರಗಿ ಡಾ ಅನ್ನದಾನೇಶ್ವರ ಸ್ವಾಮಿಗಳುಸಿದ್ಧಾಂತ ಶಿಖಾಮಣಿ ಹಾಗು ಬಸವ ಪೂರ್ವ ಯುಗದ ವೀರಶೈವ ಧರ್ಮದ ಕಾಲ್ಪನಿಕ ಚಿಂತನೆಯಲ್ಲಿದ್ದಾರೆ. ಇವರ ಯಾವ ವಚನಗಳು ಸಮಾಜಮುಖಿ ಆಗಿಲ್ಲ ಸನಾತನ ಧರ್ಮಕ್ಕೆ ಸೇರಿದ ಮುಂಡರಗಿ ಡಾ ಅನ್ನದಾನೇಶ್ವರ ಸ್ವಾಮಿಗಳು ಅವರಿಗೆ ಶರಣ ಸಾಹಿತ್ಯ ಪರಿಷತ್ತು ಪ್ರತಿಷ್ಟಿತ ರಮಣ ಶ್ರೀ ಪ್ರಶಸ್ತಿ ಕೊಟ್ಟಿರುವುದು ಆ ಪ್ರಶಸ್ತಿಗೆ ಅಗೌರವ ಸೂಚಿಸಿದಂತಾಗಿದೆ.

ಶರಣ ತತ್ವ ಪ್ರಸಾರಕ್ಕಾಗಿ ಬೀದರಿನ ಅಕ್ಕ ಅನ್ನಪೂರ್ಣ ಅವರಿಗೂ ರಮಣ ಶ್ರೀ ಪ್ರಶಸ್ತಿ ಹಾಗೂ ಫಲಕ ನೀಡಿರುವುದು ದುರಂತವೇ ಸರಿ. ಬಸವ ತತ್ವವನ್ನು ಒಂದು ಉಧ್ಯಮ ಮಾಡಿ ಕೋಟಿ ಕೋಟಿ ಹಣ ಆಸ್ತಿ ಮಾಡಿ ಸರಕಾರೀ ಯೋಜನೆಗಳನ್ನು ಆಕ್ರಮವಾಗಿ ತಂದು ತಾವು ಆಯುಷಾರಮಿ ಬದುಕು ನಡೆಸುವ  ಬಸವ ಗಿರಿಯಲ್ಲಿ ದಾಸೋಹ ಮಂಟಪಕ್ಕೆ  ಕೋಟಿ ಕೋಟಿ ಹಾಕಿದ್ದಾರೆ.  ಆಕ್ರಮ ಆಸ್ತಿ ಭಕ್ತರನ್ನು ಮೊಉಡ್ಯರನ್ನಾಗಿ ಮಾಡಿ ವಚನೋತ್ಸವ ಎಂಬ ವರ್ಷದ ಜಾತ್ರೆ ಮಾಡಿ ಜನರಿಂದ ಹಣ ಕನಕ ಕಾಳು ಸುಲಿಗೆ   ಮಾಡುತ್ತಾರೆ.ಮಂತ್ರಿಗಳನ್ನು ನ್ಯಾಯಾಧೀಶರನ್ನು ಕರೆಸಿ ತಮ್ಮ ವ್ಯವಹಾರಗಳ ಆಕ್ರಮ ಸಕ್ರಮ ಮಾಡುತ್ತಾರೆ. 
 
ಇವರ ಇನ್ನೊಂದು ಅಕ್ಷಮ್ಯ ಅಪರಾಧವೆಂದರೆ. ಗುರು ವಚನವೆಂದು ಲಿಂಗಾಯತ ಧರ್ಮ ಗ್ರಂಥ ಅಂತಾ ಪ್ರಕಟಿಸಿ ಅದರೊಳಗೆ ಬಸವಣ್ಣನವರ ಪ್ರಭುದೇವರ ಹಾಗೂ ಚೆನ್ನ ಬಸವಣ್ಣನವರ   ಆಯ್ದ ವಚನಗಳನ್ನು  ವಚನ ಸಂಪುಟ ಡಾ ಆರ್ ಸಿ ಹಿರೇಮಠ  ಶಿ ಶಿ ಬಸವನಾಳ ಡಾ ಕಲಬುರ್ಗಿ ಅವರ ವಚನಗಳ ಸಂಪುಟದಿಂದ ವಚನಗಳನ್ನು ಕದ್ದು ಗುರುವಚನ ಲಿಂಗಾಯತ ಧರ್ಮ ಗ್ರಂಥವೆಂದು ಜನರಲ್ಲಿ ನಂಬಿಗೆ ಹುಟ್ಟಿಸಿ ಅದನ್ನು ಜನರ ತೆಲೆ ಮೇಲೆ ಇಟ್ಟು ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಾರೆ. ಅದಕ್ಕೆ ಪಟ್ಟ ಕಟ್ಟುತ್ತಾರೆ, ವ್ಯಕ್ತಿ ಪ್ರತಿಷ್ಠೆ ಬೆಳೆಸಿ ಬಸವ ಪ್ರಜ್ಞೆಯನ್ನು ನಿರಂತರ ಹಾಳು ಮಾಡುವಲ್ಲಿ ಅಕ್ಕ ಅಣ್ಣ ಪೂರ್ಣ ಪ್ರಥಮರು .
 
