ಕೊಪ್ಪಳ -22-ತಾಲೂಕಿನ ಇರಕಲಗಡಾ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಇರಕಲ್‌ಗಡಾ ಗ್ರಾಮದ ಕೆರೆ ಹೂಳ ಎತ್ತು ಕಾಮಗಾರಿಯನ್ನು ಪ್ರಾರಂಭಿಸಲಾಯಿತು ಪೂಜೆ ನೆರರಿಸುವ ಮೂಲಕ ಗ್ರಾ.ಪಂ ಅಧ್ಯಕ್ಷರಾದ ದ್ಯಾಮವ್ವ ತಿಮ್ಮಣ್ಣ ವಂಕಲಕುಂಟಿ ರವರು ಚಾಲನೆ ನೀಡಿದರು ಈ ಸಂದರ್ಭದಲ್ಲಿ
ಮಾತನಾಡಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಲಲಿತಾ ಎಸ್. ಸುರಳ್ ರವರು ಗ್ರಾಮದಲ್ಲಿ ಒಟ್ಟು ೮೦೦ ರಿಂದ ೧೦೦೦ ಸಾವಿರ ಉದ್ಯೋಗ ಖಾತ್ರಿ ಕಾರ್ಡದಾರರು ಇದ್ದು ಬರಗಾಲ ನಿಮಿತ್ಯ ಎಲ್ಲರಿಗೂ ಕೆಲಸ ನೀಡಬೇಕಾಗಿದೆ ಮೇಲಾಧಿಕಾರಿಗಳ ಜೊತೆ ಮಾತನಾಡಿ ಎಲ್ಲರಿಗೂ ಕೆಲಸ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ದ್ಯಾಮವ್ವ ಟಿ ವಂಕಲಕುಂಟಿ, ಉಪಾಧ್ಯಕ್ಷರಾದ ಗಂಗಾಧರ ಕಾಮನೂರ, ಮುಖಂಡರಾದ ಸಂಗಮೇಶ ಬಾದವಾಡಗಿ, ರಮೇಶ ಪಾಟೀಲ್, ಗಂಗಾಧರಸ್ವಾಮಿ ಹಿರೇಮಠ, ರಾಯಪ್ಪ ಹಟ್ಟಿ, ಮಲ್ಲಪ್ಪ ಕೊಡದಾಳ, ರಮೇಶ ಬುಟಶಟ್ನಾಳ, ಶರಣಪ್ಪ ಮಡಿವಾಳರ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Subscribe to:
Post Comments (Atom)
0 comments:
Post a Comment