PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ.೨೨ (ಕ ವಾ) ಸಾಕ್ಷರ ಭಾರತ ಯೋಜನೆಯಡಿ ಪ್ರೇರಕರು, ಮುಖ್ಯಗುರುಗಳು ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಅನಕ್ಷರಸ್ಥರಿಗೆ ಶಿಕ್ಷಣದ ಜೊತೆ ಜೊತೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ ಹೇಳಿದರು.
      ಕೊಪ್ಪಳ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸಾಕ್ಷರತಾ ಭಾರತ ಯೋಜನೆಯಡಿ ಸಾಕ್ಷರ ಭಾರತ ಕಾರ್ಯಕ್ರಮದ ಅಂಗವಾಗಿ ಪ್ರೇರಕರು, ಮುಖ್ಯಗುರುಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಕ್ರಮ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
     ಅನಕ್ಷರತೆ ಇರುವೆಡೆಯಲ್ಲಿ ಕ
       ಸಾಕ್ಷರ ಭಾರತ ಯೋಜನೆ, ಬೆಂಗಳೂರಿನ ರಾಮಚಂದ್ರ ಬಡಿಗೇರ ಮಾತನಾಡಿ, ಅನಕ್ಷರತೆ ದೇಶಕ್ಕಂಟಿದ ಶಾಪವಾಗಿದ್ದು, ಇದರಿಂದ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಮಹಾತ್ಮಾ ಗಾಂಧೀಜಿ ಕೂಡಾ ಹೇಳಿದ್ದರು. ಈ ನಿಟ್ಟಿನಲ್ಲಿ ಸರ್ಕಾರವು ಹಲವಾರು ಸಾಕ್ಷರತಾ ಯೋಜನೆಗಳನ್ನು ಹಮ್ಮಿಕೊಂಡು, ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವತ್ತ ಹೊರಟಿದೆ.  ಸಾಕ್ಷರ ಭಾರತ ಕಾರ್ಯಕ್ರಮ ಇಂದು ಕೇವಲ ಕಾರ್ಯಕ್ರಮವಾಗಿರದೇ, ಜನಾಂದೋಲನವಾಗಿ ಮಾರ್ಪಟ್ಟಿದೆ. ಅಲ್ಲದೆ, ಅರಿವಿನೊಂದಿಗೆ ಅಕ್ಷರದ ಮೂಲಕ ಕ್ರಿಯಾತ್ಮಕ ಸಾಕ್ಷರತೆಯನ್ನು ಸಾಧ್ಯವಾಗಿಸಿದೆ. ಅನಕ್ಷರತೆ ಹೆಚ್ಚಾಗಿರುವ ದೇಶದ ೨೬ ರಾಜ್ಯಗಳ ೩೬೫ ಜಿಲ್ಲೆಗಳಲ್ಲಿ ಸಾಕ್ಷರ ಭಾರತ ಯೋಜನೆ ಇಂದು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಸಾಕ್ಷರರನ್ನು ಹೆಚ್ಚುಗೊಳಿಸುವುದು ಸಾಕ್ಷರ ಭಾರತ ಯೋಜನೆಯ ಗುರಿಯಾಗಿದೆ. ೧೯೭೧ ರಲ್ಲಿ ಕೇವಲ ಶೇ. ೩೮ ರಷ್ಟಿದ್ದ ದೇಶದ ಸಾಕ್ಷರತೆ ಪ್ರಮಾಣ ಇಂದು ಶೇ. ೬೮ ರಷ್ಟಾಗಿರುವುದು ಸಾಕ್ಷರತೆಯಲ್ಲಿನ ಪ್ರಗತಿಗೆ ಸಾಕ್ಷಿಯಾಗಿದೆ. ಕೊಪ್ಪಳ ತಾಲೂಕು ಶೇ. ೫೮.೫೩ ರಷ್ಟು ಸಾಕ್ಷರತೆ ಹೊಂದಿದ್ದು, ಗಂಗಾವತಿ -೫೩.೫೩, ಕುಷ್ಟಗಿ-೫೧.೬೨ ಹಾಗೂ ಯಲಬುರ್ಗಾ ತಾಲೂಕು ಶೇ. ೫೫.೬೩ ರಷ್ಟು ಸಾಕ್ಷರತೆ ಪ್ರಮಾಣವನ್ನು ಹೊಂದಿವೆ ಎಂದು ಮಾಹಿತಿ ನೀಡಿದ ಅವರು, ನವಸಾಕ್ಷರರನ್ನು ಸಮಾಜಕ್ಕೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಲೋಕ ಶಿಕ್ಷಣ ಕೇಂದ್ರಗಳ ಪ್ರೇರಕರು, ಮುಖ್ಯ ಗುರುಗಳು, ಪಂಚಾಯತ್ ಅಧಿಕಾರಿಗಳು ಸಾಮರಸ್ಯ, ಸಹಕಾರ, ಹೃದಯವಂತಿಕೆಯನ್ನು ಮೈಗೂಡಿಸಿಕೊಂಡು ಕಲಿಕಾ ವಾತಾವರಣ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.
     ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಕೆ. ತೊರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಭೀಮಯ್ಯ ದಾಸರ, ಸೋಮಶೇಖರ ತುಪ್ಪದ್ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್‌ಗಳ ಅಧಿಕಾರಿಗಳು, ಮುಖ್ಯಗುರುಗಳು, ಪ್ರೇರಕರು, ನವಸಾಕ್ಷರರು ಉಪಸ್ಥಿತರಿದ್ದರು.