ಈಗ ಮತ್ತೆ ೫೦ ಕೋಟಿ ಹಣದಲ್ಲಿ ಗುರುವಚನ ಪರುಷ  ಕಟ್ಟೆ ಯೋಜನೆ ಹಾಕಿ ಜನರಲ್ಲಿ ಹಣ ಕೀಳುತ್ತಿದ್ದಾರೆ.ಸರಕಾರೀ ಅನೇಕ ಇಂಜಿನೀಯರಗಳು ಗುತ್ತೆದಾರರು ಅಕ್ಕನ ಸಹಾಯಕ್ಕೆ ಕಳ್ಳವ್ಯವಹಾರಕ್ಕೆ ನಿಂತಿದ್ದಾರೆ.ಕೆಲ ಸಾಹಿತಿಗಳು ಅಕ್ಕನ ಗುರುವಚನ ಕುರಿತು ಬರೆದು ಅವಲ್ಲ್ನು ಹೊಗಳಿದ್ದಾರೆ.ಕಾರಣ ಅವರಿಗೆ ಪ್ರತಿ ತಿಂಗಳು ಹಣ ಸಿಗುತ್ತದೆ .ಇನ್ನೊಬ್ಬ ಶರಣ ಸಾಹಿತಿ ಅಕ್ಕನ ಕೃತಿ ಆಕ್ರಮಗಳನ್ನು ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಾರೆ    .
 
ಇಂತಹವರಿಗೆ ಅಖಿಲ ಭಾರತ  ಶರಣ ಸಾಹಿತ್ಯ ಪರಿಷತ್ ಮೈಸೂರು ಇವರು ಪ್ರತಿ ವರ್ಷ ಕೊಡಮಾಡುವ ರಮಣಶ್ರೀ  ಶರಣ ಪ್ರಶಸ್ತಿಯನ್ನು ನೀಡಿ ಪ್ರಶಸ್ತಿಗೆ ಅವಮಾನ ಮಾಡಿದ್ದಾರೆ.ಡಾ ಎಂ ಎಂ ಕಲಬುರ್ಗಿ ಅವರು ಅಕ್ಕನು  ಸಂಪಾದಿಸಿದ ಗುರುವಚನ ಒಂದು ಕೃತಿ ಚೌರ್ಯ ಮತ್ತು ಧರ್ಮ ಗ್ರಂಥವಲ್ಲ ಅಂತ ನೇರವಾಗಿ ಹೇಳಿದ್ದರು.
 
ಪ್ರಶಸ್ತಿಗಳು ಲಾಬಿ ಮಾಡುವವರಿಗೆ , ಬಸವ ದ್ವೇಷಿಗಳು ದ್ರೋಹಿಗಳಿಗೆ  ಕೊಡದೆ ತತ್ವನಿಷ್ಠರಿಗೆ ಕೊಟ್ಟರೆ ಅದಕ್ಕೊಂದು ಅರ್ಥ  ಬರುತ್ತದೆ. ಗೊರುಚೆ ಇಂತಹ ಪ್ರಮಾದಗಳನ್ನು ಮುಂದೆ ಆಗದಂತೆ ನೋಡಿ ಕೊಳ್ಳಲಿ -
***
ಡಾ ಶಶಿಕಾಂತ ಪಟ್ಟಣ   ಪೂನಾ
 
ಕವಿ ಮತ್ತು ವಿಚಾಋವಾದಿಯಾಗಿರುವ ಡಾ. ಶಶಿಕಾಂತ ಪಟ್ಟಣ ಅವರು ಸಧ್ಯಕ್ಕೆ ಪೂನಾ ವಾಸಿಯಾಗಿದ್ದಾರೆ 

Advertisement

0 comments:

Post a Comment

 
Top