PLEASE LOGIN TO KANNADANET.COM FOR REGULAR NEWS-UPDATES

ಕುಷ್ಟಗಿ -೫- ಆರ್ಯವೈಶ್ಯ ಸಮಾಜ ಬಾಂಧವರು ಸಂಘಟಿತರಾಗುವ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಬೇಕೆಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಧ್ಯಕ್ಷ ಡಿ.ಎಚ್. ಶಂಕರಮೂರ್ತಿ ಕರೆ ನೀಡಿದರು.
         ಅವರು ರವಿವಾರ ಗದಗನಲ್ಲಿ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಕರ್ನಾಟಕ    ಆರ್ಯವೈಶ್ಯ ಮಹಾಸಭಾ ಹಾಗೂ ಗದಗ ಆರ್ಯವೈಶ್ಯ ಸಮಾಜದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ೬ನೇ ಪ್ರತಿಭಾ ಪುರಸ್ಕಾರ, ರಜತ ಪದಕ ಪ್ರಶಸ್ತಿ ಪ್ರದಾನ  ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ವ್ಯಾಪಾರ ವಹಿವಾಟಿಗೆ ಹೆಸರಾಗಿರುವ ಆರ್ಯವೈಶ್ಯ ಸಮಾಜ ಬಾಂಧವರು ವ್ಯವಹಾರದಲ್ಲಿ ನೈಪುಣ್ಯತೆ ಪಡೆದವರು ಆರ್ಯವೈಶ್ಯ ಕುಲ ಬಾಂಧವರು ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ವೈಆಪಾರ, ಕೃಷಿ, ಶಿಕ್ಷಣ ಹಾಗೂ ರಾಜಕೀಯ ರಂಗದಲ್ಲೂ ಮುನ್ನಡೆದಿದ್ದಾರೆ. ಸಾಧಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದೂ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಇದರಿಂದ ಸದ್ವಿನಿಯೋಗ ಮಾಡೋಣ ಎಂದರು.
          ಈ ಸಂದರ್ಭದಲ್ಲಿ ಸಾಧಕ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ ಪಾಟೀಲ ಮಾತನಾಡುತ್ತ ಲಕ್ಷ್ಮೀಪುತ್ರರು ಸರಸ್ವತಿ ಪುತ್ರರಾಗುತ್ತಿರುವುದು ಸಂತೋಷ, ಪ್ರತಿಭೆ ಯಾರ ಸ್ವತ್ತೂ ಅಲ್ಲ ಸತತ ಪ್ರಯತ್ನದಿಂದ ಅಸಾಧ್ಯವಾದದ್ದನ್ನು ಸಾಧಿಸಬಹುದು ಎಂದರು.
        ವೇದಿಕೆಯಲ್ಲಿ ಸಿ.ಎ, ಯುಪಿಎಸ್‌ಸಿ, ಪಿಎಚ್.ಡಿ, ಎಂಬಿಬಿಎಸ್, ಕೆಪಿಎಸ್‌ಸಿ, ಪಿಜಿ, ಯುಜಿ, ಪಿಯುಸಿ, ಎಸ್‌ಎಸ್‌ಎಲ್‌ಸಿ, ವ್ಯಾಸಂಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿಯಲ್ಲಿ ಶೇ.೯೪.೦೪ ರಷ್ಟು ಸಾಧನೆ ಮಾಡಿದ ಕುಷ್ಟಗಿ ತಾಲೂಕಿನ ಗುಮಗೇರಿ ಗ್ರಾಮದ ನವೀನ್ ಶೆಟ್ಟರ್ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದರು ಹಾಗೂ ನೂತನವಾಗಿ ಆಯ್ಕೆಯಾದ ಗ್ರಾಪಂ ಸದಸ್ಯರು, ಬಿಬಿಎಂಪಿ ಸದಸ್ಯೆಯನ್ನು ಸನ್ಮಾನಿಸಲಾಯಿತು.
     ಮುಖ್ಯ ಅತಿಥಿಗಳಾಗಿ ಹಾವೇರಿ ಸಂಸದ ಶಿವಕುಮಾರ ಉದಾಸಿ, ಮಹಾ ಸಭಾ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಆರ್.ಸಿ.ಫತ್ತೇಪೂರ ಗದಗ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ವೀರಣ್ಣ ಹೇಮಾದ್ರಿ ಮುಂತಾದವರು ಉಪಸ್ಥಿತರಿದ್ದರು. ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
       ನಗರೇಶ್ವರ ದೇವಾಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಸಾಧಕರನ್ನು ಶೋಭಾ ಯಾತ್ರಯ ಮೂಲಕ ಆನೆ, ಒಂಟೆ, ಕುದುರೆ ಹಾಗೂ ಅಲಂಕೃತ ವಾಹನಗಳ ಮೇಲೆ ಕೂಡಿಸಿ ಮೆರವಣಿಗೆ ಮಾಡಲಾಯಿತು.
                                 

Advertisement

0 comments:

Post a Comment

 
Top