PLEASE LOGIN TO KANNADANET.COM FOR REGULAR NEWS-UPDATES

ಅಕ್ಟೋಬರ್ ಎರಡು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಚಾರಿತ್ರಾರ್ಹವಾದ ಸುದಿನ. ಎಂದೇ ಭಾರತದ ಬಂಧನ ಬಿಡಿಸಲು ಅರ್ಹನಿಸಿ ದುಡಿದು ಪಿತಾಮಹರೇನಿಸಿದ ಮಹಾತ್ಮ ಗಾಂಧೀಜಿಯವರು ಮತ್ತು ಜವಾಹರಲಾಲ್ ನೆಹರೂ ನಂತರ ಯಾರು? ಎಂಬ ದೊಡ್ಡ ಪ್ರಶ್ನೆಗೆ ಸರಿ ಉತ್ತರವಾಗಿ ಬಂದು ದಕ್ಷತೆ ಹಾಗೂ ಸಜ್ಜನಿಕೆಗೆ ಹೆಸರಾದ ಭಾರತದ ದ್ವೀತಿಯ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಸರಳತೆಯ ಸಕಾರ ಮೂರ್ತಿ, ನಿಷ್ಟಾವಂತ ಜನನಾಯಕ ಲಾಲ್‌ಬಹುದ್ದೂರ್ ಶಾಸ್ತ್ರೀಯವರು ಜನಿಸಿದರು. ಅಂತೆಯೇ ಅಕ್ಟೋಬರ್ ೨ ರಂದು ಬಾಪೂಜಿಯವರ ಜಯಂತಿಯನ್ನೂ ಆಚರಿಸುವಂತೆ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಆಚರಿಸುತ್ತೇವೆ.  ಲಾಲ್‌ಬಹುದ್ದೂರ್ ೧೯೦೪ ನೇ ಇಸ್ವೀ ಅಕ್ಟೋಬರ್ ೨ ರಂದು ಉತ್ತರ ಪ್ರದೇಶ ಮೊಗಲ್ ಸರಾಯಿ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಬಡ ಉಪಾಧ್ಯಾಯರಾಗಿದ್ದು ನಂತರ ರೈಲ್ವೆಯಲ್ಲಿ ಗುಮಸ್ತರಾಗಿ ಸರಳ ಜೀವನ ನಡೆಸುತ್ತಿದ್ದ ಶಾರದಾ ಪ್ರಸಾದ. ತಾಯಿ ಶೀಲವಂತೆಯೂ, ಸುಗುಣವತಿಯೂ ಆದ ರಾಮದುಲಾರಿ ದೇವಿ. ಅವರದು ತುಂಬ ಸುಸಂಸ್ಕೃತ ಕುಟುಂಬ. ಸರಳತೆ, ಸಜ್ಜನಿಕೆ, ಹೃದಯ ಶ್ರೀಮಂತಿಕೆಗೆ ಬಹಳ ಹೆಸರು ವಾಸಿಯಾಗಿತ್ತು. ಒಮ್ಮೆ ಒಂದು ಅಪೂರ್ವ ಘಟನೆ ನಡೆಯಿತು. ಮಗು ಲಾಲ್‌ಬಹದ್ದೂರನನ್ನು ತಾಯಿ ಕಂಕುಳಲ್ಲಿ ಎತ್ತಿಕೊಂಡು ಪ್ರಯಾಗದ ತ್ರೀವೇಣಿ ಸಂಗಮದಲ್ಲಿ ಮಿಯಲು ಹೋಗಿದ್ದರು. ಅಂದು ಅತಿಯಾದ ಜನಸಂದಣಿ ಇತ್ತು. ಕಂಕುಳದಲ್ಲಿ ಮಗು ಹೇಗೂ ಜಾರಿ ಬಿದ್ದು ಎಷ್ಟು ಹುಡುಕಿದರು ಸಿಕ್ಕಲಿಲ್ಲ. ಪೊಲೀಸರಿಗೆ ದೂರು ಕೋಡಲಾಯಿತು. ಕಂಕುಳಿನಿಂದ ಜಾರಿದ ಮಗು ಆಕಸ್ಮಾತ ಒಬ್ಬ ಬೇಸ್ತರವನ ಮಂಕರಿಯಂತಹ ಬುಟ್ಟಿಗೆ ಬಿದ್ದಿತ್ತು. ಮಕ್ಕಳಿಲ್ಲ ಆ ಬೇಸ್ತರವನ್ನು ಆ ಗಂಗಾಮಾತೆಯೇ ತನಗೆ ಆ ಮಗುವನ್ನು ಕರುಣಿಸಿದ್ದಾಳೆಂದು ಬಗೆದು ತಾನೇ ಸಾಕಿ ಸಲಹೋಣವೆಂದು ತಿರ್ಮಾನಿಸಿ ಮನೆಗೆ ಹೋಯ್ದು ಹಾಲುಣಿಸುತ್ತಿದ್ದ. ಮಗುವನ್ನು ಹುಡುಕುವದರಲ್ಲಿ ತೋಡಗಿದ್ದ ಪೊಲೀಸರು ಬಂದು ವಿಚಾರಿಸಲಾಗಿ ಬೇಸ್ತರವನ್ನು ಸ್ವಾಮಿ ಗಂಗಾಮಾತೆಯೇ ಕರುಣೆ ಇಟ್ಟು ಮಕ್ಕಳಿಲ್ಲದ ನಮಗೆ ಈ ಪವಿತ್ರ ದಿನದಂದು ಗಂಡು ಮಗುವನ್ನು ದಯಪಾಲಿಸಿದ್ದಾಳೆ. ನಮ್ಮ ಕಾಡದಿರಿ ಎಂದು ಅಲುಬಿದನು. ಈ ವಿಷಯವನ್ನು ಪೊಲೀಸರು ರಾಮುದಲಾರಿಗೆ ತಿಳಿಸಲಾಗಿ ಆಕೆಯು ಬೇಸ್ತರ ಮನೆಗೆ ದಾವಿಸಿ ಮಗನನ್ನು ಕಂಡು ಹರ್ಷಪಟ್ಟು ಮಗು ತಮ್ಮ ಅಚಾತುರ್ಯದಿಂದ ಕಂಕುಳಿನಿಂದ ಬಿದ್ದಿದ್ದನ್ನು ತಿಳಿಸಿ ಹಿಂತಿರುಗಿಸುವಂತೆ ಕೋರಲಾಗಿ ಅನ್ಯಮಾರ್ಗ ಕಾಣದ ಬೇಸ್ತರವನು ಮಗುವನ್ನು ತಾಯಿಗೆ ಒಪ್ಪಿಸಿದ. ಒಂದು ವೇಳೆ ಆ ಬಾಲಕ ಲಾಲ್‌ಬಹದ್ದೂರ್ ಆ ಬೇಸ್ತರ ಮನೆಯಲ್ಲಿಯೇ ಬೆಳೆದು ದೊಡ್ಡವನಾಗಿ ಇರುವುದಾಗಿದ್ದರೆ ಬಹಳ ಮಟ್ಟಿಗೆ ಆತ ಪ್ರಧಾನಿ ಆಗುತ್ತಿರಲಿಲ್ಲವೇನೊ!  ಲಾಲ್ ಬಹದ್ದೂರ್ ರವರಿಗೆ ಇನ್ನೂ ೨ ವರ್ಷಗಳೂ ಆಗದಿದ್ದಾಗಲೇ ಅವರ ತಂದೆ ಮರಣ ಹೊಂದಲಾಗಿ ತಾಯಿ ತನ್ನ ಎರಡು ಹೆಣ್ಣು  ಹಾಗೂ ಒಂದು ಗಂಡು ಮಗುವಿನೊಂದಿಗೆ ತವರು ಮನೆಯಾದ ತಂದೆ ಹಜಾರಿಲಾಲರ ಮನೆ ಸೇರಿದರು. ಅಜ್ಜ ಮೊಮ್ಮಗನನ್ನು ಚಿಟುಕಾಣಿ (ನನ್ನಿ) ಎಂದು ಅಕ್ಕರೆಯಿಂದ ಕರೆಯುತ್ತಾ ಸಾಕಿ ಸಲಹಿ ಪ್ರಾಥಮಿಕ ಶಿಕ್ಷಣ ಕೊಡಿಸಿದರು.