ಲಿಕಾ ವಾತಾವರಣ ನಿರ್ಮಾಣ ಮಾಡಲು ಸ್ವಚ್ಛತೆ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರೇರಕರು, ಮುಖ್ಯಗುರುಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಮೊದಲು ಅನಕ್ಷರಸ್ಥರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವಂತಾಗಬೇಕು. ಸ್ವಚ್ಛತೆ ಕೂಡಾ ಸಾಕ್ಷರತೆಯ ಒಂದು ಭಾಗವೇ ಆಗಿರುವುದರಿಂದ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಕಲಿಕೆಯನ್ನು ಸುಲಭಗೊಳಿಸುತ್ತದೆ. ಸಾಕ್ಷರ ಭಾರತ ಯೋಜನೆಯಡಿ ಪ್ರತಿಯೊಬ್ಬ ಅನಕ್ಷರಸ್ಥನನ್ನು ಸಾಕ್ಷರರನ್ನಾಗಿಸಲು ಸರ್ಕಾರವು ಮಾಸಿಕ ೬೦೦ ರೂ.ಗಳನ್ನು ವ್ಯಯಿಸುತ್ತಿದೆ. ಸಾಕ್ಷರತಾ ಯೋಜನೆಯಡಿ ಜಿಲ್ಲೆಯಲ್ಲಿ ೭೭,೦೦೦ ಜನರನ್ನು ಸಾಕ್ಷರರನ್ನಾಗಿಸುವ ಗುರಿ ಹೊಂದಲಾಗಿತ್ತು. ಇದರಲ್ಲಿ ೭೩,೦೦೦ ಜನರನ್ನು ಅಕ್ಷರಸ್ಥರನ್ನಾಗಿಸಿ ಪ್ರಗತಿ ಸಾಧಿಸಲಾಗಿದೆ. ಅಲ್ಲದೆ, ಕೊಪ್ಪಳ ಜಿಲ್ಲೆಯಲ್ಲಿ ೧,೫೩,೫೯೮ ಗಂಡು, ೨,೧೩,೨೦೯ ಹೆಣ್ಣು ಸೇರಿದಂತೆ ಒಟ್ಟಾರೆ ೩,೬೬,೮೦೭ ಜನ ಅನಕ್ಷರಸ್ಥರಿದ್ದು, ಇವರನ್ನು ಸಾಕ್ಷರರನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.

Advertisement

0 comments:

Post a Comment

 
Top