ಕೊಪ್ಪಳ, ೦೮- ನಿರಂತರ ಧಾರ್ನಿಕ ಕಾರ್ಯಕ್ರಮಗಳು ಜರುಗುವ ಕೊಪ್ಪಳ ಧಾರ್ಮಿಕ ಕ್ಷೇತ್ರದ ತವರುರು ಎಂದು ಉಡುಪಿ ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಗಳು ಬಣ್ಣಿಸಿದರು. ಅವರು ನಗರದ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಠ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಕೊಪ್ಪಳ ಜಿಲ್ಲೆ ಹಾಗೂ ನಗರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತವೆ. ಚತುರಮಾಸವೂ ಸಹ ನಡೆಯುತ್ತದೆ. ಇಲ್ಲಿಯ ಜನರ ಧಾಮಿಕ ಭಾವನೆ ಭಗವಂತನಿಗೆ ಇಷ್ಡವಾದುದು. ಈ ಭೂಮಿ ಧಾರ್ಮಿಕತೆಯ ನೆಲೆಬಿಡು ಎಂದು ಹೇಳಿದರು. ಶ್ರೀಕೃಷ್ಣನ ಆಶಯ ಆಶರ್ದಗಳನ್ನು ಅಳವಡಿಸಿಕೊಂಡು ಪ್ರ
ತಿಯೋಬ್ಬರು ಸತ್ಯವನ್ನು ಅರಿತುಕೊಂಡು ನಡೆದಾಗ ಮಾತ್ರ ಮುಕ್ತಿ ಸಾಧ್ಯ. ಭಗವದ್ಗಿತೆಯಲ್ಲಿ ಸರ್ವವನ್ನು ಭಗವಂತನು ಹೇಳಿದ್ದಾನೆ. ಅದರ ಪಾಲನೆ ನಮ್ಮ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಶ್ರೀಕೃಷ್ಣ ವೇಷ ಭೂಷಣ ಸ್ಪರ್ಧೆ, ನೃತ್ಯ, ಹಾಡು ಜರುಗಿದವು.

0 comments:
Post a Comment