ನಾನ್ಹಿ ಚಿಕ್ಕ ಹುಡುಗನಾಗಿದಾಗ್ದ ಒಮ್ಮೆ ತುಂಟ ಹುಡುಗರ ಸಹವಾಸದಿಂದ ಅವರೊಡನೆ ಒಂದು ತೋಟಕ್ಕೆ ನುಗ್ಗಿ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದರು. ತೋಟದ ಮಾಲಿಕ ಬಂದಾಗ ಹೆಚ್ಚು ಹಣ್ಣು ಕಿತ್ತುದವರೇಲ್ಲಾ ಹೋಡಿ ಹೋಗಿ ಮುಗ್ದ ಬಾಲಕ ನಾನ್ಹಿ ಸಿಕ್ಕಿಕೊಂಡ. ಮಾಲೀಕ ಓಡೆಯಲಾರಂಬಿಸಿದಾಗ ನಾನು ತಂದೆ ಇಲ್ಲದ ಮಗ, ನನಗೆ ಹೋಡೆಬೇಡ ಅಂಗಲಾಚುತ್ತಾ ಬಿಕ್ಕಿಬಿಕ್ಕಿ ಅಳಲಾರಂಭಿಸಿದ. ಮಾಲೀಕನ ಮನ ಕರಗಿ ತಂದೆ ಇಲ್ಲದ ಮಗನಾದ ಮೇಲೆ ನೀನೇಕೆ ಸನ್‌ಮಾರ್ಗದಲ್ಲಿ ನಡೆಯಬಾರದು? ಎಂದು ಬುದ್ದಿಹೇಳಿ ಕಳುಹಿಸಿದನು. ಮಾಲೀಕನ ಮಾತುಗಳು ಬಾಲಕನ ಮನಸ್ಸಿನ ಮೇಲೆ ಪ್ರಭಲವಾಗಿ ಅಚ್ಚೊತ್ತಿದಂತಾದವು. ಅಂದಿನಿಂದ ಜೀವನದಲ್ಲಿ ಎಚ್ಚರಿಕೆಯಿಂದಿರಲು, ಉತ್ತಮ ವ್ಯಕ್ತಿವನ್ನು ಸಂಪಾದಿಸಲು ಸತತವಾಗಿ ಶ್ರಮಿಸಿದನು. ತನು ಒಬ್ಬ ದೊಡ್ಡ ವ್ಯಕ್ತಿಯಾಗಲು ದೃಢ ಸಂಕಲ್ಪಮಾಡಿ ಕಾರ್ಯೋನ್ಮಖನಾದನು.  ಲಾಲ್ ಬಹುದ್ದೂರ್‌ರವರಲ್ಲಿ ಧರ್ಯ ಮತ್ತು ಆತ್ಮಾಭಿಮಾನಗಳು ಚಿಕ್ಕಂದಿನಿಂದಲೇ ಬೆಳೆದು ಬಂದಿದ್ದವು. ಒಮ್ಮೆ ಅವನು ಗಂಗಾನದಿ ಆಚೆ ದಡದಲ್ಲಿ ನಡೆಯುತ್ತಿದ್ದ ಜಾತ್ರೆಗೆ ಸಹಪಾಟಿಗಳೊಂದಿಗೆ ಹೋದರು. ಆದರೆ ಬರುವಾಗ ಓರಗೆಯವರ ಕಣ್ಣು ತಪ್ಪಿಸಿ ಒಂದು ಮೈಲುಗು ಹೆಚ್ಚು ಅಗಲವಾದ, ಅಲೆಗಳಿಂದ ಅಬ್ಬರಿಸುತ್ತಿದ್ದ ಗಂಗಾನದಿಯನ್ನು ಧೈರ್ಯದಿಂದ ಈಜಿ ಬಂದಿದ್ದರು. ಏಕೆಂದರೆ ಅವರ ಬಳಿ ಹಣ ಇರಲಿಲ್ಲ. ಗೆಳೆಯರನ್ನು ಕೆಳಲು ಮನಸ್ಸು ಒಪ್ಪಲಿಲ್ಲ. ಇನ್ನೊಮ್ಮೆ ನದಿಯಲ್ಲಿ ಮುಳುಗಿ ಪ್ರಾಣ ಬಿಡಲಿದ್ದ ಉಪಾಧ್ಯಾಯರ ಮಗನನ್ನು ಹೆಗಲ ಮೇಲೆ ಕುಳಿರಿಸಿಕೊಂಡು ಇಜಿ ದಡ ಸೇರಿ ಅಪಮೃತ್ಯುವಿನಿಂದ ಪಾರು ಮಾಡಿದ್ದರು ಲಾಲ್ ಬಹದ್ದೂರ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಅವರ ಊರಿಗೂ ಶಾಲೆಗೂ ನಡುವೆಯಿದ್ದ ಗಂಗಾನದಿಯನ್ನು ದಿನವು ಈಜಿಯೇ ಅಧ್ಯಯನ ಮಾಡುತ್ತಿದ್ದರು. ಏಕೆಂದರೆ ಬಡತನದಿಂದಾಗಿ ಅವರ ಬಳಿ ದಿನವು ದೊಣಿಯವನಿಗೆ ಕೊಡಲು ಹಣವಿರಲಿಲ್ಲ. ಲಾಲ್‌ಬಹದ್ದೂರ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ೧೯೨೧ ರ ಅಸಹಕಾರ ಆಂದೋಲನದಲ್ಲಿ ಭಾಗವಹಿಸಿ ಪೊಲೀಸರಿಂದ ಬಂಧಿಸಲ್ಪಟ್ಟರು. ಅವರು ೪ ವರ್ಷ ಕಾಲ ಕಾಶಿ ವಿದ್ಯಾಪೀಠದಲ್ಲಿ ವಿದ್ಯಾರ್ಥಿಯಾಗಿದ್ದು ಶಾಸ್ತ್ರೀ ಪದವಿ ಪಡೆದು, ಅದು ಹೆಸರಿಗೆ ಹೊಂದಿಕೊಂಡು ಲಾಲ್‌ಬಹದ್ದೂರ್ ಶಾಸ್ತ್ರೀ ಎನಿಸಿದರು.  ಲಾಲ್‌ಬಹದ್ದೂರು ೧೯೨೭ ರಲ್ಲಿ ಲಲಿತಾದೇವಿಯವರೊಡನೆ ವಿವಾಹವಾದರೂ. ಅವರು ಆ ಕಾಲಕ್ಕೆ ಒಂದು ಚರಖಾ ಹಾಗೂ ಸ್ವಲ್ಪ ನೂಲನ್ನು ಮಾತ್ರ ವರದಕ್ಷಿಣೆಯಾಗಿ ಪಡೆದಿದ್ದರಂತೆ! ವಿವಾಹದ ನಂತರ ಸಂಸಾರೀಕ ಜೀವನಕ್ಕಿಂತಲೂ ಹೆಚ್ಚಾಗಿ ದೇಶ ಸೇವೆಯ ಬಗ್ಗೆ ಯೋಚಿಸುತ್ತಾ ಗೋಪಾಲಕೃಷ್ಣ ಗೋಕಲೆ ಸ್ಥಾಪಿಸಿದ್ದ `ಸರ್ವೆಂಟ್ಸ್ ಆಫ್ ಇಂಡಿಯನ್ ಸೊಸೈಟಿ' ಗೆ ಸೇರಿದರು. ಲಾಲ್‌ಬಹದ್ದೂರ್ ಸ್ವಾತಂತ್ರ ಸಂಗಾಮದಲ್ಲಿ ಸಕ್ರೀಯವಾಗಿ ದಂಡಿ ಉಪ್ಪಿನ ಸತ್ಯಾಗ್ರಹವು ಸೇರಿದಂತೆ ಏಳು ಸಾರಿ ಬಂದಿತರಾಗಿ ಒಂಬತ್ತು ವರ್ಷಗಳ ಅವಧಿ ಸೇರೆಮನೆವಾಸ ಅನುಭವಿಸಿದರು. ಜೈಲಿನಲ್ಲಿಯೂ ಶಿಸ್ತಿನ ಜೀವನ ನಡೆಸಿದರು. ಸೇರೆಯಾಳು ಆಗಿರುವಾಗಲೇ ಮನೆಯಲ್ಲಿ ಮಗಳು ತಿರಿಕೊಂಡಳು. ಮಗ ವಿಷಮಶೀತ ಜ್ವರದಿಂದ ಬಳಲುತ್ತಿದ್ದ ಆದರೆ ಶಾಸ್ತ್ರೀ ಅಚಲರಾಗಿಯೇ ಇದ್ದರು. ಸೇರೆಯಲ್ಲಿಯೂ ಲಾಲ್‌ಬಹದ್ದೂರ್ ಗ್ರಂಥಗಳನ್ನು ಒದುವದರಲ್ಲಿಯೇ ಕಾಲ ಕಳೆಯುತ್ತಿದ್ದರು.  ಲಾಲ್ ಬಹದ್ದೂರ್ ೧೯೩೬ ರಲ್ಲಿ ಉತ್ತರ ಪ್ರದೇಶದ ಶಾಸನಸಭಾ ಸದಸ್ಯರಾಗಿ ಚುನಾಯಿತರಾದರು. ಉತ್ತರ ಪ್ರದೇಶದ ಗೃಹಖಾತೆಯ ಸೇವೆ ಸಲ್ಲಿಸಿದರು. ಲಾಲ್ ಬಹದ್ದೂರವರು ಲೋಕಸಭೆಗೆ ಉಮೇದುವಾರರಾಗಿದ್ದರು. ಅವರ ದಕ್ಷತೆ ಹಾಗೂ ಪ್ರಾಮಾಣಿಕತೆಯ ಬಗ್ಗೆ ಪೂರ್ಣ ವಿಶ್ವಾಸ ಹೊಂದಿದ್ದ ನೆಹರು ರಾಜ್ಯಸಭೆಗೆ ಚುನಾಯಿತರಾಗುವಂತೆ ಮಾಡಿ ರೈಲು ಮತ್ತು ಸಾರಿಗೆ ಸಚಿವರನ್ನಾಗಿ ಮಾಡಿದರು. ಮೆಹಬೂಬ ನಗರದ ರೈಲು ದುರಂತದಲ್ಲಿ ೧೧೨ ಜನ ಪ್ರಯಾಣಿಕರು ಮೃತರಾದಾಗ ತಮಿಳುನಾಡಿನ ಆರಯಲೂರ್ ಬಳಿ ರೈಲು ಅಪಘಾತವಾಗಿ ಅಪಾರ ಸಾವುನೋವು ಸಂಭವಿಸಿದಾಗ ಆರೈಲು ದುರಂತಗಳಿಗೆ ತಾನೇ ನೈತಿಕ ಹೊಣೆ ಎಂದು ಸಾರಿ ರಾಜೀನಾಮೆ ಇತ್ತರು. ವಾಣಿಜ್ಯ ಸಚಿವರಾಗಿ, ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ತಮ್ಮ ಅಧಿಕಾರವಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಕೋಡಲಿಲ್ಲ ಇಂತಹ ಮಹಾನ್ ವ್ಯಕ್ತಿ ೧೯೬೪ ರ ಜನೆವರಿ ೨೭ ರಂದು ನೆಹರು ನಿಧನರಾದಾಗ ಭಾರತ ಪ್ರಧಾನಿಯಾಗಿ ಸರ್ವಾನುಮತದಿಂದ ನೇಮಕಗೊಂಡರು. ಪ್ರಧಾನಿಯಾಗಿದ್ದಾಗಲೂ ಶಾಸ್ತ್ರೀಜಿ ಬಹಳ ಸರಳ ಜೀವನ ನಡೆಸುತ್ತಿದ್ದರು. ಸರಳತೆ ನಮ್ಮ ದೇಶದ ಉಚ್ಛ ಸಂಸ್ಕೃತಿಯ ಸಂಕೇತ ಕೋಟಿ ಕೋಟಿ ಭಾರತೀಯರಿಗೆ ಉಡಲು ಉತ್ತಮವಾದ ಉಡುಪಿಲ್ಲ ಪ್ರಧಾನಿಯಾದವರು ಅವರ ಪ್ರತಿನಿಧಿಯಂತಿರಬೇಕು ಎನ್ನುತ್ತಿದ್ದರು. ಮಕ್ಕಳನ್ನು ಶಾಲೆಗೆ ಟಾಂಗಾದಲ್ಲಿ ಕಳಿಸುತ್ತಿದ್ದರು. ಹಿಡಿ ಮುರಿದ ಶೇವಿಂಗ್ ಬ್ರೇಶ್‌ನ್ನೇ ಬಳಸುತ್ತಿದ್ದರು. ತಮ್ಮ ನಿವಾಸಕ್ಕೆ ಹವಾನಿಯಂತ್ರ ವ್ಯವಸ್ಥೆಗೆ ಒಪ್ಪಲಿಲ್ಲ. ಮಕ್ಕಳಿಗಾಗಿ ಆಸ್ತಿಪಾಸ್ತಿ ಮಾಡಲಿಲ್ಲ. ಅರ್ಹತೆಗೆ ಮೀರಿದ ಹುದ್ದೆಗೆ ಮಕ್ಕಳನ್ನು ಕಳುಹಿಸಲಿಲ್ಲ. ಆರು ಮಕ್ಕಳ ತಂದೆಯಾಗಿದ್ದ ಅವರು ಕುಟುಂಬ ಯೋಜನೆಯ ಬಗ್ಗೆ ಮಾತನಾಡಲು ನಿರಾಕರಿಸಿ ತನಗೆ ಆ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಪಾರ್ಲಿಮೆಂಟನಲ್ಲಿ ತಿಳಿಸಿದರು.
