ಕೊಪ್ಪಳ, ಅ.೦೮ (ಕ
ವಾ) ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ
ಅಂಗವಾಗಿ ಅ.೧೩ ರಿಂದ ಅ.೨೨ ರವರೆಗೆ ಹುಲಿಗಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
ಜರುಗಲಿವೆ.
ಅ.೧೩ ರ ಸಂಜೆ ೬.೩೦ ಗಂಟೆಗೆ ಶ್ರೀ ಹುಲಿಗೆಮ್ಮದೇವಿ ದಸರಾ ಮಹೋತ್ಸವದ ಉದ್ಘಾಟನೆ ಸಮಾರಂಭ ಜರುಗಲಿದ್ದು, ದಸರಾ ಮಹೋತ್ಸವದ ಘಟಸ್ಥಾಪನೆಯನ್ನು ಸಂಸದ ಸಂಗಣ್ಣ ಕರಡಿ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು. ಶಾಸಕರುಗಳಾದ ಬಸವರಾಜ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಹಾಲಪ್ಪ ಆಚಾರ್, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ತಾ.ಪಂ. ಅಧ್ಯಕ್ಷೆ ಬಾನು ಚಂದುಸಾಬ್, ಹುಲಿಗಿ ಗ್ರಾ.ಪಂ ಅಧ್ಯಕ್ಷ ರೇಣುಕಾ ರಾಮಣ್ಣ, ಜಿ.ಪಂ.ಸದಸ್ಯ ಟಿ.ಜನಾರ್ಧನ ಹುಲಿಗಿ, ತಾ.ಪಂ. ಸದಸ್ಯೆ ಸುಶೀಲಮ್ಮ ವಡ್ಡರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ್, ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ತ್ಯಾಗರಾಜನ್, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅ.೧೩ ರಿಂದ ಅ.೨೨ ರವರೆಗೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಅ.೧೩ ರ ಸಂಜೆ ೬.೩೦ ಕ್ಕೆ ಘಟಸ್ಥಾಪನೆ ಹಾಗೂ ಲಕ್ಷ್ಮೇಶ್ವರದ ಕೃಷ್ಣ ಕ್ಷತ್ರೀಯ ಇವರಿಂದ ಮಂಗಲವಾದ್ಯ. ಅ.೧೪ ರಂದು ಬಾಗಲಕೋಟೆಯ ಅಮೃತ ನಾರಾಯಣ್‌ರಾವ್ ಕುಲಕರ್ಣಿ ಇವರಿಂದ ಜಾನಪದ ಹಾಗೂ ತತ್ವಪದಗಳು ಮತ್ತು ರಾತ್ರಿ ೮ ಗಂಟೆಗೆ ಹೊಸಪೇಟೆಯ ಅಂಜಲಿ ಭರತನಾಟ್ಯ ಸಂಘ ಇವರಿಂದ ಭರತನಾಟ್ಯ ಕಾರ್ಯಕ್ರಮ. ಅ.೧೫ ರಂದು ಸ್ಥಳೀಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು. ಅ.೧೬ ರಂದು ಗಂಗಾವತಿಯ ಮುದ್ದಾಬಳ್ಳಿ ತಂಡದ ಕು.ಸುರಯ್ಯ ಬೇಗಂ ರಿಂದ ಸಂಗೀತ ಕಾರ್ಯಕ್ರಮ. ಅ.೧೭ ರಂದು ಮೈಸೂರಿನ ಹರಿಕಥಾ ವಿದೂಷಿ ವಿ.ಮಾಲಿನಿ ಅವರಿಂದ ಹರಿಕಥಾ ಕಾಲಕ್ಷೇಪ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಶಾರ್ದೂಲವಾಹನ ಪೂಜೆ(ಲಲಿತಾಪಂಚಮಿ). ಅ.೧೮ ರಂದು ಮಾನ್ವಿಯ ಸಂಪ್ರತಿ ಮೋಹನ್ ಮತ್ತು ಸಂಗಡಿಗರಿಂದ ದಾಸವಾಣಿ ಕಾರ್ಯಕ್ರಮ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಸಿಂಹವಾಹನ ಪೂಜೆ. ಸೆ.೧೯ ರಂದು ಯಲ್ಲಾಪುರದ ಸುದರ್ಶನ ಯಕ್ಷಗಾನ ಕಲಾಬಳಗದ ವೆಂಕಟರಮಣಭಟ್ ಗುಡ್ಡೆ ಅವರಿಂದ ಯಕ್ಷಗಾನ ಪ್ರದರ್ಶನ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಮಯೂರವಾಹನ ಪೂಜೆ. ಅ.೨೦ ರಂದು ಬೆಂಗಳೂರಿನ ಶಂಕರ್ ಶ್ಯಾನುಭಾಗ್ ಇವರಿಂದ ಭಕ್ತಿ, ವಚನ ಸಂಗೀತ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಅಶ್ವವಾಹನ ಪೂಜೆ. ಅ.೨೧ ರಂದು ಹುಲಿಗಿಯ ಅಭಿನಯ ಸಾಂಸ್ಕೃತಿಕ ಕಲಾ ಸಂಘ ಇವರಿಂದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನ ಹಾಗೂ ಬೆಳ್ಳಿ ಮಂಟಪದಲ್ಲಿ ಶ್ರೀದೇವಿಯವರಿಗೆ ಗಜವಾಹನ ಪೂಜೆ. ಅ.೨೨ ರ ಮಧ್ಯಾಹ್ನ ೩ ರಿಂದ ಶ್ರೀದೇವಿಯವರ ದಶಮಿ ದಿಂಡಿನ ಉತ್ಸವದೊಂದಿಗೆ ಶಮಿ ವೃಕ್ಷಕ್ಕೆ ತೆರಳಿ ಶಮಿ ಪೂಜೆ, ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಂತ್ರ ಪುಷ್ಪದೊಂದಿಗೆ ಕಾರ್ಯಕ್ರಮಗಳು ಮುಕ್ತಾಯವಾಗಲಿವೆ.
ದಸರಾ ಮಹೋತ್ಸವದ ಅಂಗವಾಗಿ ಪ್ರತಿ ನಿತ್ಯ ಬೆಳಗಿನ ಜಾವ ಶ್ರೀ ಹುಲಿಗೆಮ್ಮ ದೇವಿಯವರ ಸನ್ನಿಧಿಯಲ್ಲಿ ಸುಪ್ರಭಾತ, ಪೂಜೆ, ಮಹಾನೈವೇದ್ಯಗಳು ಜರುಗಲಿವೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಗಭೂಷಣಂ ಹೊಸಪೇಟೆ ಇವರಿಂದ ಶ್ರೀ ಚಿದಾನಂದಾವಧೂತ ವಿರಚಿತ ಶ್ರೀದೇವಿ ಪುರಾಣ ಪಠಣ ಕಾರ್ಯಕ್ರಮ ಜರುಗಲಿದ್ದು, ಶ್ರೀ ಹುಲಿಗೆಮ್ಮ ದೇವಿ ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿರುವ ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ವ ಭಕ್ತಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶ್ರೀ ಹುಲಿಗೆಮ್ಮದೇವಿ ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ ಮನವಿ ಮಾಡಿದ್ದಾರೆ.

0 comments:
Post a Comment