PLEASE LOGIN TO KANNADANET.COM FOR REGULAR NEWS-UPDATES

ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯ, ಕೊಪ್ಪಳದಲ್ಲಿ ಕಲಾ ಒಕ್ಕೂಟ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಕುರಿತು ವಿದ್ಯಾರ್ಥಿ ಉಪನ್ಯಾಸ ಮಾಲೆ ಏರ್ಪಡಿಸಲಾಗಿತ್ತು. ವಿದ್ಯಾರ್ಥಿ ಉಪನ್ಯಾಸ ಮಾಲೆ ಉದ್ಘಾಟಿಸಿ ಮಾತನಾಡಿದ ಶ್ರೀ ಗವಿಸಿದ್ಧೇಶ್ವರ ಅರ್ಬನ್ ಕೋಆಪರೇಟಿವ್, ಕೊಪ್ಪಳದ ವ್ಯವಸ್ಥಾಪಕರಾದ ಶ್ರೀ ಎಸ್.ಎಲ್.ಹಿರೇಗೌಡ್ರರವರು ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ. ಜಾಗತೀಕರಣದಂತಹ ಸ್ಪರ್ಧಾಜಗತ್ತಿನಲ್ಲಿ ಸಹಕಾರಿ ಬ್ಯಾಂಕುಗಳು ವಾಣಿಜ್ಯ ಬ್ಯಾಂಕಗಳೊಂದಿಗೆ ಸ್ಪರ್ಧೆಗಿಳಿದು ರಾಷ್ಟ್ರದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
    ಸಮಾರಂಭದ ಅಧ್ಯಕ್ಷತೆವಹಿಸಿ ಪ್ರಾಚಾರ್ಯರಾದ ಪ್ರೊ|| ಎಂ.ಎಸ್.ದಾದ್ಮಿಯವರು ಮಾತನಾಡುತ್ತ ಬ್ಯಾಂಕುಗಳು ನಾಗರಿಕ ಜೀವನದ ಅವಿಭಾಜ್ಯ ಅಂಗವಾಗಿವೆ. ಬ್ಯಾಂಕುಗಳಿಲ್ಲದೇ ನಾಗರಿ
    ಉಪನ್ಯಾಸ ಮಾಲೆಯ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಕಲಾ ಒಕ್ಕೂಟದ ಸಂಯೋಜಕರಾದ ಶ್ರೀ ಶರಣಬಸಪ್ಪರವರು ವಿದ್ಯಾರ್ಥಿಗಳಿಗೆ ನಮ್ಮ ವ್ಯವಸ್ಥೆಯಲ್ಲಿನ ವಿವಿಧ ಸಂಘ ಸಂಸ್ಥೆಗಳ ಬಗ್ಗೆ ಪರಿಚಯವಾದರೆ ಮಾತ್ರ ಭವಿಷ್ಯದಲ್ಲಿ ಅಂತಹ ಸಂಘ ಸಂಸ್ಥೆಗಳಿಂದ ಪ್ರಯೋಜನ ಪಡೆಯಲು ಉಪಯುಕ್ತವಾಗುತ್ತದೆ ಎನ್ನುವ ಉದ್ದೇಶದಿಂದ ಅರ್ಥಶಾಸ್ತ್ರ ವಿಭಾಗ ಹಣಕಾಸಿನ ಸಂಸ್ಥೆಗಳ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ವಿದ್ಯಾರ್ಥಿ ಉಪನ್ಯಾಸಮಾಲೆಯಲ್ಲಿ ವಿದ್ಯಾರ್ಥಿನಿಯರಾದ ಸ್ಮಿತಾ, ಪ್ರಿಯಾಂಕ ಹಾಗೂ ವಿದ್ಯಾರ್ಥಿಗಳಾದ ಮಲ್ಲಪ್ಪ, ಶರಣಪ್ಪ ಮತ್ತು ವಿವಿಧ ಬ್ಯಾಂಕುಗಳ ಕುರಿತಾಗಿ ಪರಿಚಯ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಭೀಮಪ್ಪ ನಿರ್ವಹಿಸಿದರು. 
    ವೇದಿಕೆಯ ಮೇಲೆ ಅರ್ಥಶಾಸ್ತ್ರ ವಿಭಾಗದ ಎಂ.ಎಸ್. ಬಚಲಾಪೂರ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಜೆ.ಎಸ್.ಪಾಟೀಲ, ಇತಿಹಾಸ ವಿಭಾಗದ ಶ್ರೀ ಶರಣಪ್ಪ ಉಮಚಗಿ ಉಪಸ್ಥಿತರಿದ್ದರು.                                                            
ಕ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳ ಬ್ಯಾಂಕಿನಿಂದ ಉಪಯೋಗಗಳನ್ನು ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಬಹುದೆಂದರು.   

Advertisement

0 comments:

Post a Comment

 
Top