ಲಾಲ್ ಬಹದ್ದೂರ್ ಪ್ರಧಾನಿಯಾಗಿದ್ದಾಗ ವಿಶ್ವ ರಾಷ್ಟ್ರಗಳನ್ನು ಒಲಿಸಿಕೊಳ್ಳಲು ಪ್ರಯತ್ನಿಸಿದರು. ಭಾಷೆ, ಗಡಿ, ಆಹಾರ ಮೊದಲಾದ ಸಮಸ್ಯೆಗಳನ್ನೇದುರಿಸಿದರು. ಜೈಜವಾನ್, ಜೈಕಿಸಾನ್ ಎಂದು ಘೋಷಿಸಿ ಆ ಎರಡು ಕ್ಷೇತ್ರಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡಿದರು. ೧೯೬೫ ರ ಅಗಷ್ಟನಲ್ಲಿ ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಿತು. ಭಾರತ ದಿಟ್ಟ ಹೆಜ್ಜೆ ಹಿಟ್ಟು ಸತತವಾಗಿ ಹೋರಾಡಿತು. ಸೆ.೧೬ ರಲ್ಲಿ ಚೀನವು ತನ್ನ ಮೀತ್ರ ರಾಷ್ಟ್ರ ಪಾಕಿಸ್ತಾನದ ಪರ ಭಾರತದ ಮೇಲೆ ಯುದ್ಧ ಊಡುವ ಒಂದು ವಾರದ ಅವಧಿಯ ಹೆಚ್ಚರಿಕೆ ನೋಟಿಸು ಜಾರಿ ಮಾಡಿತು. ವಿಶ್ವ ಸ
ಮರದ ಭೀತಿ ಎಲ್ಲಡೆಯೂ ಅವರಿಸಿತು. ಸೋವಿಯತ್ ರಷ್ಯಾದ ಪ್ರಧಾನಿ ಕೋಸಿಗಿನ್ನರ ಆಹ್ವಾನದ ಮೇರೆಗೆ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಸರ್ವಾಧಿಕಾರಿ ಸೇನಾಧಿಪತಿ ಆಯುಬ್‌ಖಾನ್ ತಾಷ್ಕೇಂಟ್‌ನಲ್ಲಿ ಸಭೆ ಸೇರಿ ಮಾತುಕತೆ ನಡೆಸಿ ಶಾಂತಿ ಒಪ್ಪಂದಕ್ಕೆ ಸಹಿ ಮಾಡಿದರು. ಆದರೆ ಅಂದಿನ ರಾತ್ರಿ ಅಂದರೆ ೧೯೬೬ ರ ಜನೆವರಿ ೧೦ ರಂದು ಶಾಸ್ತ್ರೀಜಿ ಹೃದಯಾಘಾತದಿಂದ ಸ್ವರ್ಗಸ್ಥರಾದರು. ಬಡತನದಲ್ಲಿಯೇ ಹುಟ್ಟಿ, ಬೆಳೆದು ಸ್ವಯಂ ಪ್ರತಿಭೆಯಿಂದ ಸತತ ಸಾಧನೆಯಿಂದ ವಿವಿಧ ಹಂತಗಳ ಮೂಲಕ ಪ್ರಧಾನಿ ಪಟ್ಟವೇರಿ ಭಾರತೀಯರ ಅಚ್ಚುಮೆಚ್ಚಿನ ಪ್ರಧಾನಿಯಾಗಿ ಸೇವೆಸಲ್ಲಿಸಿ ಅಲ್ಪವಧಿಯಲ್ಲಿಯೇ ಅತಿಯಾದ ದಕ್ಷತೆ ಹಾಗೂ ಕಾರ್ಯತತ್ಪರತೆ ತೋರಿ ಅಮರರಾದ ಶಾಸ್ತ್ರೀಜಿ ಇಂದಿಗೂ ಬಡವರೇ ಬಹುಸಂಖ್ಯೆಯಲ್ಲಿರುವ ಭಾರತೀಯರಿಗೆ ಆದರ್ಶರಲ್ಲವೇ? ಬಡತನದ ಬಗ್ಗೆ ಬಹಳವಾಗಿ ಹೇಳುತ್ತಾ ತಮ್ಮ ವತಿಯ ಪ್ರಯತ್ನ ಮಾಡದೇ ಇರುವುದರ ಬದಲು ಬಡವ ಎಂಬ ಕೀಳಿರಿಮೆ ಬಿಟ್ಟು ಸತತ ಸಾಧನೆ ಮಾಡಿದರೇ ಯಾವ ಎತ್ತರಕ್ಕಾದರೂ ಎರಬಹುದು ಎನ್ನುವುದಕ್ಕೆ ಲಾಲ್ ಬಹುದ್ದೂರ್ ಶಾಸ್ತ್ರೀಯವರ ಜೀವನವು ಒಂದು ಜ್ವಲಂತ ಸಾಕ್ಷಿಯಾಗಿದೆ.

Advertisement

0 comments:

Post a Comment

 
Top