PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಅ.೦೫ (ಕ ವಾ) ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯ ಇವರ ವತಿಯಿಂದ ನಗರ ನಿವೇಶನ ಯೋಜನೆಯಡಿ ನಿವೇಶನ ರಹಿತ ಅರ್ಹ ಕುಟುಂಬಗಳಿಗೆ ನಿವೇಶನ ಒದಗಿಸಲು ಖಾಸಗಿ ಜಮೀನು ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಪ್ರಸಕ್ತ ಸಾಲಿನ ವಾಜಪೇಯಿ ನಗರ ನಿವೇಶನ ಯೋಜನೆಯಡಿ ವಸತಿ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ನಿವೇಶನ ಹೊಂದಿರುವುದು ಕಡ್ಡಾಯವಾಗಿರುತ್ತದೆ. ನಿವೇಶನ ಲಭ್ಯವಿಲ್ಲದ ಹಲವಾರು ಅತೀ ಕಡು ಬಡವ ಅರ್ಹ ಕುಟುಂಬಗಳು ಇದರಿಂದಾಗಿ ವಸತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಂತಹ ಕುಟುಂಬಗಳಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ವತಿಯಿಂದ ನಗರ ನಿವೇಶನ ಯೋಜನೆಯಡಿ ನಿವೇಶನ ರಹಿತ ಅರ್ಹ ಕುಟುಂಬಗಳಿಗೆ ನಿವೇಶನ ಒದಗಿಸಲು ಉದ್ದೇಶಿಸಲಾಗಿದೆ. ಪಟ್ಟಣದ ೨ ಕಿಲೋಮೀಟರ್ ಸುತ್ತಮುತ್ತಲಿನಲ್ಲಿ ಜಮೀನು ಹೊಂದಿರುವ ಆಸಕ್ತ ಖಾಸಗಿ ಜಮೀನು ಮಾಲೀಕರು ಚಾಲ್ತಿ ವರ್ಷದ ಪಾಣಿ, ಮ್ಯುಟೇಷನ್ ಪ್ರತಿ, ೩೦ ವರ್ಷದ ಇ.ಸಿ ಮತ್ತು ಟೋಂಚ ನಕಾಶೆ ಇತ್ಯಾದಿ ದಾಖಲೆಗಳೊಂದಿಗೆ ಅ.೩೦ ರೊಳಗಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯ, ಯಲಬುರ್ಗಾ ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಯಲಬುರ್ಗಾ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

0 comments:

Post a Comment

 
Top